ಹೈದರಾಬಾದ್​ನಲ್ಲಿ ಸ್ಥಾಪನೆಯಾದ ಪರಿಸರ ಸ್ನೇಹಿ ದುರ್ಗಾದೇವಿ ವಿಗ್ರಹ; ಫೋಟೋ ಇಲ್ಲಿದೆ

Viral News: ನವರಾತ್ರಿ ವಿಶೇಷದ ಪ್ರಯುಕ್ತ ಪರಿಸರ ಸ್ನೇಹಿ ದುರ್ಗಾದೇವಿಯ ವಿಗ್ರಹವನ್ನು ಸ್ಥಾಪಿಸಲು ಸ್ಥಳೀಯರು ಯೋಚಿಸಿದ್ದು, ಸುಮಾರು 45 ಅಡಿ ವಿಗ್ರಹವನ್ನು ಸ್ಥಾಪಿಸಲಾಗಿದೆ.

ಹೈದರಾಬಾದ್​ನಲ್ಲಿ ಸ್ಥಾಪನೆಯಾದ ಪರಿಸರ ಸ್ನೇಹಿ ದುರ್ಗಾದೇವಿ ವಿಗ್ರಹ; ಫೋಟೋ ಇಲ್ಲಿದೆ
ಪರಿಸರ ಸ್ನೇಹಿ ದುರ್ಗಾದೇವಿ ವಿಗ್ರಹ

ಹೈದರಾಬಾದ್​ನಲ್ಲಿ ಸಮುದಾಯದ ಪಂಡಲ್​ನಲ್ಲಿ ಪರಿಸರ ಸ್ನೇಹಿ ದುರ್ಗಾ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. ವಿಗ್ರಹ ಸುಮಾರು 45 ಅಡಿ ಎತ್ತರವಾಗಿದ್ದು, ದೈತ್ಯಾಕಾರದ ವಿಗ್ರಹವಾಗಿದೆ. ನವರಾತ್ರಿ ವಿಶೇಷದ ಪ್ರಯುಕ್ತ ಪರಿಸರ ಸ್ನೇಹಿ ದುರ್ಗಾದೇವಿಯ ವಿಗ್ರಹವನ್ನು ಸ್ಥಾಪಿಸಲು ಸ್ಥಳೀಯರು ಯೋಚಿಸಿದ್ದು, ಹುಲ್ಲು, ಮಣ್ಣು, ಮರಳು ಮತ್ತು ವಾಟರ್ ಪೇಂಟ್​ಗಳನ್ನು ಬಳಸಿ ವಿಗ್ರಹವನ್ನು ತಯಾರಿಸಲಾಗಿದೆ. ನವ ದುರ್ಗೆಯರು ನಿಂತಿರುವ ಫೊಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ.

22 ಮಂದಿ ಕೆಲಸಗಾರರು ಒಟ್ಟು 35 ದಿನಗಳಿಂದ ಕೆಲಸ ಮಾಡಿದ್ದಾರೆ. ವಿಗ್ರಹವನ್ನು ಹುಲ್ಲು, ಮಣ್ಣು, ಕೆಂಪು ಮರಳು ಮತ್ತು ವಾಟರ್ ಪೇಂಟ್ ಬಳಸಿ ಸ್ಥಾಪಿಸಲಾಗಿದೆ ಎಂದು ಪರಿಸರ ಸ್ನೇಹಿ ದುರ್ಗಾದೇವಿಯ ವಿಗ್ರಹ ಸ್ಥಾಪನೆ ಆಯೋಜಕರಾದ ಗುಲಾಬ್ ಶ್ರಿನಿವಾಸ್ ಗಂಗಾಪುತ್ರ ಎಎನ್ಐ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.

ಪರಿಸರ ಸ್ನೇಹಿ ದುರ್ಗಾ ದೇವಿಯ ವಿಗ್ರಹ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಹೊಸ ಪ್ರಯೋಗಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 7ರಿಂದ ಆರಂಭವಾದ ನವರಾತ್ರಿ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಇದನ್ನೂ ಓದಿ:

Durga Puja: ನವರಾತ್ರಿಯ ಆರನೇ ದಿನ ಕೆಂಪು ಬಣ್ಣ ಶ್ರೇಷ್ಠ; ಈ ವಿಶೇಷ ಶೈಲಿಯ ದಿರಿಸುಗಳನ್ನು ನೀವು ಧರಿಸಬಹುದು

ಶಿಲ್ಪಾ ಶೆಟ್ಟಿ ಮನೆಯಲ್ಲಿ ನವರಾತ್ರಿ ವೈಭವ; ಮಕ್ಕಳಿಗೆ ಕಲಿಸುತ್ತಿರುವ ಪಾಠ ಎಂಥದ್ದು?

Read Full Article

Click on your DTH Provider to Add TV9 Kannada