Viral News: ರೆಸ್ಟೋರೆಂಟ್​ನಲ್ಲಿ ಬರೋಬ್ಬರಿ 38 ಲಕ್ಷ ರೂ. ಖರ್ಚು ಮಾಡಿ ನಾಲ್ವರ ಡಿನ್ನರ್ ಪಾರ್ಟಿ! ಬಿಲ್​ ಇಲ್ಲಿದೆ ನೋಡಿ

ನಾಲ್ವರು ಸೇರಿ ಆರ್ಡರ್ ಮಾಡಿದ 22 ವಿವಿಧ ಖಾದ್ಯಗಳನ್ನು ಬಿಲ್​ನಲ್ಲಿ ನೋಡಬಹುದು. ವಿವಿಧ ಆಹಾರಕ್ಕೆ ನೀಡುವ ಹಣ ನೋಡಿ ನೆಟ್ಟಿಗರು ಕಂಗಾಲಾಗಿದ್ದಾರೆ.

Viral News: ರೆಸ್ಟೋರೆಂಟ್​ನಲ್ಲಿ ಬರೋಬ್ಬರಿ 38 ಲಕ್ಷ ರೂ. ಖರ್ಚು ಮಾಡಿ ನಾಲ್ವರ ಡಿನ್ನರ್ ಪಾರ್ಟಿ! ಬಿಲ್​ ಇಲ್ಲಿದೆ ನೋಡಿ
ರೆಸ್ಟೋರೆಂಟ್​ನಲ್ಲಿ ಬರೋಬ್ಬರಿ 38 ಲಕ್ಷ ರೂ. ಖರ್ಚು ಮಾಡಿ ನಾಲ್ವರ ಡಿನ್ನರ್ ಪಾರ್ಟಿ!
Follow us
TV9 Web
| Updated By: shruti hegde

Updated on: Oct 14, 2021 | 11:59 AM

ಸಾಮಾನ್ಯವಾಗಿ ಊಟಕ್ಕೆಂದು ರೆಸ್ಟೋರೆಂಟ್​ಗೆ ಹೋದರೆ ಮಹಾ ಅಂದ್ರೂ ಎಷ್ಟು ಖರ್ಚಾಗಬಹುದು? ಎಂದಾದರೂ ರೆಸ್ಟೋರೆಂಟ್​ನಲ್ಲಿ ಡಿನ್ನರ್​ಗಾಗಿ ಲಕ್ಷಾಂತರ ರೂಪಾಯಿ ಸುರಿದ ಸುದ್ದಿಯನ್ನ ಕೇಳಿದ್ದೀರಾ? ಇದೀಗ ವೈರಲ್ ಆದ ಸುದ್ದಿ ಜನರನ್ನು ಬೆರಗಾಗುವಂತೆ ಮಾಡಿದೆ. ನಾಲ್ವರು ಸೇರಿ ಲಂಡನ್​ನ ರೆಸ್ಟೋರೆಂಟ್​ನಲ್ಲಿ ಬರೋಬ್ಬರಿ 38 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ವಿಶೇಷ ಎಂದರೆ ವಿಶ್ವ ಪ್ರಸಿದ್ಧತೆ ಪಡೆದ ಬಾಣಸಿಗನ ರೆಸ್ಟೋರೆಂಟ್​ ಆಗಿದ್ದು, ಒಟ್ಟೂ ಬಿಲ್​ನ ಸ್ಕ್ರೀನ್ ಶಾಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ನಾಲ್ವರು ಸೇರಿ ಆರ್ಡರ್ ಮಾಡಿದ 22 ವಿವಿಧ ಖಾದ್ಯಗಳನ್ನು ಬಿಲ್​ನಲ್ಲಿ ನೋಡಬಹುದು. ಎಲ್ಲವೂ ಸಹ ಹೈ ರೇಟ್​ನ ತಿಂಡಿಗಳು. ಈ ವಿವಿಧ ಆಹಾರಕ್ಕೆ ನೀಡುವ ಹಣ ನೋಡಿ ನೆಟ್ಟಿಗರು ಕಂಗಾಲಾಗಿದ್ದಾರೆ. ಜೈಂಟ್ ಟೊಮಾಹಾಕ್ ಸ್ಟೀಕ್, ಬರ್ಗರ್, ಪ್ರಾನ್ ಟೆಂಪುರಾ ರೋಲ್ಸ್ ಎಂಬೆಲ್ಲಾ ತಿಂಡಿಗಳ ಹೆಸರು ಬಿಲ್​ಗಳಲ್ಲಿವೆ. ಬಿಲ್​ನಲ್ಲಿದ್ದ ಒಟ್ಟು ಮೌಲ್ಯವನ್ನು ನೋಡಿ ಕೆಲವರು ಆಶ್ಚರ್ಯಗೊಂಡರು. ಇನ್ನು ಕೆಲವರು, ಇದು ಲಂಡನ್​ನಂತಹ ನಗರದಲ್ಲಿ ನಿರೀಕ್ಷಿಸಬಹುದು ಎಂದು ಅಭಿಪ್ರಾಯ ತಿಳಿಸಿದರು.

ನುಸ್ರೆಟ್ ಗೋಕೀ ವಿಶ್ವ ಪ್ರಸಿದ್ಧ ಬಾಣಸಿಗ. ಜಗತ್ತು ಅವರನ್ನು ಸಾಲ್ಟ್ ಬೇ ಎಂದು ಕರೆಯುತ್ತಿದೆ. ಅವರು ವಿಶೇಷವಾಗಿ ನಾನ್ವೆಜ್ ವಿತ್ ಸಾಲ್ಟ್ ಜತೆಗೆ ಮಸಾಲೆ ಪದಾರ್ಥಗಳನ್ನು ಸೇರಿಸಿ ತಯಾರಿಸುವ ಹೊಸ ತಂತ್ರವು ಇಂಟರ್ನೆಟ್​ನಲ್ಲಿ ವೈರಲ್ ಆಗುತ್ತಿರುತ್ತವೆ.

ಅವರ ವಿಶಿಷ್ಟವಾದ ಆಹಾರ ಶೈಲಿ ರೆಸ್ಟೋರೆಂಟ್ ಗ್ರಾಹಕರಿಗೆ ರುಚಿ ಹೆಚ್ಚಿಸುತ್ತಿದೆ. ಪ್ರತೀ ವಾರ ಟ್ವಿಟರ್​, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ನೋಡಬಹುದು. ನುಸ್ರೆಟ್ ತನ್ನ ಸಾಮಾಜಿಕ ಮಾಧ್ಯಮ ಹಿಂಬಾಲಕರಿಗೆ ಹೊಸ ಹೊಸ ವಿಷಯಗಳನ್ನು ತಿಳಿಸುತ್ತಲೇ ಇರುತ್ತಾರೆ. ಅವುಗಳಲ್ಲಿ ಹೆಚ್ಚಿನವು, ಮಾಂಸಗಳನ್ನು ಕತ್ತರಿಸುತ್ತಿರುವ ದೃಶ್ಯ ಮತ್ತು ಮಸಾಲೆ ಸೇರಿಸುತ್ತಿರುವ ದೃಶ್ಯವನ್ನು ನೋಡಬಹುದು.

ನುಸ್ರೆಟ್ ಸ್ಟೀಕ್​ಹೌಸ್​ನಲ್ಲಿ ನಾಲ್ವರ ಊಟ ಮಾಡಿದ ಬಳಿಕ ಬಿಲ್ ಒಟ್ಟು 38 ಲಕ್ಷವಾಗಿತ್ತು. ಬಿಲ್ ನೋಡಿ ಕೆಲವರು ಆಕ್ರೋಶ ಹೊರಹಾಕಿದ್ದಾರೆ, ಇನ್ನು ಕೆಲವರು ಆಶ್ಚರ್ಯಗೊಂಡು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಇದನ್ನೂ ಓದಿ:

Viral News: ಶಾಲೆಯ ಮಕ್ಕಳೊಂದಿಗೆ ಸ್ನೇಹ ಬೆಳೆಸಿದ ಕಾಡು ಗಿಳಿ; ಹೃದಯಸ್ಪರ್ಶಿ ಕಥೆಯಿದು

Viral News: ನಾಪತ್ತೆಯಾಗಿದ್ದು ತಾನೇ ಎಂದು ತಿಳಿಯದೆ ಕಾಡಿನಲ್ಲಿ ತನ್ನನ್ನೇ ಹುಡುಕಾಡಿದ ಕುಡುಕ!