S.P. Balasubrahmanyam Birth Anniversary: ‘ಅಮೃತಧಾರೆ’ಯ ನಂತರ ಎಷ್ಟು ಸಿನೆಮಾ ಹಾಡು ಹಾಡಿದಿರಿ’ ಎಸ್​ಪಿಬಿ ಸುಪ್ರಿಯಾಗೆ ಕೇಳಿದಾಗ

SPB : ‘ಈವತ್ತು ವೆರಿ ಬ್ಯಾಡ್ ಪರ್ಫಾರ್ಮನ್ಸ್’ ಎಂದರು. ನನ್ನದಾ ಸರ್ ಅಂದೆ. ‘ಇಲ್ಲಮ್ಮಾ ನೀವೆಲ್ಲಾ ಚೆನ್ನಾಗಿ ಹಾಡಿದಿರಿ. ನಾನೇ ಚೆನ್ನಾಗಿ ಹಾಡಲಿಲ್ಲ. ಆದರೆ ನಿಮಗ್ಯಾರಿಗೂ ಇದು ಗೊತ್ತಾಗಲೇ ಇಲ್ಲ’ ಎಂದರು.

S.P. Balasubrahmanyam Birth Anniversary: ‘ಅಮೃತಧಾರೆ’ಯ ನಂತರ ಎಷ್ಟು ಸಿನೆಮಾ ಹಾಡು ಹಾಡಿದಿರಿ’ ಎಸ್​ಪಿಬಿ ಸುಪ್ರಿಯಾಗೆ ಕೇಳಿದಾಗ
ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಸುಪ್ರಿಯಾ ರಘುನಂದನ್
Follow us
|

Updated on:Jun 04, 2022 | 11:42 AM

S.P. Balasubrahmanyam Birth Anniversary: ಎಸ್. ಪಿ. ಸರ್ ಅವರೊಂದಿಗೆ ಭೇಟಿಯ ಅವಕಾಶ ಕಡಿಮೆಯೇ ಆದರೂ ಪ್ರತೀ ಭೇಟಿಯೂ ವಿಶೇಷ. ನಾನಾಗ ‘ಅಮೃತಧಾರೆ’ ಹಾಡಿ ಒಂದು ವರ್ಷ ಆಗಿತ್ತು. ಈಟಿವಿಯ ‘ಎದೆತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ನನ್ನ ತಲೆಮಾರಿನ ಗಾಯಕರನ್ನು ಅತಿಥಿಗಳನ್ನಾಗಿ ಕರೆಯುವ ಪರಿಪಾಠವಿತ್ತು. ನನ್ನನ್ನು ಒಮ್ಮೆ ಕರೆದರು. ಆ ದಿನ ಎಸ್​ಪಿ ಸರ್, ‘ನಾನು ಏರ್ಪೋರ್ಟ್​ನಿಂದ ಬರುವಾಗ ಅಚಾನಕ್ ಆಗಿ ಅಮೃತಧಾರೆ ಹಾಡನ್ನು ಕೇಳಿದೆ. ನಂತರ ಇದನ್ನು ಹಾಡಿದ್ದು ಸುಪ್ರಿಯಾ ಅಂತ ಗೊತ್ತಾಯಿತು.  ಧ್ವನಿ, ಎಕ್ಸ್​ಪ್ರೆಷನ್​ ಬೇರೆಯೇ ಇದೆ. ಸಿನೆಮಾದ ಟಿಪಿಕಲ್​ ಧ್ವನಿಯಂತೆ ಇಲ್ಲ ಯಾರು ಈ ಹುಡುಗಿ ಎಂದು ವಿಚಾರಿಸಿದೆ. ಕನ್ನಡದ ಹುಡುಗಿ ಎಂದು ಗೊತ್ತಾಗಿ ಇನ್ನೂ ಖುಷಿ ಆಯಿತು. ಇವರು ಈಗಾಗಲೇ ಎಷ್ಟು ಗೀತೆ ಹಾಡಿದಾರೆ ಅಂತ ಕೇಳಿದೆ. ನನಗೆ ಉತ್ತರ ಸಿಗಲಿಲ್ಲ. ಈಗ ನಿಮ್ಮನ್ನು ಕೇಳ್ತಿದೀನಿ ಇದೇ ಪ್ರಶ್ನೆ’ ಅಂದರು. ಇಲ್ಲ ಸರ್ ಇದಾದ ಮೇಲೆ ನಾನೂ ಸಿನೆಮಾಗೆ ಹಾಡಲೇ ಇಲ್ಲ ಎಂದಾಗ ಆಶ್ಚರ್ಯ ವ್ಯಕ್ತಪಡಿಸಿದರು. ಇದು ಪ್ರಸಾರವಾಯಿತೋ, ಎಡಿಟ್ ಆಯಿತೋ ಗೊತ್ತಿಲ್ಲ. ಸುಪ್ರಿಯಾ ರಘುನಂದನ, ಗಾಯಕಿ (Supriya Raghunandan)

ಅವರ ಒಂದೊಂದು ಮಾತು, ಗುಣದಲ್ಲಿ ಎಂಥ ಶಕ್ತಿ ಇದೆ, ಪ್ರೇರಣೆ ಇದೆ. ಚಿಕ್ಕವರೇ ಆಗಲಿ ದೊಡ್ಡವರೇ ಆಗಲಿ ಕಲಾವಿದರಲ್ಲಿ ಪರಿಶ್ರಮ ಇದೆ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದಾಗ ಮುಕ್ತವಾಗಿ ಪ್ರೋತ್ಸಾಹಿಸುತ್ತಿದ್ದರು, ಗೌರವಿಸುತ್ತಿದ್ದರು. ಅವರು ನಡೆಸಿಕೊಡುತ್ತಿದ್ದ ಆ ಕಾರ್ಯಕ್ರಮದಲ್ಲಿ ನೇರ ಮಾತು, ಪ್ರತಿಭೆಗೆ ಮಾತ್ರ ಅವಕಾಶ. ಪ್ರತಿಭೆ ಪರಿಶ್ರಮ ಮತ್ತು ಕಲೆ ಬಿಟ್ಟರೆ ಅಲ್ಲಿ ಬೇರೆ ಯಾವ ಸಂಗತಿಗಳಿಗೂ ಜಾಗವಿರಲಿಲ್ಲ. ಈಗಿನ ರಿಯಾಲಿಟಿ ಶೋಗಳಂತೆ ಗ್ಲಾಮರ್​ಗೆ ಒತ್ತು ಕೊಡುತ್ತಿರಲಿಲ್ಲ. ಯಾವುದೇ ಹೈಪ್​ ಇಲ್ಲದೆ ಪ್ರತಿಭೆಗೆ ಎಲ್ಲಿ ಮನ್ನಣೆ ಸಿಗುವಂಥ ಕಾರ್ಯಕ್ರಮಗಳು ಪ್ರಸಾರವಾಗುತ್ತವೆಯೋ, ನಡೆಯುತ್ತವೆಯೋ ಅಲ್ಲೆಲ್ಲ ಎಸ್​ ಪಿ ಸರ್ ಇರುತ್ತಾರೆ ಎಂಬ ನಂಬಿಕೆ ನನ್ನದು.

ಇದನ್ನೂ ಓದಿ : Zakir Hussain’s Birthday: ‘ಝಾಕೀರ್ ಹದಿನೆಂಟು ವರ್ಷಗಳ ಕಾಲ ಮಾನಸ ಗುರುವಾಗಿದ್ದರು’ ಮುತ್ತುಕುಮಾರ್

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ಮುಂದೆ ಅವರು ತಮ್ಮೊಂದಿಗೆ ಅಮೆರಿಕಾದ ಕಾನ್ಸರ್ಟ್ ಟೂರ್​ಗೆ ಆಹ್ವಾನಿಸಿದರು. ಕೊನೇ ಹಂತದಲ್ಲಿ ಕಾರಣಾಂತರಗಳಿಂದ ಹೋಗಲಾಗಲಿಲ್ಲ. ಇದಾದ ಕೆಲ ವರ್ಷಗಳ ನಂತರ ಬೆಂಗಳೂರಿನಲ್ಲಿ ಪ್ರಣಯ ರಾಜಾ ಶ್ರೀನಾಥ ಅವರ ಕಾರ್ಯಕ್ರಮ. ಎಸ್​ ಪಿ ಅವರೊಂದಿಗೆ ನಾಲ್ಕು ಡ್ಯುಯೆಟ್ ಹಾಡುವ ಅವಕಾಶ. ಕಾರ್ಯಕ್ರಮ ಮುಗಿದ ಮೇಲೆ ಏನೋ ತಳಮಳ. ಅದಕ್ಕೆ ಕಾರಣ ಅವರ ಸಿಂಪ್ಲಿಸಿಟಿ. ಈ ಸಿಂಪ್ಲಿಸಿಟಿ ಕೂಡ ಭಯ ಹುಟ್ಟಿಸತ್ತೆ, ತಪ್ಪು ಮಾಡಿದಾಗಲೂ ಏನೂ ಹೇಳದೇ ಇರುತ್ತಾರಲ್ಲ! ‘ರಾಶಿ ಹೂವ ತಂದೆ ನಿನ್ನ ಹೂದೋಟದಿ’ ಈ ಹಾಡಿನ ಸಂಗತಿಯನ್ನು ಹಾಡುವಾಗ ಮೂರು ನಾಲ್ಕು ಸಲ ರಿಪೀಟ್ ಮಾಡಿಸಿದ್ದರು. ಒಂದಾದರೂ ಸಂಗತಿ ಸರಿ ಬಂದಿರಬಹುದೇ? ಅಥವಾ ಒಂದೂ ಸರಿ ಅನ್ನಿಸದೇ ಹೋಯಿತೇ? ಈ ಬಗ್ಗೆ ಹೇಳುತ್ತಾರೇನೋ ಎಂದು ಯೋಚಿಸುತ್ತ ಕುಳಿತೆ.

SP Balasubrahmanyam Birth Anniversary Singer Supriya Raghunandan shared her memories

ಅಮ್ಮ ಮತ್ತು ಎಸ್​ಪಿಬಿಯವರೊಂದಿಗೆ ಸುಪ್ರಿಯಾ

ಕೋರಸ್​ ಆರ್ಟಿಸ್ಟ್, ಮ್ಯೂಸಿಷಿಯನ್ಸ್​ ಎಲ್ಲರನ್ನೂ ಮಾತನಾಡಿಸುತ್ತಾ ಎಲ್ಲರೂ ಚೆನ್ನಾಗಿ ನುಡಿಸಿದಿರಿ ಹಾಡಿದಿರಿ ಎಂದು ಹೇಳುತ್ತಾ ಕೊನೆಗೆ ನನ್ನ ಬಳಿ ಬಂದರು. ಸರ್, ತಪ್ಪಾಗಿದ್ರೆ ಕ್ಷಮಿಸಿ ಅಂದೆ. ‘ಈವತ್ತು ವೆರಿ ಬ್ಯಾಡ್ ಪರ್ಫಾರ್ಮನ್ಸ್’ ಎಂದರು. ನನ್ನದಾ ಸರ್ ಅಂದೆ. ‘ಇಲ್ಲಮ್ಮಾ ನೀವೆಲ್ಲಾ ಚೆನ್ನಾಗಿ ಹಾಡಿದಿರಿ. ನಾನೇ ಚೆನ್ನಾಗಿ ಹಾಡಲಿಲ್ಲ. ಆದರೆ ನಿಮಗ್ಯಾರಿಗೂ ಇದು ಗೊತ್ತಾಗಲೇ ಇಲ್ಲ. ಇದೇ ಇದಕ್ಕೇ ಎಕ್ಸ್​ಪೀರಿಯನ್ಸ್​ ಅನ್ನುವುದು. ನಮ್ಮ ತಪ್ಪುಗಳನ್ನು ಏರಿಳಿತಗಳನ್ನು ಮುಚ್ಚಿ ಹಾಕೋಕೆ ಬರುವಂಥದ್ದೊಂದು ‘ಕಲೆ’ ಇದೆ. ಅದೆಲ್ಲ ಅನುಭವದಿಂದ ಬರುವಂಥದ್ದು. ಕ್ರಮಿಸುತ್ತ ಹೋದಂತೆ ನಿಮಗೂ, ಪ್ರತಿಯೊಬ್ಬರಿಗೂ ಬರುವಂಥದ್ದು ಎಂದರು. ಇದು ಮರೆಯಲಾಗದ ಪಾಠ.

ಇದನ್ನೂ ಓದಿ : World Chocolate Day 2021 : ಸುಪ್ರಿಯಾ ‘ಫೆರೆರೋಧಾರೆ’ಯೊಂದಿಗೆ ‘ಪಿಂಕಿ’ಯ ಟ್ಯಾಂಗೋ ಜುಗಲಬಂದಿ

ಅವತ್ತಿನಿಂದ ನನ್ನ ಯೋಚನೆ ಧಾಟಿ ಬದಲಾಯಿತು. ಏಕೆಂದರೆ ಕಾರ್ಯಕ್ರಮ ಮುಗಿದ ನಂತರ ಸರಿ ತಪ್ಪುಗಳು, ಹೆಚ್ಚಿನ ನಿರೀಕ್ಷೆಗಳು ಅವರವರ ಪ್ರಸ್ತುತಿಯ ಬಗ್ಗೆ ಅವರಿಗೇ ಕಾಡುತ್ತಿರುತ್ತಲೇ ಇರುತ್ತವೆ. ಆ ತಳಮಳ ಅನುಭವಿಸಿದವರಿಗೇ ಗೊತ್ತು. ಆದರೆ, ‘ನೋಟವಿರಲಿ ಆಟದಿ ಗೆಲುವ ಆಸೆ ಮನದಲಿ ಸೋತರೇನು ಆಟ ತಾನೆ ಎನುವ ಜಾಣ್ಮೆ’ ಎಂಬಂತೆ ಸಾಗಿದಾಗ ಮಾತ್ರ ನಮ್ಮ ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳೋದಕ್ಕೆ ಸಾಧ್ಯವಾಗೋದು. ನಮ್ಮಲ್ಲಿ ಏನಿದೆಯೋ ಆ ಕ್ಷಣದಲ್ಲಿ ಅದೆಲ್ಲವನ್ನೂ ಧಾರೆ ಎರೆದುಬಿಡಬೇಕು. ಉಳಿದದ್ದು ಮುಂದಿನ ಚಿತ್ತ.

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 11:21 am, Sat, 4 June 22

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು