Viral News: ಬರೋಬ್ಬರಿ 60 ಕೆಜಿ ಚಿನ್ನದ ಆಭರಣ ತೊಟ್ಟು ಕಾರಿನಲ್ಲಿ ನಗುತ್ತಾ ಕುಳಿತ ವಧು!

TV9 Digital Desk

| Edited By: shruti hegde

Updated on: Oct 14, 2021 | 9:25 AM

ಚೀನಾದ ವಧು ಮದುವೆಯ ದಿನದಂದು ಬರೋಬ್ಬರಿ 60 ಕೆಜಿ ಚಿನ್ನದ ಆಭರಣ ತೊಟ್ಟು ಅತಿಥಿಗಳನ್ನು ಬೆರಗುಗೊಳಿಸಿದ್ದಾಳೆ. ವರನಿಂದ ಉಡುಗೊರೆಯಾಗಿ ಪಡೆದ ಚಿನ್ನದ ಆಭರಣಗಳನ್ನು ಧರಿಸಿದ್ದಾಳೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.

Viral News: ಬರೋಬ್ಬರಿ 60 ಕೆಜಿ ಚಿನ್ನದ ಆಭರಣ ತೊಟ್ಟು ಕಾರಿನಲ್ಲಿ ನಗುತ್ತಾ ಕುಳಿತ ವಧು!
ಬರೋಬ್ಬರಿ 60 ಕೆಜಿ ಚಿನ್ನದ ಆಭರಣ ತೊಟ್ಟು ಕಾರಿನಲ್ಲಿ ನಗುತ್ತಾ ಕುಳಿತ ವಧು!

Follow us on

ಕೇವಲ ಭಾರತೀಯರಿಗಲ್ಲ, ಜಗತ್ತಿನಾದ್ಯಂತ ಮಹಿಳೆಯರಿಗೆ ಚಿನ್ನದ ಆಭರಣ ಎಂದರೆ ಬಹಳ ಇಷ್ಟ ಎಂದರೆ ತಪ್ಪಾಗಲಾರದು. ಅದರಲ್ಲಿಯೂ ವಿಶೇಷವಾಗಿ ಮದುವೆ ಸಮಾರಂಭಗಳಲ್ಲಿ ಚಿನ್ನ ಮಂಗಳಕರವೆಂದೂ ಪರಿಗಣಿಸಲಾಗಿದೆ. ಇದೀಗ ವೈರಲ್ ಆದ ಸುದ್ದಿಯೆಂದರೆ, ಚೀನಾದ ವಧು ಮದುವೆಯ ದಿನದಂದು ಬರೋಬ್ಬರಿ 60 ಕೆಜಿ ಚಿನ್ನದ ಆಭರಣ ತೊಟ್ಟು ಅತಿಥಿಗಳನ್ನು ಬೆರಗುಗೊಳಿಸಿದ್ದಾಳೆ. ವರನಿಂದ ಉಡುಗೊರೆಯಾಗಿ ಪಡೆದ ಚಿನ್ನದ ಆಭರಣಗಳನ್ನು ಧರಿಸಿದ್ದಾಳೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.

ವಧು ಚಿನ್ನವನ್ನು ಧರಿಸಿ ಕುಳಿತಿರುವ ಚಿತ್ರವೊಂದು ಫುಲ್ ವೈರಲ್ ಆಗಿದೆ. ವಧು, ಮದುವೆಯ ಉಡುಗೆ ತೊಟ್ಟು ಕುಳಿತಿದ್ದಾಳೆ. ಜತೆಗೆ ಕೈಗಳಲ್ಲಿ ಗುಲಾಬಿ ಹೂಗಳನ್ನು ಹಿಡಿದಿದ್ದಾಳೆ. ಇದರ ಜತೆಗೆ ಭಾರವಾದ ಬರೋಬ್ಬರಿ 60 ಕೆಹಿ ಚಿನ್ನದ ಆಭರಣಗಳನ್ನು ಧರಿಸಿ ಆಕೆ ನಗುತ್ತಾ ಕುಳಿತಿರುವ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಮದುವೆಯ ಸ್ಥಳಕ್ಕೆ ಆಕೆ ಆಗಮಿಸುತ್ತಿದ್ದಂತೆಯೇ ಅಥಿತಿಗಳೆಲ್ಲಾ ಆಕೆಯನ್ನು ಆಶ್ಚರ್ಯದಿಂದ ನೋಡಿದ್ದಾರೆ. ಅಷ್ಟೊಂದು ಭಾರವಾದ ಚಿನ್ನವನ್ನು ಆಕೆ ಹೊತ್ತು ನಡೆದು ಬರುತ್ತಿರುವುದು ಅತಿಥಿಗಳನ್ನು ಬೆರಗುಗೊಳಿಸಿದೆ. ಮುಗುಳ್ನಗುತ್ತಾ ವಧು, ಮದುವೆಯ ಸಮಾರಂಭವನ್ನು ಮುಂದುವರೆಸುವಂತೆ ಕೇಳಿಕೊಂಡಿದ್ದಾಳೆ. ವರದಿಯ ಪ್ರಕಾರ, ವರ ಶ್ರೀಮಂತ ಕುಟುಂಬದಿಂದ ಬಂದವನು, ವಧುವಿಗೆ 60 ಚಿನ್ನದ ನೆಕ್ಲೆಸ್ ನೀಡಲಾಯಿತು ಜತೆಗೆ ಎರಡು ದೊಡ್ಡದಾದ ಬಳಲೆಗಳನ್ನು ವಧುವಿಗೆ ನೀಡಲಾಗಿದೆ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ:

Viral News: ಶಾಲೆಯ ಮಕ್ಕಳೊಂದಿಗೆ ಸ್ನೇಹ ಬೆಳೆಸಿದ ಕಾಡು ಗಿಳಿ; ಹೃದಯಸ್ಪರ್ಶಿ ಕಥೆಯಿದು

Viral News: ನಾಪತ್ತೆಯಾಗಿದ್ದು ತಾನೇ ಎಂದು ತಿಳಿಯದೆ ಕಾಡಿನಲ್ಲಿ ತನ್ನನ್ನೇ ಹುಡುಕಾಡಿದ ಕುಡುಕ!

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada