
ತೆಲಂಗಾಣ, ಡಿಸೆಂಬರ್ 05: ಪುಟ್ಟ ಮಕ್ಕಳನ್ನು (little kids) ಎಷ್ಟು ಜಾಗರೂಕರಾಗಿ ನೋಡಿಕೊಂಡ್ರು ಸಾಲದು. ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿ (Mahabubabad district of Telangana) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮೂರು ವರ್ಷದ ಮಗುವೊಂದು ಆಕಸ್ಮಿಕವಾಗಿ ಕಟ್ಟಡದಿಂದ ಬಿದಿದ್ದು, ಪವಾಡ ಸದೃಶ್ಯ ಎನ್ನುವಂತೆ ಅಪಾಯದಿಂದ ಪಾರಾಗಿದೆ.
ಕೇಸಮುದ್ರಂ ಮಂಡಲದ ಗಾರ್ನಿ ಥಂಡಾದ ಬಾನೋತ್ ಗಣೇಶ್ ಮತ್ತು ಕಲ್ಯಾಣಿ ದಂಪತಿಯ ಮೂರು ವರ್ಷದ ಮಗು ಗ್ರಿತೀಶ್ ಎನ್ನಲಾಗಿದೆ. ಕಟ್ಟಡದ ಮೇಲೆ ಆಟವಾಡುತ್ತಿದ್ದ ಮಗುವು ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿದೆ. ಆದರೆ ಕೆಳಗೆ ಟೆಂಟ್ ಹಾಕಲಾಗಿದ್ದು, ಅದರ ಮೇಲೆ ಬಿದ್ದ ಕಾರಣ ಮಗುವಿಗೆ ಯಾವುದೇ ಗಾಯಗಳಾಗಿಲ್ಲ, ಪ್ರಾಣಪಾಯದಿಂದ ಪಾರಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಚಾಟ್ಜಿಪಿಟಿ ಬಳಸಿ ವಂಚಕನಿಗೇ ಮಂಕುಬೂದಿ ಎರಚಿದ ವ್ಯಕ್ತಿ; ಹೀಗೊಂದು ಮಾದರಿ ಪ್ರಕರಣ
ಮಗುವು ಬೀಳುತ್ತಿದ್ದಂತೆ ಸ್ಥಳೀಯರು ಗಮನಿಸಿದ್ದು, ತಕ್ಷಣವೇ ಯಾವುದೇ ತೊಂದರೆಯಾಗದಂತೆ ಮಗುವನ್ನು ರಕ್ಷಿಸಿದ್ದಾರೆ. ಅಯ್ಯಪ್ಪ ಪೂಜೆಗಾಗಿ ಹಾಕಲಾಗಿದ್ದ ಟೆಂಟ್ ಮೇಲೆ ಬಿದ್ದಿದರಿಂದ ಮಗುವಿನ ಜೀವ ಉಳಿಯಿತು. ಕಂದಮ್ಮನನ್ನು ರಕ್ಷಿಸಿದ್ದು ಅಯ್ಯಪ್ಪ ಸ್ವಾಮಿ ಎಂದು ಸ್ಥಳೀಯರು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:40 pm, Fri, 5 December 25