ತಮಿಳುನಾಡು: ಕಸದ ತೊಟ್ಟಿಯಲ್ಲಿ 100 ಗ್ರಾಂ ಚಿನ್ನದ ನಾಣ್ಯವನ್ನು ಕಂಡು ಬೆರಗಾದ ಕೆಲಸಗಾರ್ತಿ! ಮಾಲೀಕರಿಗೆ ಹಿಂತಿರುಗಿಸಿದ್ದಕ್ಕೆ ಪೊಲೀಸರಿಂದ ಮೆಚ್ಚುಗೆ

Viral News: ಮೇರಿ ಅವರು ಸೋಮವಾರ ತಿರುವೊಟ್ಟಿಯುರ್​ ಬೀದಿಯಲ್ಲಿ ಕಸವನ್ನು ಬೇರ್ಪಡಿಸುತ್ತಿರವಾಗ ನಾಣ್ಯದ ಶಬ್ದ ಕೇಳಿಸಿತು. ಚೀಲದಲ್ಲಿ ಚಿನ್ನದ ನಾಣ್ಯಗಳಿದ್ದವು. ಪೊಲೀಸರ ಸಹಾಯದಿಂದ ಚಿನ್ನದ ನಾಣ್ಯವನ್ನು ಮಾಲೀಕರಿಗೆ ಹಿಂತಿರುಗಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ತಮಿಳುನಾಡು: ಕಸದ ತೊಟ್ಟಿಯಲ್ಲಿ 100 ಗ್ರಾಂ ಚಿನ್ನದ ನಾಣ್ಯವನ್ನು ಕಂಡು ಬೆರಗಾದ ಕೆಲಸಗಾರ್ತಿ! ಮಾಲೀಕರಿಗೆ ಹಿಂತಿರುಗಿಸಿದ್ದಕ್ಕೆ ಪೊಲೀಸರಿಂದ ಮೆಚ್ಚುಗೆ
ಸಂಗ್ರಹ ಚಿತ್ರ
Edited By:

Updated on: Oct 20, 2021 | 10:58 AM

ಕಸದ ತೊಟ್ಟಿಯಲ್ಲಿ ಸಿಕ್ಕ 100 ಗ್ರಾಂ ಚಿನ್ನದ ನಾಣ್ಯವನ್ನು ಹಿಂತಿರುಗಿಸಿದ ಬಳಿಕ ತಮಿಳುನಾಡಿನ ಕೆಲಸಗಾರ್ತಿಯ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಮೇರಿ ಅವರು ಸೋಮವಾರ ತಿರುವೊಟ್ಟಿಯುರ್​ ಬೀದಿಯಲ್ಲಿ ಕಸವನ್ನು ಬೇರ್ಪಡಿಸುತ್ತಿರವಾಗ ನಾಣ್ಯದ ಶಬ್ದ ಕೇಳಿಸಿತು. ಚೀಲದಲ್ಲಿ ಚಿನ್ನದ ನಾಣ್ಯಗಳಿದ್ದವು. ಅದನ್ನು ನೋಡಿದ ಮೇರಿ ಆಶ್ಚರ್ಯಚಕಿತಳಾಗಿದ್ದಾಳೆ. ಬಳಿಕ 100 ಗ್ರಾಂ ನಾಣ್ಯವನ್ನು ಪೊಲಿಸರಿಗೆ ಒಪ್ಪಿಸಲು ತೀರ್ಮಾನಿಸಿದ್ದಾಳೆ.

ಏತನ್ಮಧ್ಯೆ ತಿರುವೊಟ್ಟಿಯುರ್​ನ ಗಣೇಶ್ ರಾಮನ್ ಅವರು, ಮನೆಯಿಂದ 100 ಗ್ರಾಂ ಚಿನ್ನದ ನಾಣ್ಯ ನಾಪತ್ತೆಯಾಗಿದೆ ಎಂದು ದೂರು ದಾಖಲಿಸಿದ್ದರು. ಚಿನ್ನದ ನಾಣ್ಯವನ್ನು ಚಿಕ್ಕ ಚೀಲದಲ್ಲಿ ಸುತ್ತಿ ತನ್ನ ಹಾಸಿಗೆಯ ಕೆಳಗೆ ಇಟ್ಟುಕೊಂಡಿದ್ದೆ ಎಂಬ ಮಾಹಿತಿಯನ್ನು ಪೊಲೀಸರ ಬಳಿ ಹಂಚಿಕೊಂಡಿದ್ದರು. ನಾಣ್ಯವು ಅದೇಗೋ ಕಸದ ಬುಟ್ಟಿಗೆ ಸೇರಿ ನಾಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಎಲ್ಲಾ ರೀತಿಯ ಪರಿಶೀಲನೆಗಾಗಿ ಪೊಲೀಸರು ಹತ್ತಿರದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಕೆಲಸದಾಕೆ ಮೇರಿ ಮತ್ತು ಮಾಲೀಕರನ್ನು ಪೊಲೀಸ್ ಠಾಣೆಗೆ ಕರೆಸಿ ಮಾಲೀಕರಿಗೆ ನಾಣ್ಯವನ್ನು ಹಿಂತಿರುಗಿಸಲಾಗಿದೆ. ಪೊಲೀಸರು ಮೇರಿ ಅವರ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡಿದ್ದಾರೆ. ಏಕೆಂದರೆ ಜೀವನ ಸಾಗಿಸಲು ಕಷ್ಟಪಡುತ್ತಿರುವ ಸಂದರ್ಭದಲ್ಲಿಯೂ ಸಹ ಅವರು ನಾಣ್ಯವನ್ನು ತಮ್ಮ ಬಳಿ ಇಟ್ಟುಕೊಳ್ಳುವ ಯೋಚನೆ ಮಾಡಿಲ್ಲ ಎಂದು ಮೇರಿ ಪ್ರಾಮಾಣಿಕತೆಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ:

Viral News: ರೆಸ್ಟೋರೆಂಟ್​ನಲ್ಲಿ ಬರೋಬ್ಬರಿ 38 ಲಕ್ಷ ರೂ. ಖರ್ಚು ಮಾಡಿ ನಾಲ್ವರ ಡಿನ್ನರ್ ಪಾರ್ಟಿ! ಬಿಲ್​ ಇಲ್ಲಿದೆ ನೋಡಿ

Viral News: ಮನೆಯ ಹಿಂಭಾಗದಲ್ಲಿ 90ಕ್ಕೂ ಹೆಚ್ಚು ಹಾವಿನ ಮರಿಗಳನ್ನು ಕಂಡು ಬೆಚ್ಚಿಬಿದ್ದ ಮಹಿಳೆ!