ದಯನೀಯ ಸ್ಥಿತಿಯಲ್ಲಿ ಆಫ್ಘನ್ ನಿರಾಶ್ರಿತರು: ಪಾಕಿಸ್ತಾನ ತೊರೆಯುತ್ತಿರುವವರಿಗೆ ಕುಡಿಯಲು ನೀರು, ಆಹಾರಕ್ಕೆ ತತ್ವಾರ

ಪಾಕಿಸ್ತಾನ ಸರ್ಕಾರದ ಆದೇಶದ ಮೇರೆಗೆ ಅಫ್ಘಾನಿಸ್ತಾನದ ನಾಗರಿಕರು ತೊರ್ಕಾಮ್ ಮತ್ತು ಚಮನ್ ಪ್ರದೇಶಗಳಲ್ಲಿರುವ ಗಡಿ ದಾಟಿ ಪಾಕಿಸ್ತಾನವನ್ನು ತೊರೆಯುತ್ತಿದ್ದಾರೆ. ತಾಲಿಬಾನಿಗಳು ಈ ನಾಗರಿಕರಿಗೆ ವಾಸಿಸಲು ಶಿಬಿರಗಳನ್ನು ಸ್ಥಾಪಿಸಿದ್ದಾರೆ, ಆದರೆ ಇಲ್ಲಿ ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕುಡಿಯಲು ನೀರು, ಉಣ್ಣಲು ಆಹಾರಕ್ಕೆ ತತ್ವಾರ ಉಂಟಾಗಿದ್ದು, ಬಯಲಿನಲ್ಲೇ ಮಲಗುವಂತಾಗಿದೆ.

ದಯನೀಯ ಸ್ಥಿತಿಯಲ್ಲಿ ಆಫ್ಘನ್ ನಿರಾಶ್ರಿತರು: ಪಾಕಿಸ್ತಾನ ತೊರೆಯುತ್ತಿರುವವರಿಗೆ ಕುಡಿಯಲು ನೀರು, ಆಹಾರಕ್ಕೆ ತತ್ವಾರ
ಗಡಿ ಭಾಗದ ಶಿಬಿರಗಳಲ್ಲಿ ಆಫ್ಘನ್ನರು
Follow us
Ganapathi Sharma
|

Updated on:Nov 06, 2023 | 3:31 PM

ಇಸ್ಲಾಮಾಬಾದ್, ನವೆಂಬರ್ 6: ಪಾಕಿಸ್ತಾನದಲ್ಲಿ (Pakistan) ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಲಕ್ಷಾಂತರ ಆಫ್ಘನ್ ಪ್ರಜೆಗಳು (Afghanistan Citizens) ಅಲ್ಲಿಂದ ತವರಿಗೆ ಹಿಂತಿರುಗುತ್ತಿದ್ದಾರೆ. ಬಂಧನ ಮತ್ತು ಗಡಿಪಾರು ತಪ್ಪಿಸಲು ಸ್ವದೇಶಕ್ಕೆ ವಾಪಸಾಗುತ್ತಿರುವ ಈ ನಾಗರಿಕರ ಪರಿಸ್ಥಿತಿ ತೀರಾ ಹದಗೆಟ್ಟು ಹೋಗಿದ್ದು, ಸಮಸ್ಯೆಗಳ ಸರಮಾಲೆಯನ್ನೇ ಎದುರಿಸುವಂತಾಗಿದೆ. ಪಾಕಿಸ್ತಾನದ ಗಡಿ ದಾಟಿದ ತಕ್ಷಣ ಅವರಿಗೆ ಸಂಕಷ್ಟಗಳ ಬೆಟ್ಟವೇ ಎದುರಾಗಿದೆ. ಆಹಾರ ಮತ್ತು ಕುಡಿಯುವ ನೀರಿನಂಥ ಅಗತ್ಯ ಸೌಕರ್ಯಗಳು ಅವರಿಗೆ ದೊರೆಯುತ್ತಿಲ್ಲ. ಇದರಿಂದಾಗಿ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ.

ಮೂಲಗಳ ಪ್ರಕಾರ, ಅಫ್ಘಾನಿಸ್ತಾನದ ನಾಗರಿಕರಿಗೆ ವಾಸಿಸಲು ಮನೆಗಳಿಲ್ಲ, ಶೌಚಾಲಯ, ಆಹಾರ ಸೇರಿದಂತೆ ಮೂಲಸೌಕರ್ಯಗಳ ಸೌಲಭ್ಯಗಳಿಲ್ಲ. ಜನರು ಬಯಲಿನಲ್ಲೇ ಮಲಗಿ ಕಾಲಕಳೆಯಬೇಕಾಗಿ ಬಂದಿದ್ದು, ಮಕ್ಕಳಿಗೂ ಸಮಸ್ಯೆಗಳು ಎದುರಾಗಿವೆ.

ತಾಲಿಬಾನ್​​ ಶಿಬಿರ: ಅವ್ಯವಸ್ಥೆಗಳ ಆಗರ

ಸೂರಿನ ವ್ಯವಸ್ಥೆ ಇಲ್ಲದೆ ಬಯಲಿನಲ್ಲೇ ಕುಳಿತಿರುವ ಆಫ್ಘನ್ನರು.

ಪಾಕಿಸ್ತಾನ ಸರ್ಕಾರದ ಆದೇಶದ ಮೇರೆಗೆ ಅಫ್ಘಾನಿಸ್ತಾನದ ನಾಗರಿಕರು ತೊರ್ಕಾಮ್ ಮತ್ತು ಚಮನ್ ಪ್ರದೇಶಗಳಲ್ಲಿರುವ ಗಡಿ ದಾಟಿ ಪಾಕಿಸ್ತಾನವನ್ನು ತೊರೆಯುತ್ತಿದ್ದಾರೆ. ತಾಲಿಬಾನಿಗಳು ಈ ನಾಗರಿಕರಿಗೆ ವಾಸಿಸಲು ಶಿಬಿರಗಳನ್ನು ಸ್ಥಾಪಿಸಿದ್ದಾರೆ, ಆದರೆ ಇಲ್ಲಿ ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಯಲು ಶೌಚದಿಂದ ಸುತ್ತಮುತ್ತ ಕೊಳಚೆ ತುಂಬಿದೆ. ಇದಲ್ಲದೇ ಶಿಬಿರದಲ್ಲಿ ಆಹಾರ, ವಿದ್ಯುತ್‌ ಸೌಲಭ್ಯವೂ ಇಲ್ಲ. ಶಿಬಿರದಲ್ಲಿ ವಾಸಿಸುವ ಈ ಜನರು ತವರಿಗೆ ಮರಳಲು ಕಾಯುತ್ತಿದ್ದಾರೆ.

ವಿಶ್ವಸಂಸ್ಥೆ ಶಿಬಿರಗಳಲ್ಲಿವೆ ಸೌಕರ್ಯ

ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು ಮತ್ತು ಇತರ ಸಾಮಾಜಿಕ ಸಂಸ್ಥೆಗಳು ಕೂಡ ಅಫ್ಘಾನಿಸ್ತಾನಕ್ಕೆ ಬರುವ ಸಾವಿರಾರು ಜನರಿಗಾಗಿ ಶಿಬಿರಗಳನ್ನು ಸ್ಥಾಪಿಸುತ್ತಿವೆ. ಈ ಶಿಬಿರಗಳಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳು ಲಭ್ಯವಿವೆ. ಇದರಿಂದ ಇಲ್ಲಿಗೆ ಬರುವ ಜನರಿಗೆ ವಾಸಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಮೂಲಗಳು ಹೇಳಿವೆ.

ದೇಶ ತೊರೆಯುವಂತೆ ಆದೇಶಿಸಿದ್ದ ಪಾಕಿಸ್ತಾನ

ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳಿಗೆ ದೇಶ ತೊರೆಯುವಂತೆ ಪಾಕಿಸ್ತಾನ ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ. ಈ ವಿದೇಶಿ ಪ್ರಜೆಗಳಲ್ಲಿ, ಹೆಚ್ಚಿನ ಸಂಖ್ಯೆಯ ಜನರು (ಸುಮಾರು 17 ಲಕ್ಷ) ಅಫ್ಘಾನಿಸ್ತಾನದವರಾಗಿದ್ದಾರೆ. ಅಕ್ಟೋಬರ್ 31ರೊಳಗೆ ದೇಶ ತೊರೆಯಲು ಸರ್ಕಾರ ಗಡುವು ನೀಡಿತ್ತು. ಅಷ್ಟರೊಳಗೆ ದೇಶ ಬಿಟ್ಟು ತೆರಳದವರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಲಾಗಿದೆ. ಸರ್ಕಾರದ ಆದೇಶದ ನಂತರ, ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ಆಫ್ಘನ್ ನಾಗರಿಕರು ದೇಶವನ್ನು ತೊರೆದಿದ್ದಾರೆ.

ಇದನ್ನೂ ಓದಿ: ಇಸ್ರೇಲ್-ಹಮಾಸ್ ಸಂಘರ್ಷ: ನವೆಂಬರ್​ 30ರವರೆಗೆ ಟೆಲ್ ಅವೀವ್​ಗೆ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದ ಏರ್​ ಇಂಡಿಯಾ

ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಹೊರಹಾಕಲು ಪಾಕಿಸ್ತಾನ ಸರ್ಕಾರ ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಧಿಕಾರಿಗಳು ಜನರ ಮನೆಗಳಿಗೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದು, ವಲಸಿಗರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಅಕ್ರಮವಾಗಿ ವಾಸ ಇರುವವರನ್ನು ಬಂಧಿಸುವಂತೆಯೂ ಸರ್ಕಾರ ಆದೇಶಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Mon, 6 November 23

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್