AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾವಿಗೆ ಇಳಿದು ನೀರು ಕೊಂಡೊಯ್ಯುವ ಪರಿಸ್ಥಿತಿ, ಅಯ್ಯೋ ಈ ಗ್ರಾಮದ ಜನರ ಸ್ಥಿತಿ ಕೇಳುವವರು ಯಾರು?

ಮಧ್ಯಪ್ರದೇಶದಲ್ಲಿ ಪ್ರತಿ ಬೇಸಿಗೆಯಲ್ಲಿ ನೀರಿನ ಕೊರತೆ ಪದೇ ಪದೇ ಕಾಡುತ್ತದೆ. ಅದರಂತೆ ಘುಸಿಯಾ ಗ್ರಾಮದ ಜನರು ಬತ್ತಿ ಹೋದ ಬಾವಿಗೆ ಇಳಿದು ಅದರಲ್ಲಿ ಇರುವ ಅಲ್ಪಸ್ವಲ್ಪ ನೀರನ್ನು ತುಂಬಿಸಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ.

ಬಾವಿಗೆ ಇಳಿದು ನೀರು ಕೊಂಡೊಯ್ಯುವ ಪರಿಸ್ಥಿತಿ, ಅಯ್ಯೋ ಈ ಗ್ರಾಮದ ಜನರ ಸ್ಥಿತಿ ಕೇಳುವವರು ಯಾರು?
ಘುಸಿಯಾ ಗ್ರಾಮದಲ್ಲಿ ನೀರಿನ ಸಮಸ್ಯೆImage Credit source: ANI
TV9 Web
| Edited By: |

Updated on:Jun 03, 2022 | 8:43 PM

Share

ಮಧ್ಯಪ್ರದೇಶ: ರಾಜ್ಯದಲ್ಲಿ ನೀರಿನ ಸಮಸ್ಯೆ (Water Problems) ಹೇಗಿದೆ ಎಂಬುದನ್ನು ಈ ವಿಡಿಯೋ (Video) ತೋರಿಸಿಕೊಡುತ್ತದೆ. ಒಂದು ಬಕೆಟ್ ನೀರಿಗಾಗಿ ಘುಸಿಯಾ ಗ್ರಾಮದ ಜನರು ಬಾವಿಗಳು ಮತ್ತು ಕೊಳಗಳಿಗೆ ಇಳಿದು ಕೊಂಡೊಯ್ಯುವ ಪರಿಸ್ಥಿತಿ ಇದೆ. ವಿಡಿಯೋದಲ್ಲಿ ಸಣ್ಣ ಬಾಲಕಿ, ಪುರುಷ ಹಾಗೂ ಮಹಿಳೆಯೊಬ್ಬಳು ಬಾವಿಗೆ ಇಳಿದು ನೀರು ತುಂಬಿಸಿ ಮೇಲೆ ಕೊಂಡೊಯ್ಯುವ ದೃಶ್ಯಾವಳಿಯನ್ನು ಕಾಣಬಹುದು. ಅಷ್ಟೇ ಅಲ್ಲ, ಬಾವಿಯಲ್ಲಿ ನೀರು ಬತ್ತಿ ಹೋಗಿದ್ದು, ಸಣ್ಣ ತಟ್ಟೆ ಹಿಡಿದುಕೊಂಡು ನೀರನ್ನು ಬಕೆಟ್​ಗಳಿಗೆ ಹಾಕುವುದು ಇನ್ನೊಂದು ಬೇಸರದ ಸಂಗತಿಯಾಗಿದೆ.

ಇದನ್ನೂ ಓದಿ: ಪ್ರಪಂಚದ ಸಮಸ್ಯೆ ಯುರೋಪಿನ ಸಮಸ್ಯೆಯಲ್ಲ ಎಂಬ ಮನಸ್ಥಿತಿಯಿಂದ ಯುರೋಪ್ ಹೊರಬರಲಿ: ಜೈಶಂಕರ್

ಮಹಿಳೆಯು ಯಾವುದೇ ಹಗ್ಗದ ಸಹಾಯ ವಿಲ್ಲದೆ ಏಣಿಯಲ್ಲಿ ಹತ್ತಿದಂತೆ ಬಾವಿಗೆ ಅಳವಿಡಿಸಿದ ಹಿಡಿಯುವಿಕೆಯನ್ನು ಹಿಡಿದು ಹತ್ತುತ್ತಾರೆ. ಕೊಂಚ ಕೈ ತಪ್ಪಿದರೂ ಸಾಕು ಜೀವ ಹೋಗುವುದು ಅಥವಾ ಸೊಂಟ ಮುರಿಯುವುದು ಖಚಿತ. ಈ ವಿಡಿಯೋವನ್ನು ನೋಡಿದಾಗ ಮಧ್ಯಪ್ರದೇಶದ ಘುಸಿಯಾ ಗ್ರಾಮದಲ್ಲಿನ ನೀರನ ಅಭಾವ ಎಷ್ಟಿದೆ ಎಂಬುದನ್ನು ತೋರಿಸಿಕೊಡುತ್ತದೆ. ಘುಸಿಯಾ ಭಾಗದ ಜನರ ಇಂಥ ಕಷ್ಟದ ಪರಿಸ್ಥಿತಿಯನ್ನು ಕೇಳುವವರು ಯಾರು?

ಮಧ್ಯಪ್ರದೇಶದಲ್ಲಿ ಪ್ರತಿ ಬೇಸಿಗೆಯಲ್ಲಿ ನೀರಿನ ಕೊರತೆ ಪದೇ ಪದೇ ಕಾಡುತ್ತದೆ. ರಾಜ್ಯ ಸರಕಾರ 2024ರ ವೇಳೆಗೆ ಪ್ರತಿ ಗ್ರಾಮಕ್ಕೂ ನಲ್ಲಿ ನೀರು ಪೂರೈಸುವುದಾಗಿ ಭರವಸೆ ನೀಡಿದೆ. ಆದರೆ ಇನ್ನೂ ಲಕ್ಷಾಂತರ ಜನರಿಗೆ ಕುಡಿಯುವ ನೀರು ಸಿಗದಂತಾಗಿದೆ. ಘುಸಿಯಾದಲ್ಲಿ, ಕೋಪಗೊಂಡ ಗ್ರಾಮಸ್ಥರು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಈ ವರ್ಷ ಸ್ಥಳೀಯ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ರಷ್ಯಾದಿಂದ ತೈಲ ಆಮದನ್ನು ಸಮರ್ಥಿಸಿಕೊಂಡ ವಿದೇಶಾಂಗ ಸಚಿವ ಜೈಶಂಕರ್, ಟೀಕೆಗಳಿಗೆ ತಿರುಗೇಟು

“ನಾವು ನೀರನ್ನು ಸಂಗ್ರಹಿಸಲು ಬಾವಿಗೆ ಇಳಿಯಬೇಕಾಗಿದೆ. ಇಲ್ಲಿ ಮೂರು ಬಾವಿಗಳಿವೆ, ಎಲ್ಲಾ ಬಹುತೇಕ ಬತ್ತಿಹೋಗಿವೆ. ಯಾವುದೇ ಕೈ ಪಂಪ್‌ಗಳಲ್ಲಿ ನೀರಿಲ್ಲ. ಸರ್ಕಾರಿ ನೌಕರರು ಮತ್ತು ರಾಜಕೀಯ ಮುಖಂಡರು ಚುನಾವಣೆ ಸಮಯದಲ್ಲಿ ಮಾತ್ರ ಬರುತ್ತಾರೆ. ಈ ಬಾರಿ ನಮಗೆ ಸರಿಯಾದ ನೀರು ಸರಬರಾಜು ಮಾಡುವವರೆಗೆ ನಾವು ಮತ ನೀಡುವುದಿಲ್ಲ ಎಂದು ನಿರ್ಧರಿಸಿದ್ದೇವೆ” ಎಂದು ಮಹಿಳೆಯೊಬ್ಬರು ಸುದ್ದಿ ಸಂಸ್ಥೆ ANIಗೆ ತಿಳಿಸಿದರು.

ವಿಡಿಯೋ ನೋಡಿದ ನೆಟ್ಟಿಜನ್​ಗಳು ಅಲ್ಲಿನ ಜನರ ಕಷ್ಟಕ್ಕೆ ಸ್ಪಂದಿಸುವಂತೆ, ಗ್ರಾಮಕ್ಕೆ ತುರ್ತಾಗಿ ಸಹಾಯ ಮಾಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: IND vs SA: ಹೊಸ ಹೇರ್ ಸ್ಟೈಲ್​ನಲ್ಲಿ ಮಿಂಚಿದ ಚಹಾಲ್; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಸಖತ್ ವೈರಲ್

ಭಾರತದ ಕೆಲವೊಂದು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಇಂಥ ನೀರಿನ ಸಮಸ್ಯೆ ಇದ್ದು, ನೀರಿಗಾಗಿ ಜೀವವನ್ನೇ ಪಣಕ್ಕಿಡುವ ಪರಿಸ್ಥಿತಿ ಇದೆ. 2019ರ ಜಾಗತಿಕ ವರದಿಯು ‘ನೀರಿನ ಒತ್ತಡ’, ‘ಅತ್ಯಂತ ಹೆಚ್ಚು’ ಇರುವ 17 ದೇಶಗಳಲ್ಲಿ ಭಾರತವನ್ನೂ ಹೆಸರಿಸಿದೆ. ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್, ಉತ್ತರಾಖಂಡ ಮತ್ತು ಹರಿಯಾಣ ರಾಜ್ಯಗಳು ಬಿಕ್ಕಟ್ಟಿನಿಂದ ಹೆಚ್ಚು ಹಾನಿಗೊಳಗಾಗಿವೆ ಎಂದು ವರದಿ ಹೇಳಿದೆ.

ದೇಶದ ಮೂರನೇ ಎರಡರಷ್ಟು ಜಿಲ್ಲೆಗಳು ಅಂತರ್ಜಲ ಮಟ್ಟ ಕುಸಿಯುವ ಅಪಾಯದಲ್ಲಿದೆ ಎಂದು ವಿಶ್ವಬ್ಯಾಂಕ್ ಹೇಳುತ್ತದೆ. ಭಾರತವು 2050ರ ವೇಳೆಗೆ ತೀವ್ರ ನೀರಿನ ಒತ್ತಡವನ್ನು ಎದುರಿಸಲಿದೆ ಎಂದು ಅಂದಾಜಿಸಲಾಗಿದೆ. 30 ನಗರಗಳು ಹೆಚ್ಚಿನ ಅಪಾಯದ ಮಟ್ಟಕ್ಕೆ ಬೀಳುತ್ತವೆ ಎಂದು ಹೇಳಲಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:39 pm, Fri, 3 June 22

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ