Viral News: ಈ ಯುವತಿಗೆ ದಿನಕ್ಕೆ 12 ಸಾವಿರ ಬಾರಿ ಸೀನು ಬರುತ್ತದೆ, ಏನಿದು ವಿಚಿತ್ರ ಕಾಯಿಲೆ?

|

Updated on: Dec 07, 2023 | 1:59 PM

ಅಮೆರಿಕದ ಟೆಕ್ಸಾಸ್‌ನಲ್ಲಿ ಕ್ಯಾಟ್ಲಿನ್ ಥಾರ್ನ್ಲಿ(20) ಸೀನುವ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈಕೆಯ ಈ ಕಾಯಿಲೆ ಎಷ್ಟು ವಿಚಿತ್ರವೆಂದರೆ ಕೆಲವೊಮ್ಮೆ ಅವಳು ದಿನಕ್ಕೆ 12 ಸಾವಿರ ಬಾರಿ ಸೀನುತ್ತಾಳೆ.

Viral News: ಈ ಯುವತಿಗೆ ದಿನಕ್ಕೆ 12 ಸಾವಿರ ಬಾರಿ ಸೀನು ಬರುತ್ತದೆ, ಏನಿದು ವಿಚಿತ್ರ ಕಾಯಿಲೆ?
ಸಾಂದರ್ಭಿಕ ಚಿತ್ರ
Image Credit source: Pinterest
Follow us on

ಸೀನುವುದನ್ನು ಯಾವುದೇ ಕಾಯಿಲೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಇದು ಪ್ರತಿಯೊಬ್ಬರಲ್ಲೂ ಸಾಮಾನ್ಯವಾಗಿರುತ್ತವೆ. ಕೆಲವೊಮ್ಮೆ ಶೀತವಾದಾಗ ಅತಿಯಾಗಿ ಸೀನುವುದುಂಟು. ಇದಲ್ಲದೇ ಮನೆ ಸ್ವಚ್ಛಗೊಳಿಸುವಾಗ, ಕಸ,ಧೂಳಿನಿಂದಲೂ ಸೀನು ಬರುತ್ತದೆ. ಆದ್ದರಿಂದ ಸೀನುವುದನ್ನು ಯಾರೂ ಕೂಡ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಅಮೆರಿಕದ ಕ್ಯಾಟ್ಲಿನ್ ಥಾರ್ನ್ಲಿ(20) ಎಂಬ ಯುವತಿಯೊಬ್ಬಳಿಗೆ ಸೀನುವಿಕೆಯೇ ದೊಡ್ಡ ಕಾಯಿಲೆಯಂತೆ ಪರಿಣಮಿಸಿದೆ. ಸಾಮಾನ್ಯವಾಗಿ ದಿನಕ್ಕೆ ಹತ್ತರಿಂದ ಹೆಚ್ಚೆದ್ದರೆ ಇಪ್ಪತ್ತು ಸಲ ಸೀನು ಬರಬಹುದು. ಆದರೆ ಈ ಯುವತಿಗೆ ದಿನಕ್ಕೆ 12 ಸಾವಿರ ಬಾರಿ ಸೀನು ಬರುತ್ತದೆ. ಲೇಡಿಬೈಬಲ್ ಎಂಬ ವೆಬ್‌ಸೈಟ್‌ನ ವರದಿಯ ಪ್ರಕಾರ, ಕೈಟ್ಲಿನ್ ಕೆಲವೊಮ್ಮೆ ನಿದ್ದೆ ಮಾಡಲು ಸಾಧ್ಯವಾಗದಂತೆ ಇಡೀ ರಾತ್ರಿ ಸೀನುತ್ತಲೇ ಇರುತ್ತಾಳೆ. ಈ ಸೀನುವಿಕೆ ನೋವಿನಿಂದ ಕೂಡಿರುತ್ತದೆಯಂತೆ.ನಿರಂತರ ಸೀನುವಿಕೆಯಿಂದ ಅವಳ ಇಡೀ ದೇಹವು ನಡುಗುತ್ತದೆ ಎಂದು ತಿಳಿದುಬಂದಿದೆ.

ಕೈಟ್ಲಿನ್ ಅಮೆರಿಕದ ಟೆಕ್ಸಾಸ್ ನಿವಾಸಿ. ತನ್ನ ಸಮಸ್ಯೆಯು ಆರಂಭಿಕ ಹಂತದಲ್ಲಿದ್ದಾಗ, ಸೀನುವಿಕೆಯು ಯಾವುದೋ ಅಲರ್ಜಿಯಿಂದ ಉಂಟಾಗಿರಬಹುದು ಅಥವಾ ಮೂಗಿಗೆ ಏನಾದರೂ ತೊಂದರೆಯಾಗಿರಬಹುದು. ಈ ಸಮಸ್ಯೆ ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ಎಂದು ಅವಳು ಭಾವಿಸಿದ್ದಳು. ಆದರೆ ಅವಳ ಸೀನು ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಒಂದು ನಿಮಿಷದಲ್ಲಿ 20 ಬಾರಿ ಸೀನುವ ಈಕೆ, ಕೆಲವೊಮ್ಮೆ ದಿನಕ್ಕೆ 12 ಸಾವಿರ ಬಾರಿ ಸೀನುತ್ತಾಳೆ. ಅವಳ ಸಮಸ್ಯೆ ಎಷ್ಟು ಗಂಭೀರವಾಗಿದೆ ಎಂದರೆ ಸರಿಯಾಗಿ ತಿನ್ನಲು ಮತ್ತು ಕುಡಿಯಲು ಸಮಸ್ಯೆಯಾಗುತ್ತಿದೆ.

ಇದನ್ನೂ ಓದಿ: ಜೇಬಿನಲ್ಲಿ ಲಕ್ಷ ಲಕ್ಷ ದುಡ್ಡಿಟ್ಟುಕೊಂಡಿದ್ದರೂ, ಹಸಿವಿನಿಂದ ಸಾವನ್ನಪಿದ್ದ ಭಿಕ್ಷುಕ

ವರದಿಗಳ ಪ್ರಕಾರ, ಹೂಸ್ಟನ್‌ನ ಟೆಕ್ಸಾಸ್ ಮಕ್ಕಳ ಆಸ್ಪತ್ರೆಯ ವೈದ್ಯರು ಅವನ ವಿಚಿತ್ರವಾದ ಸೀನುವಿಕೆಯ ಸ್ಥಿತಿ ಮತ್ತು ಅದರ ಕಾರಣ ತಿಳಿಯಲು ಪ್ರಯತ್ನಿಸಿದ್ದರು. ಆಕೆಯನ್ನು ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಸೀನುವಿಕೆಗೆ ಕಾರಣವನ್ನು ಕಂಡುಹಿಡಿಯಲಾಗಲಿಲ್ಲ. 2015 ರಲ್ಲಿ, ಈಕೆಯ ಈ ವಿಚಿತ್ರ ಕಾಯಿಲೆಯ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಅದರಂತೆ ಸಾಕಷ್ಟು ಸುದ್ದಿ ಮಾಧ್ಯಮಗಳು ಕೂಡ ಅವಳ ಜೊತೆ ಸಂದರ್ಶನ ಮಾಡಿತ್ತು. ಆದರೆ ಕೈಟ್ಲಿನ್ ಇನ್ನೂ ಕೂಡ ಈ ಸೀನುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾಳೆ, ಏಕೆಂದರೆ ಅವಳ ಈ ಕಾಯಿಲೆಗೆ ಕಾರಣ ಏನೆಂದು ಕಂಡುಹಿಡಿಯಲು ವೈದ್ಯರಿಗೆ ಇನ್ನೂ ಸಾಧ್ಯವಾಗಿಲ್ಲ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ: