ಈ ಬೆಕ್ಕಿಗಿರುವಷ್ಟು ಛಲ, ಹಠ ನಮಗಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು
ಯಾವುದೇ ಒಂದು ಕೆಲಸಕ್ಕೆ ಕೈ ಹಾಕಿದಾಗ, ಮೊದಲ ಪ್ರಯತ್ನದಲ್ಲಿ ಅದರಲ್ಲಿ ಯಶಸ್ಸು ಲಭಿಸದೆ ಸೋಲುಂಡರೆ ನಾನು ದುರಾದೃಷ್ಟವಂತ, ನನ್ನಿಂದ ಇನ್ನು ಏನನ್ನೂ ಸಾಧಿಸಲು ಸಾಧ್ಯವಾಗದೂ ಎಂದು ಕೈ ಕಟ್ಟಿಕುಳಿತುಕೊಳ್ಳುವವರೇ ಹೆಚ್ಚು. ಹೀಗೆ ಹಿಂದೆ ಸರಿಯುತ್ತಾ ಹೋದರೆ ಖಂಡಿತವಾಗಿಯೂ ಯಶಸ್ಸಿನ ಮೆಟ್ಟಿಲು ಹತ್ತಲು ಸಾಧ್ಯವಾಗುವುದಿಲ್ಲ. ನೀವು ಕೂಡಾ ಇದೇ ರೀತಿ ನನ್ನ ಕಾರ್ಯದಲ್ಲಿ ಯಶಸ್ಸು ಸಿಗಲಿಲ್ಲ ಎಂದು ಮರಳಿ ಪ್ರಯತ್ನವನ್ನು ಮಾಡದೇ ಕುಳಿತಿದ್ದರೆ, ಈ ಬೆಕ್ಕಿನ ಸ್ಪೂರ್ತಿದಾಯಕ ವಿಡಿಯೋವನ್ನು ಒಮ್ಮೆ ನೋಡಿ.
ಯಾವುದೇ ಕೆಲಸವಾಗಿರಲಿ ಅದರಲ್ಲಿ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಸಾಧಿಸಲು ಖಂಡಿತವಾಗಿಯೂ ಯಾರಿಂದಲೂ ಸಾಧ್ಯವಾಗುವುದಿಲ್ಲ. ಮರಳಿ, ಮರಳಿ ಪ್ರಯತ್ನವನ್ನು ಮಾಡಿದಾಗ ಮಾತ್ರ ನೀವು ಮಾಡುವ ಯಾವುದೇ ಕೆಲಸದಲ್ಲಿ ಉತ್ತಮ ಜ್ಞಾನ ಮತ್ತು ಕೌಶಲ್ಯ ವೃದ್ಧಿಸಲು ಸಾಧ್ಯ ಹಾಗೇನೇ ಮುಖ್ಯವಾಗಿ ನಿಮ್ಮ ಕೆಲಸದಲ್ಲಿ ಯಶಸ್ಸು ಸಾಧಿಸಲು ಹಾಗೂ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ. ಆದರೆ ಹೆಚ್ಚಿನವರು ತನಗೆ ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಗಲಿಲ್ಲ ಎಂಬ ಕಾರಣಕ್ಕೆ, ನನ್ನ ಕೈಯಿಂದ ಇನ್ನು ಏನನ್ನೂ ಸಾಧಿಸಲು ಸಾಧ್ಯವಾಗದು, ನಾನೊಬ್ಬ ದುರಾದೃಷ್ಟವಂತ ಎಂದು ಹೇಡಿಯಂತೆ ಹಿಂದೆ ಸರಿಯುತ್ತಾರೆ. ಹೀಗೆ ನನ್ನಿಂದ ಏನು ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತರೆ ಸಮಯ ವ್ಯರ್ಥವಾಗುತ್ತದೆಯೇ ಹೊರತು ನೀವು ಸಾಧನೆಯ ಮೆಟ್ಟಿಲೇರಲು ಸಾಧ್ಯವಾಗದು. ಹೀಗೆ ನನ್ನಿಂದ ಏನೂ ಸಾಧಿಸಲು ಸಾಧ್ಯವಾಗದು ಎಂದು ಕೈ ಕಟ್ಟಿ ಕುಳಿತವರಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಸ್ಪೂರ್ತಿ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಈ ವೈರಲ್ ವಿಡಿಯೋವನ್ನು @edctoom ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಳ್ಳಲಾಗಿದ್ದು, ಬೆಕ್ಕೊಂದು ಮನೆಯೊಂದರ ಛಾವಣಿ ಶೀಟ್ ಮೇಲೆ ಜಿಗಿದು ಕೂರಲು ಸತತವಾಗಿ ಪ್ರಯತ್ನಿಸುವ ಸ್ಪೂರ್ತಿದಾಯಕ ದೃಶ್ಯವನ್ನು ಕಾಣಬಹುದು.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:
View this post on Instagram
ವಿಡಿಯೋದಲ್ಲಿ ಬಿಳಿ ಬಣ್ಣದ ಬೆಕ್ಕೊಂದು ಒಂದು ಮನೆಯ ಮೆಟ್ಟಿಲನ್ನು ಹತ್ತಿಕೊಂಡು ಬಂದು ಇನ್ನೊಂದು ಮನೆಯ ಛಾವಣಿ ಶೀಟ್ ಮೇಲೆ ಹಾರಲು ಪ್ರಯತ್ನಿಸುತ್ತದೆ. ಆದರೆ ಬೆಕ್ಕು ಮೊದಲ ಪ್ರಯತ್ನದಲ್ಲಿ ಛಾವಣಿಯ ಮೇಲೆ ಜಿಗಿದು ಕೂರುವಲ್ಲಿ ಯಶಸ್ವಿಯಾಗದೆ, ನೆಲದ ಮೇಲೆ ಬೀಳುತ್ತದೆ. ಆದರೆ ಆ ಬೆಕ್ಕು ನಾನು ಮೊದಲ ಪ್ರಯತ್ನದಲ್ಲಿ ಸೋತಿದ್ದೇನೆ, ನನ್ನಿಂದ ಇನ್ನು ಅದು ಸಾಧ್ಯವಾಗದು ಎಂದು ಸಪ್ಪೆ ಮೋರೆ ಹಾಕಿ ಹಿಂದೆ ಸರಿಯದೆ, ಛಲದಿಂದ ಮರಳಿ ಮರಳಿ ಛಾವಣಿಯ ಮೇಲೆ ಜಿಗಿದು ಕೂರಲು ಪ್ರಯತ್ನ ಪಡುವುದನ್ನು ಕಾಣಬಹುದು.
ಇದನ್ನೂ ಓದಿ:ಅರ್ಜುನನಿಗೆ ನೋವು ಮಾಡಿ ಬಲಿ ಪಡೆ ಆನೆ ಇದುವೇ ನೋಡಿ
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 126 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 5.2 ಮಿಲಿಯನ್ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ಇದು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಬೆಕ್ಕಿನ ಪ್ರಯತ್ನವನ್ನು ಮೆಚ್ಚಲೇಬೇಕುʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: