Trending: ತಂದೆಯ ಹಾಡಿಗೆ ಇ ಐ ಇ ಐ ಓ… ಎಂದ ಮುದ್ದಾದ ಮಗು, ವಿಡಿಯೋ ವೈರಲ್

ಓಲ್ಡ್ ಮೆಕ್‌ಡೊನಾಲ್ಡ್‌ಗೆ ಫಾರ್ಮ್ ಇತ್ತು ಎಂದು ತಂದೆ ಹಾಡಿದ ಕವಿತೆಯನ್ನು ಇ ಐ ಇ ಐ ಓ... ಎಂದು ಹೇಳುವ ಮೂಲಕ ಕವಿತೆ ಪೂರ್ಣಗೊಳಿಸುವ ಮುದ್ದಾದ ಮಗುವಿನ ವಿಡಿಯೋ ವೈರಲ್ ಆಗುತ್ತಿದೆ.

Trending: ತಂದೆಯ ಹಾಡಿಗೆ ಇ ಐ ಇ ಐ ಓ... ಎಂದ ಮುದ್ದಾದ ಮಗು, ವಿಡಿಯೋ ವೈರಲ್
ವೈರಲ್ ಆದ ತಂದೆ ಮತ್ತು ಮಗು
Image Credit source: Instagram
Updated By: Rakesh Nayak Manchi

Updated on: Jun 03, 2022 | 9:27 PM

ಅಂಬೆಗಾಲಿಡುವ ಮಕ್ಕಳು ತಮಾಷೆಯ ವಿಷಯಗಳನ್ನು ಮಾಡುವ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರೂ ಇಷ್ಟಪಡುತ್ತಾರೆ. ಮುಗ್ಧತೆ ಮತ್ತು ಮೋಹಕತೆಯಿಂದ ತುಂಬಿರುವ ಶಿಶುಗಳು ಇತರರಂತೆ ಸಂತೋಷ ಮತ್ತು ಸಕಾರಾತ್ಮಕ ಕಂಪನಗಳನ್ನು ಹೊರಹಾಕುತ್ತವೆ. ಇದೀಗ ಮುದ್ದಾದ ಮಗುವೊಂದು ತನ್ನ ಅಪ್ಪನೊಂದಿಗೆ ಓಲ್ಡ್ ಮ್ಯಾಕ್‌ಡೊನಾಲ್ಡ್ ಅನ್ನು ಹಾಡಿದೆ ನೆಟ್ಟಿಜನ್​ಗಳ ಪ್ರೀತಿಗೆ ಪಾತ್ರವಾಗಿದೆ.

ಇದನ್ನೂ ಓದಿ: ಬಾವಿಗೆ ಇಳಿದು ನೀರು ಕೊಂಡೊಯ್ಯುವ ಪರಿಸ್ಥಿತಿ, ಅಯ್ಯೋ ಈ ಗ್ರಾಮದ ಜನರ ಸ್ಥಿತಿ ಕೇಳುವವರು ಯಾರು?

ವಿಡಿಯೋದಲ್ಲಿ, ತಂದೆಯೊಬ್ಬರು ಹಾಡಿನ ಟ್ಯೂನ್​ ಅನ್ನು ತಾನೂ ಹಾಡುತ್ತಾ ತನ್ನ ಮಗನಿಗೆ ಹೇಳಿಕೊಡಲು ಪ್ರಯತ್ನಿಸುತ್ತಾನೆ. ಈ ವೇಳೆ ಮಗು ಇ ಐ ಇ ಐ ಓ… ಅಂತ ಹೇಳುತ್ತದೆ. ಅಷ್ಟಕ್ಕೂ ಈ ಹಾಡು ಯಾವುದೆಂದು ನೀವು ಕೇಳಿದರೆ, ಬಾಲ್ಯದಲ್ಲಿ ಹಾಡುತ್ತಿದ್ದ ಹಾಡಿನ ಬಗ್ಗೆ ಹೇಳಬೇಕಾಗುತ್ತದೆ.

‘ಓಲ್ಡ್ ಮೆಕ್‌ಡೊನಾಲ್ಡ್‌ಗೆ ಫಾರ್ಮ್ ಇತ್ತು – ಇ ಐ ಇ ಐ ಓ…’ ಎಂಬ ಮಕ್ಕಳ ಅಚ್ಚುಮೆಚ್ಚಿನ ಹಾಡನ್ನು ಆ ವ್ಯಕ್ತಿ ಹಾಡಿದ್ದಾರೆ. ಇದಕ್ಕೆ ಮಗು ಕೂಡ ಇ ಐ ಇ ಐ ಓ ಎನ್ನುವ ಮೂಲಕ ದನಿಗೂಡಿಸಿದೆ. ವಿಡಿಯೋದಲ್ಲಿ ನೋಡುವಂತೆ, ತಂದೆ ಅದೇ ಹಾಡನ್ನು ತನ್ನ ಮಗನ ಮುಂದೆ ಹಾಡುತ್ತಾನೆ. ಇದನ್ನು ಮಗ ತಾಳ್ಮೆಯಿಂದ ಕೇಳುತ್ತಾನೆ. ಆದರೆ ಮಗುವಿಗೆ ಹಾಡನ್ನು ಹೇಳಲು ಸಾಧ್ಯವಾಗದಿದ್ದರೂ ಕೊನೆಯ ಅಕ್ಷರಗಳಾದ ಇ ಐ ಇ ಐ ಓ.. ಅಂತ ಹೇಳಿ ಕವಿತೆಯನ್ನು ಪೂರ್ಣಗೊಳಿಸುತ್ತಾನೆ. ಈ ವೀಡಿಯೋ ನೋಡಿದರೆ ನಿಮ್ಮ ಮುಖದಲ್ಲಿ ಖಂಡಿತ ನಗು ತರಿಸುತ್ತದೆ. ವಿಡಿಯೋ ವೀಕ್ಷಿಸಿ:

ಇದನ್ನೂ ಓದಿ: Viral Video: ಅಯ್ಯಯ್ಯೋ… ಮಹಿಳೆಯ ವಿಡಿಯೋ ವೈರಲ್, ನೀವೂ ನೋಡಿ ನಕ್ಕು ಬಿಡಿ

ವೀಡಿಯೊವನ್ನು ಅಲಿಸನ್ ವಿಡೆಲಾ ಎಂಬವರು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊ tiktok ನಲ್ಲಿ 100k ವೀಕ್ಷಣೆಗಳನ್ನು ಹೊಂದಿದ್ದು, ಈಗ ಅದು 9 ಮಿಲಿಯನ್​ಗೆ ತಲುಪಿದೆ. ಮಗುವಿನ ಹಾಡಿಗೆ ಫಿದಾ ಆದ ನೆಟ್ಟಿಗರು, ಮಗುವನ್ನು ಕೊಂಡಾಡಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:23 pm, Fri, 3 June 22