ಬಡತನವಿಲ್ಲ ಆದರೂ ಕಾಡಿನಲ್ಲಿ ಅಲೆಮಾರಿ ಜೀವನ, ಸತ್ತ ಪ್ರಾಣಿಯನ್ನು ತಿನ್ನುವ ಮಹಿಳೆ

ತಮ್ಮ ಆಲೋಚನೆಗೆ ತಕ್ಕಂತೆ ಜೀವನ ನಡೆಸುವ ಹಲವು ಮಂದಿಯನ್ನು ನಾವು ಜಗತ್ತಿನಲ್ಲಿ ನೋಡುತ್ತಿರುತ್ತೇವೆ. ಕೆಲವರು ಐಷಾರಾಮಿ ಜೀವನವನ್ನು ಬಯಸುತ್ತಾರೆ ಆದರೆ ಕೆಲವರು ಸ್ವಲ್ಪ ವಿಭಿನ್ನವಾಗಿ ಯೋಚಿಸುತ್ತಾರೆ ಮತ್ತು ಕಡಿಮೆ ಸಂಪನ್ಮೂಲಗಳೊಂದಿಗೆ ತಮ್ಮ ಜೀವನವನ್ನು ನಡೆಸಲು ಬಯಸುತ್ತಾರೆ. ಕೆಲವು ಮಂದಿ ಸಾಕಷ್ಟು ಸಂಪತ್ತನ್ನು ಹೊಂದಿದ್ದರೂ ಸರಳವಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಇದು ಕಾರಣವಾಗಿದೆ. ಇದಕ್ಕಿಂತ ಸಂಪೂರ್ಣವಾಗಿ ಭಿನ್ನವಾದ ಮಹಿಳೆಯ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ.

ಬಡತನವಿಲ್ಲ ಆದರೂ ಕಾಡಿನಲ್ಲಿ ಅಲೆಮಾರಿ ಜೀವನ, ಸತ್ತ ಪ್ರಾಣಿಯನ್ನು ತಿನ್ನುವ ಮಹಿಳೆ
ಮ್ಯಾಂಡರ್ಸ್​Image Credit source: News 18
Follow us
ನಯನಾ ರಾಜೀವ್
|

Updated on: Dec 07, 2023 | 11:20 AM

ತಮ್ಮ ಆಲೋಚನೆಗೆ ತಕ್ಕಂತೆ ಜೀವನ ನಡೆಸುವ ಹಲವು ಮಂದಿಯನ್ನು ನಾವು ಜಗತ್ತಿನಲ್ಲಿ ನೋಡುತ್ತಿರುತ್ತೇವೆ. ಕೆಲವರು ಐಷಾರಾಮಿ ಜೀವನವನ್ನು ಬಯಸುತ್ತಾರೆ ಆದರೆ ಕೆಲವರು ಸ್ವಲ್ಪ ವಿಭಿನ್ನವಾಗಿ ಯೋಚಿಸುತ್ತಾರೆ ಮತ್ತು ಕಡಿಮೆ ಸಂಪನ್ಮೂಲಗಳೊಂದಿಗೆ ತಮ್ಮ ಜೀವನವನ್ನು ನಡೆಸಲು ಬಯಸುತ್ತಾರೆ. ಕೆಲವು ಮಂದಿ ಸಾಕಷ್ಟು ಸಂಪತ್ತನ್ನು ಹೊಂದಿದ್ದರೂ ಸರಳವಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಇದು ಕಾರಣವಾಗಿದೆ. ಇದಕ್ಕಿಂತ ಸಂಪೂರ್ಣವಾಗಿ ಭಿನ್ನವಾದ ಮಹಿಳೆಯ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ.

ಎಲ್ಲಾ ಸೌಲಭ್ಯಗಳಿದ್ದರೂ ಕೂಡ ಕಾಡಿನಲ್ಲಿ ಹೋಗಿ ವಾಸಿಸುವವರನ್ನು ನೀವು ಎಲ್ಲಾದರೂ ನೋಡಿದ್ದೀರಾ. ಈ ಮಹಿಳೆಗೆ ಬಡತನವಿಲ್ಲ ಆದರೂ ಕಾಡಿನಲ್ಲಿ ಅಲೆಮಾರಿಯಂತೆ ಕುದುರೆಯ ಮೇಲೆ ಸುತ್ತಾಡುತ್ತಿರುತ್ತಾಳೆ. ಸತ್ತ ಪ್ರಾಣಿಗಳನ್ನೇ ತಿನ್ನುತ್ತಾಳೆ.

ಮಹಿಳೆ ತನ್ನದೇ ಆದ ಮನೆಯನ್ನು ಕೂಡ ಮಾಡಿಕೊಂಡಿಲ್ಲ, ದಿನದ 24 ಗಂಟೆಯೂ ಸುತ್ತಾಡುತ್ತಲೇ ಇರುತ್ತಾಳೆ. ಆಕೆಯ ಪ್ರಕಾರ ಇದೇ ಸುಖಕರವಾದ ಜೀವನ. ಮಹಿಳೆಯ ಹೆಸರು ಮ್ಯಾಂಡರ್ಸ್ ಬರ್ನೆಟ್ ಮತ್ತು ಆಕೆಯ ವಯಸ್ಸು 32. ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ಮಾಂಡರ್ಸ್ ಕಳೆದ 4 ವರ್ಷಗಳಿಂದ ಇದೇ ಅಲೆಮಾರಿ ಜೀವನ ನಡೆಸುತ್ತಿದ್ದಾರೆ. ಆಕೆ ಆಧುನಿಕ ಜೀವನದಿಂದ ಬೇಸರಗೊಂಡಿದ್ದಾಳೆ ಮತ್ತು ಅವಳ ಹೃದಯ ಮತ್ತು ಆತ್ಮವು ಪ್ರಕೃತಿಯಲ್ಲಿ ನೆಲೆಸಿದೆ ಎಂದು ಅವರು ಹೇಳುತ್ತಾರೆ.

ಮತ್ತಷ್ಟು ಓದಿ: Viral Video: ಈ ರೆಸ್ಟೋರೆಂಟ್​​ನಲ್ಲಿ ಕಪಾಳಮೋಕ್ಷ ಸ್ಪೆಷಲ್​​ ಮೆನು

ಜುಲೈ 2019ರಲ್ಲಿ ಮನೆ ಬಿಟ್ಟು ಕುದುರೆ ಮೇಲೆ ಓಡಾಟ ಆರಂಭಿಸಿದ್ದಾರೆ, ಮುಂದಿನ 6 ವರ್ಷಗಳನ್ನು ಹೀಗೆ ಕಳೆಯಲು ಬಯಸಿದ್ದಾರೆ. ಒಂದು ದಿನ, ಇಡಾಹೊ ನಿವಾಸಿಯಾದ ಮಾಂಡರ್ಸ್, ವರ್ಷಗಳಿಂದ ಕುದುರೆಯ ಮೇಲೆ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಭೇಟಿಯಾದರು. ಅವರ ಜೀವನಶೈಲಿಯಿಂದ ಅವಳು ತುಂಬಾ ಪ್ರಭಾವಿತಳಾಗಿದ್ದರು, ಅಂದೇ ತಮ್ಮ ಕೆಲಸವನ್ನು ತೊರೆದಿದ್ದರು.

ಸತ್ತ ಪ್ರಾಣಿಗಳನ್ನು ತಿನ್ನುತ್ತಾರೆ ಮ್ಯಾಂಡರ್ಸ್ ಬರ್ನೆಟ್ ಇಡಾಹೋದಿಂದ ಒರೆಗಾನ್‌ಗೆ 500 ಮೈಲುಗಳಷ್ಟು ಪ್ರಯಾಣಿಸಿದರು. ಆದಾಗ್ಯೂ, ಅವರು ನಂತರ ಬೇರ್ಪಟ್ಟರು ಮತ್ತು ಈಗ ಮಾಂಡರ್ಸ್ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ.

ದಾರಿಯಲ್ಲಿ ಸತ್ತ ಪ್ರಾಣಿಗಳ ಮಾಂಸವನ್ನು ಆಹಾರಕ್ಕಾಗಿ ಬಳಸುತ್ತಾರೆ ಮತ್ತು ಅಡುಗೆಗಾಗಿ ಸೌದೆ ಒಲೆ ಬಳಸುತ್ತಾರೆ. ಸ್ನಾನಕ್ಕೆ, ಬಟ್ಟೆ ಒಗೆಯಲು ಬಾವಿಯ ನೀರನ್ನು ಬಳಸುತ್ತಾರೆ. ಸೋಲಾರ್ ಬ್ಯಾಟರಿಯಿಂದ ಫೋನ್ ಅನ್ನು ಚಾರ್ಜ್ ಮಾಡುತ್ತಾರೆ ಮತ್ತು ಮೊಬೈಲ್‌ನಲ್ಲಿ ಚಾನೆಲ್​ಗಳನ್ನು ಯಾವುದನ್ನೂ ನೋಡುವುದಿಲ್ಲ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ