ಒಮ್ಮೆಯಾದರೂ ವಿಭಿನ್ನ ಆಹಾರ ತಿನ್ನ ಬಯಸುವವರು ಕೆಲವರು ಇರುತ್ತಾರೆ. ಅದಕ್ಕಾಗಿಯೇ ಕೆಲವರು ಬೀದಿ ಬದಿಯ ಆಹಾರದ ಅಂಗಡಿಗಳಿಗೆ ಹೋಗುತ್ತಾರೆ. ಇನ್ನು ಕೆಲವರು ರೆಸ್ಟೋರೆಂಟ್ ಅಥವಾ ಹೋಟೆಲ್‌ಗಳಿಗೆ ಆಹಾರ ತಿನ್ನಲು ಹೋಗುತ್ತಾರೆ. ಸಾಮಾನ್ಯವಾಗಿ ಜನರು ಸ್ವಚ್ಛತೆ ಮತ್ತು ಉತ್ತಮ ಆಹಾರ ಹೊಂದಿರುವ ರೆಸ್ಟೋರೆಂಟ್‌ಗಳಿಗೆ ಹೋಗಲು ಇಷ್ಟಪಡುತ್ತಾರೆ. ಆದರೆ ಬದಲಾಗುತ್ತಿರುವ ಅಭಿರುಚಿಗೆ (Food) ತಕ್ಕಂತೆ ಗ್ರಾಹಕರನ್ನು ಸೆಳೆಯಲು ರೆಸ್ಟೊರೆಂಟ್ (Restaurant) ಮಾಲೀಕರು ಇಂಟೀರಿಯರ್ ಡೆಕೊರೇಶನ್ ಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ.
ಇಂದಿನ ಸೆಲ್ಪೀ ಜಮಾನದಲ್ಲಿ ರೆಸ್ಟೋರೆಂಟ್ ಅನ್ನು ಸುಂದರವಾಗಿ ಅಲಂಕರಿಸಿದರೆ… ಅಲ್ಲಿಗೆ ಬರುವ ಗ್ರಾಹಕರು ಫೋಟೋಗಳನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಅದನ್ನು ಸೊಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸ್ವಯಂಪ್ರೇರಿತರಾಗಿ ತಮ್ಮ ರೆಸ್ಟೋರೆಂಟ್ ಗೆ ಪ್ರಚಾರ ಕೊಡುವುದೂ ಉಂಟು ಎಂಬುದು ಮಾಲೀಕರ ಲೆಕ್ಕಾಚಾರಚಾಗಿರುತ್ತದೆ. ಅಂತಹುದರಲ್ಲಿ ಮೀನುಗಳ ನಡುವೆ ಇರುವಂತಹ ರೆಸ್ಟೋರೆಂಟ್ ಅನ್ನು ನೀವು ಎಂದಾದರೂ ನೋಡಿದ್ದೀರಾ? ಮೀನುಗಳ ನಡುವೆ ಕುರ್ಚಿಗಳ ಮೇಲೆ ಕುಳಿತು ಆಹಾರವನ್ನು ತಿನ್ನವುದೇ ಮಜ ಎಂದು ನಿಮಗೆ ಅನಿಸುತ್ತದೆಯೇ? ಸದ್ಯ ಅಂತಹ ಒಂದು ರೆಸ್ಟೋರೆಂಟ್‌ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ.
Sweet Fishs Café In Thailand where the floor is filled with water and fish swim amongst the customers pic.twitter.com/lNtOY0kxRd
— Science girl (@gunsnrosesgirl3) November 5, 2023
ವಾಸ್ತವವಾಗಿ ಈ ವೀಡಿಯೊ ರೆಸ್ಟೋರೆಂಟ್‌ನೊಳಗಿನ ದೃಶ್ಯವನ್ನು ತೋರಿಸುತ್ತದೆ. ಅಲ್ಲಿನ ನೆಲ ಬಾವಿಯ ಆಕಾರದಲ್ಲಿದೆ. ನೀರು ತುಂಬಿದ ಬಾವಿಯಲ್ಲಿ ಮೀನುಗಳು ಲೀಲಾಜಾಲವಾಗಿ ಈಜಾಡುತ್ತಿವೆ. ಅದೇ ಸಮಯದಲ್ಲಿ, ಅಂಗಳದಲ್ಲಿ ಅಲ್ಲಲ್ಲಿ ಕುರ್ಚಿಗಳನ್ನು ಹಾಕಲಾಗಿದೆ. ಅದರ ಮೇಲೆ ಕುಳಿತು ಮೀನುಗಳನ್ನು ನೋಡುತ್ತಾ ಆಹಾರವನ್ನು ಸವಿಯಬಹುದಾಗಿದೆ. ಮೀನು ಪ್ರಿಯರು ಈ ರೆಸ್ಟೋರೆಂಟ್‌ಗೆ ಧಾರಾಳವಾಗಿ ಭೇಟಿ ನೀಡಬಹುದು. ಥೈಲ್ಯಾಂಡ್‌ನಲ್ಲಿರುವ ಈ ರೆಸ್ಟೋರೆಂಟ್‌ನ ಹೆಸರು ‘ಸ್ವೀಟ್ ಫಿಶ್ ಕೆಫೆ’ ಎಂದಿದೆ. ಇದುವರೆಗೆ ಬಹುಶಃ ಚಲನಚಿತ್ರಗಳಲ್ಲಿಯೂ ಇಂತಹ ವಿಷಯಾಧಾರಿತ ರೆಸ್ಟೋರೆಂಟ್‌ಗಳನ್ನು ನೀವು ನೋಡದಿರಬಹುದು. ಆದರೆ ಅಂತಹ ವಿಶೇಷ ಮೀನು ಥೀಮ್ ರೆಸ್ಟೋರೆಂಟ್ ಇಲ್ಲಿದೆ.
ಇದನ್ನೂ ಓದಿ: ದಯನೀಯ ಸ್ಥಿತಿಯಲ್ಲಿ ಆಫ್ಘನ್ ನಿರಾಶ್ರಿತರು: ಪಾಕಿಸ್ತಾನ ತೊರೆಯುತ್ತಿರುವವರಿಗೆ ಕುಡಿಯಲು ನೀರು, ಆಹಾರಕ್ಕೆ ತತ್ವಾರ
ಈ ವಿಶೇಷ ರೆಸ್ಟೋರೆಂಟ್ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. @gunsnrosesgirl3 ಎಂಬ ಐ.ಡಿ.ಯೊಂದಿಗೆ ಇದನ್ನು Twitter ನಲ್ಲಿ ಹಂಚಿಕೊಳ್ಳಲಾಗಿದೆ. ಕೇವಲ 18 ಸೆಕೆಂಡುಗಳಲ್ಲಿ, ಈ ವೀಡಿಯೊ 13 ಮಿಲಿಯನ್ ಅಥವಾ 1.3 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು 70 ಸಾವಿರಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:10 am, Tue, 7 November 23