275 ಐಸ್​ಕ್ರೀಂ ಕಡ್ಡಿಗಳನ್ನು ಬಳಸಿ ದುರ್ಗಾದೇವಿಯ ಕಲಾಕೃತಿ ತಯಾರಿಸಿದ ಒಡಿಶಾ ಕಲಾವಿದ

Viral News: ದುರ್ಗಾ ದೇವಿಯನ್ನು 255 ಐಸ್ ಕ್ರೀಂ ಕಡ್ಡಿಗಳನ್ನು ಬಳಸಿ ಕಲಾಕೃತಿ ರಚಿಸಲು ನಾನು ರಚಿಸಿದ್ದೇನೆ. ನಾವು ಕೊವಿಡ್ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ನವರಾತ್ರಿಯನ್ನು ಆಚರಿಸುತ್ತೇವೆ ಎಂದು ನಾಯಕ್ ಹೇಳಿದ್ದಾರೆ.

275 ಐಸ್​ಕ್ರೀಂ ಕಡ್ಡಿಗಳನ್ನು ಬಳಸಿ ದುರ್ಗಾದೇವಿಯ ಕಲಾಕೃತಿ ತಯಾರಿಸಿದ ಒಡಿಶಾ ಕಲಾವಿದ
ಐಸ್​ ಕ್ರೀಂ ಕಡ್ಡಿಗಳಿಂದ ತಯಾರಾದ ದುರ್ಗಾ ದೇವಿಯ ಕಲಾಕೃತಿ

ನವರಾತ್ರಿಯ ವಿಶೇಷವಾಗಿ ಒಡಿಶಾ ಮೂಲದ ಚಿಕಣಿ ಕಲಾವಿದ 275 ಐಸ್ ಕ್ರೀಂ ಕಡ್ಡಿಗಳನ್ನು ಬಳಸಿ ದುರ್ಗಾ ದೇವಿಯ ಕಲಾಕೃತಿಯನ್ನು  ತಯಾರಿಸಿದ್ದಾರೆ. ಈ ಕಲಾಕೃತಿಯನ್ನು ಪೂರ್ಣಗೊಳಿಸಲು ನನಗೆ 6 ದಿನ ಬೇಕಾಯಿತು ಎಂದು ಕಲಾವಿದ ಬಿಸ್ವಜಿತ್​ ನಾಯಕ್ ಮಂಗಳವಾರ ಎಎನ್ಐ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. ಐಸ್ ಕ್ರೀಂ ಕಡ್ಡಿಗಳನ್ನು ಬಳಸಿ ದುರ್ಗಾ ದೇವಿಯ ಕಲಾಕೃತಿಯನ್ನು ನಾನು ರಚಿಸಿದ್ದೇನೆ. ನಾವು ಕೊವಿಡ್ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ನವರಾತ್ರಿಯನ್ನು ಆಚರಿಸುತ್ತೇವೆ ಎಂದು ನಾಯಕ್ ಎಎನ್​ಐ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಭುವನೇಶ್ವರ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ) ಸೆಪ್ಟೆಂಬರ್​ನಲ್ಲಿ ನೀಡಿದ ಮಾರ್ಗಸೂಚಿಯ ಪ್ರಕಾರ, ಕೊವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ದುರ್ಗಾಪೂಜೆಯ ಆಚರಣೆಗೆ ಸಂಬಂಧಿಸಿದಂತೆ, ವಿಗ್ರಹದ ಗಾತ್ರ ನಾಲ್ಕು ಅಡಿಗಿಂತ ಕಡಿಮೆ ಇರಬೇಕು ಜತೆಗೆ ಜನ ಸಂಖ್ಯೆಯನ್ನು ಏಳು ಜನರಿಗೆ ಸೀಮಿತಗೊಳಿಸಲಾಗಿದೆ.

ದುರ್ಗಾ ಪೂಜೆಯ ಸಮಯದಲ್ಲಿ ಯಾವುದೇ ಸಾರ್ವಜನಿಕ ಸಭೆಗೆ ಅನುಮತಿ ನೀಡಲಾಗಿಲ್ಲ. ಮತ್ತು ಒಳಾಂಗಣದಲ್ಲಿಯೇ ಪೂಜೆಯನ್ನು ನಡೆಸಬೇಕು ಎಂದು ಬಿಎಂಸಿ ಆದೇಶಿಸಿದೆ. ಮಂಟಪದಲ್ಲಿ ಭಕ್ತರಿಗೆ ಸಾರ್ವಜನಿಕ ವೀಕ್ಷಣೆ ಅಥವಾ ದರ್ಶನ ಇರಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:

Viral Video: ನವರಾತ್ರಿ ದಿನವೇ 2 ತಲೆ, 3 ಕಣ್ಣುಗಳಿರುವ ಕರು ಜನನ; ದುರ್ಗೆಯ ಅವತಾರವೆಂದು ಪೂಜಿಸಿದ ಜನರು!

Navratri 2021: ನವರಾತ್ರಿ ವೇಳೆ ನಿಮ್ಮ ರಾಶಿಯ ಪ್ರಕಾರ ಯಾವ ಹೂವನ್ನು ದುರ್ಗಾ ಮಾತೆಗೆ ಅರ್ಪಿಸಬೇಕು?

Read Full Article

Click on your DTH Provider to Add TV9 Kannada