ಗರ್ಬಾ ಕುಣಿತವನ್ನು ಹೀಗೂ ಮಾಡಬಹುದು ಅಂತ ಗುಜರಾತಿನ ಮೂವರು ಮಹಿಳೆಯರು ತೋರಿಸಿದ್ದಾರೆ!

TV9 Digital Desk

| Edited By: Arun Kumar Belly

Updated on: Jun 03, 2022 | 10:17 PM

ಹಾಗೆ ನೋಡಿದರೆ ಫಿಟ್ನೆಸ್ ಮತ್ತು ಕುಣಿತವನ್ನು ಅದ್ಭುತವಾಗಿ ಸಂಯೋಜಿಸಿರುವ ಮಹಿಳೆಯರ ಐಡಿಯಾ ಎಲ್ಲರಿಗೂ ಇಷ್ಟವಾಗಿಲ್ಲ ಮಾರಾಯ್ರೇ, ಸುರಕ್ಷತೆಯ ದೃಷ್ಟಿಯಿಂದ ಇಂಥ ಸಾಹಸಗಳಿಗೆ ಕೈ ಹಾಕುವುದು ಸಲ್ಲ ಅಂತ ಹಲವರು ತಾಕೀತು ಮಾಡಿದ್ದಾರೆ.

ಗರ್ಬಾ ಕುಣಿತ (Garba dance) ಗೊತ್ತಾ ಅಂತ ಕೇಳಿದರೆ ನಿಮಗೆ ಕೋಪ ಬರುತ್ತೆ, ಹೌದು ತಾನೆ? ಗುಜರಾತ್ ಸಂಸ್ಕೃತಿಯ (Gujrat’s culture) ಭಾಗವಾಗಿರುವ ಈ ನೃತ್ಯಕಲೆ ಯಾರಿಗೆ ತಾನೆ ಗೊತ್ತಿಲ್ಲ ಮಾರಾಯ್ರೇ? ಸಾಮಾನ್ಯವಾಗಿ ನವರಾತ್ರಿ (Navaratri) ಸಂದರ್ಭದಲ್ಲಿ ಗರ್ಬಾ ಕುಣಿತದ ಭರಾಟೆ ಜೋರಾಗಿರುತ್ತದೆ. ಸಿನಿಮಾಗಳಲ್ಲೂ ನಾವು ಗರ್ಬಾ ಡ್ಯಾನ್ಸ್ ಸೀಕ್ವೆನ್ಸ್ ಗಳನ್ನು ನಾವು ನೋಡುತ್ತಿರುತ್ತೇವೆ. ಆದರೆ ನಾವಿಲ್ಲಿ ತೋರಿಸುತ್ತಿರುವ ಗರ್ಬಾ ಕುಣಿತ ಈ ಮೊದಲು ನೀವು ಎಲ್ಲೂ ನೋಡಿರಲಾರಿರಿ. ಡ್ಯಾನ್ಸ್ ಅನ್ನು ವೇದಿಕೆ, ಅಂಕಣ ಅಥವಾ ದೊಡ್ಡದಾದ ಮೈದಾನದಲ್ಲಿ ಮಾಡುತ್ತಾರೆ ತಾನೆ? ಆದರೆ ಗುಜರಾತಿನ ಮಹಿಳೆಯರು ಅದನ್ನು ಎಲ್ಲಿ ಮಾಡುತ್ತಿದ್ದಾರೆ ನೋಡಿ.

ಹೌದು ಚಾಲನೆಯಲ್ಲಿರುವ ಟ್ರೆಡ್ ಮಿಲ್ ಮೇಲೆ! ಸಾಂಪ್ರದಾಯಿಕ ಉಡುಗೆಯಲ್ಲಿ ಮೂವರು ಸುಂದರ ಮಹಿಳೆಯರು ಒಂದಿಷ್ಟೂ ಹೆಜ್ಜೆ ತಪ್ಪದೆ ಭೂಮಿ ತ್ರಿವೇದಿಯವರ ಹಾಡು ‘ಗರ್ಬೆ ಕೀ ರಾತ್’ ಹಾಡಿಗೆ ಕುಣಿಯುತ್ತಿದ್ದಾರೆ. ಈ ಕುಣಿತ ನೋಡುವಾಗ ನಿಮಗೆ ‘ದಿಲ್ ಸೆ’ ಚಿತ್ರದ ‘ಛೈಯಾ ಛೈಯಾ’ ಹಾಡು ನೆನಪು ಬಂದಿರಲಿಕ್ಕೂ ಸಾಕು, ಅದನ್ನು ಚಲಿಸುವ ರೈಲಿನ ಮೇಲೆ ಸಂಯೋಜಿಸಲಾಗಿತ್ತು.

View this post on Instagram

A post shared by garba world (400k) (@garba__world)

ಈ ವಿಡಿಯೋವನ್ನು ಗರ್ಬಾ ವರ್ಲ್ಡ್ ಇನ್ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಲಾಗಿದ್ದು 30 ಲಕ್ಷಕ್ಕೂ ಹೆಚ್ಚು ಜನ ಅದನ್ನು ವೀಕ್ಷಿಸಿದ್ದಾರೆ ಮತ್ತು ಒಂದು ಲಕ್ಷ ಜನ ಲೈಕ್ ಮಾಡಿದ್ದಾರೆ.

ಹಾಗೆ ನೋಡಿದರೆ ಫಿಟ್ನೆಸ್ ಮತ್ತು ಕುಣಿತವನ್ನು ಅದ್ಭುತವಾಗಿ ಸಂಯೋಜಿಸಿರುವ ಮಹಿಳೆಯರ ಐಡಿಯಾ ಎಲ್ಲರಿಗೂ ಇಷ್ಟವಾಗಿಲ್ಲ ಮಾರಾಯ್ರೇ, ಸುರಕ್ಷತೆಯ ದೃಷ್ಟಿಯಿಂದ ಇಂಥ ಸಾಹಸಗಳಿಗೆ ಕೈ ಹಾಕುವುದು ಸಲ್ಲ ಅಂತ ಹಲವರು ತಾಕೀತು ಮಾಡಿದ್ದಾರೆ.

ಈ ಮೂವರಲ್ಲಿ ಯಾರಾದರೊಬ್ಬರಿಗೆ ಸಮನ್ವಯತೆ ಮಿಸ್ ಆದರೆ ಅಥವಾ ರಿದಮ್ ಕಳೆದುಕೊಂಡರೆ ಅದು ಅಪಾಯಕಾರಿಯಾಗಿ ಪರಿಣಮಿಸಬಹುದು ಅಂತ ಅವರು ಹೇಳಿದ್ದಾರೆ. ಇದನ್ನೇ ಅಭ್ಯಾಸ ಮಾಡಿಕೊಳ್ಳಬಾರದು ಅಂತ ಸಲಹೆಯನ್ನು ಸಹ ಅವರು ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada