
ಭಾರತದಲ್ಲಿ (India) ಕಸದ ಸಮಸ್ಯೆ ಮುಗಿಯದ ಗೋಳು. ಭಾರತದಲ್ಲಿ ಹೆಚ್ಚಿನ ಜನರಿಗೆ ಪರಿಸರ ಹಾಗೂ ಸ್ವಚ್ಛತೆ ಬಗ್ಗೆ ಕಾಳಜಿ ಇಲ್ಲ ಎಂಬುದನ್ನು ಮತ್ತೆ ಸಾಬೀತು ಮಾಡುತ್ತಿದ್ದಾರೆ, ಬೆಂಗಳೂರು ಸೇರಿದಂತೆ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಈ ಬಗ್ಗೆ ವಿದೇಶಿಗರು ಕೂಡ ಅಸಮಾಧನ ವ್ಯಕ್ತಪಡಿಸಿದ್ದಾರೆ. ಇದೀಗ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಒಬ್ಬ ವಿದೇಶಿ ಪ್ರಜೆ ತನ್ನ ಮನೆಯ ಬಳಿ ಹಾಕಿರುವ ಕಸದ ಬಗ್ಗೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಭಾರತದಲ್ಲಿ ವಾಸಿಸುತ್ತಿರುವ ಸೆರ್ಬಿಯಾದ (Serbian) ಪ್ರಜೆಯೊಬ್ಬರು ಕೇವಲ 15 ಸೆಕೆಂಡುಗಳಲ್ಲಿ ಕಸದ ರಾಶಿಯನ್ನು ತೆರವುಗೊಳಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಕಾರಣವಾಗಿದೆ.
@4cleanindia ಎಂಬ ಬಳಕೆದಾರರು Instagram ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಮನೆಯ ಹೊರಗೆ ಬಿದ್ದಿರುವ ಕಸದ ರಾಶಿಯನ್ನು ತೋರಿಸುತ್ತಿರುವುದನ್ನು ಕಾಣಬಹುದು.ಇದು ನನ್ನ ಮನೆಯ ಹೊರಗೆ ಇರುವ ಕಸ, ಇದು ನನ್ನ ಸಮಸ್ಯೆಯಲ್ಲ, ಆದ್ದರಿಂದ, ಇದನ್ನು ಮಾಡಲು ಸ್ವಚ್ಛಗೊಳಿಸಲು ಸುಮಾರು 15 ಸೆಕೆಂಡುಗಳು ಬೇಕಾಯಿತು. ಒಂದು ಚೀಲ ಕಸ ಒಂದು ತಿಂಗಳಿನಿಂದ ಅಲ್ಲಿಯೇ ಇದೆ ಎಂದು ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ. ಇದು ಭಾರತದ ಹೆಚ್ಚಿನ ಜನರ ಮನೋಭಾವ, ಈ ಮನೋಭಾವ ಬದಲಾದ ನಂತರವೇ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಹೇಳಿದ್ದಾರೆ. ಮತ್ತೊಬ್ಬರ ಕಡೆ ಬೆರಳು ಮಾಡುವುದನ್ನು ಅಥವಾ ದೋಷಿಸುವುದನ್ನು ನಿಲ್ಲಿಸಿ, ಈ ಬಗ್ಗೆ ಕ್ರಮ ತೆಗೆದುಕೊಳ್ಳಲಿ ಎಂದು ಖಾರವಾಗಿ ಹೇಳಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಹೋಲಿಸಿದ್ರೆ ಕೆನಡಾದಲ್ಲಿ ದಿನಸಿ ವಸ್ತುಗಳು ದುಬಾರಿ, ಬೆಲೆ ಸಹಿತ ವಿವರಿಸಿದ ಭಾರತೀಯ ಮಹಿಳೆ
ಇನ್ನು ಈ ಪೋಸ್ಟ್ 1.2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ಮೆಚ್ಚುಗೆ ಹಾಗೂ ಕಾಮೆಂಟ್ ವ್ಯಕ್ತವಾಗಿವೆ. ಕೆಲವರು ಈ ವಿದೇಶಿ ವ್ಯಕ್ತಿ ಮಾಡಿದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ ನಮಗೆ ಬೇಕಾಗಿರುವುದು ಇದೇ, ಕಡಿಮೆ ಮಾತು ಮತ್ತು ಹೆಚ್ಚಿನ ಕ್ರಿಯೆ ಎಂದು ಹೇಳಿದ್ದಾರೆ. ಈ ಇಂತಹ ಕೆಲಸವನ್ನು ವಿದೇಶಿಗರು ಮಾಡುತ್ತಿರುವುದು ನಮ್ಮ ದೇಶಕ್ಕೆ ಮುಜುಗರದ ಸಂಗತಿ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಇದು ಒಂದು ಸಣ್ಣ ಕಾರ್ಯ, ಆದರೆ ಇದು ಎಷ್ಟು ದೊಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿಲ