
Viral Video : ನಾಯಿ ಬೆಕ್ಕು ಆಜನ್ಮ ವೈರಿಗಳು ಎನ್ನುವುದನ್ನು ಹೇಗೆ ನಂಬುವುದು ಈ ವಿಡಿಯೋ ನೋಡಿದ ಮೇಲೆ? ಈ ಪುಟ್ಟ ಬೆಕ್ಕು ಅದು ಹೇಗೆ ಇಲ್ಲಿ ನೀರಿನಲ್ಲಿ ಕುಳಿತಿದೆಯೋ ಗೊತ್ತಿಲ್ಲ. ಈ ಮನೆಯ ನಾಯಿ ಅದನ್ನು ಮೈದಡವುತ್ತ ಮಾತನಾಡಿಸುತ್ತಿದೆ. ಆ ಸಿಂಕ್ನಿಂದ ಅದನ್ನು ಹೊರತೆಗೆಯಲು ಪ್ರಯತ್ನಿಸುತ್ತಿದೆ. ಎಂಥ ಆಪ್ತವಾಗಿದೆಯಲ್ಲ ಈ ವಿಡಿಯೋ. ನೆಟ್ಟಿಗರಲ್ಲಿ ಕೆಲವರು ಮೂಕವಿಸ್ಮಿತರಾಗಿದ್ದಾರೆ ಇನ್ನೂ ಕೆಲವರು ಕುಪಿತಗೊಂಡಿದ್ದಾರೆ.
ಆಯಾ ಪ್ರಾಣಿಗಳ ನಡುವೆ ವೈರತ್ವ ಇದ್ದರೂ ಒಬ್ಬಂಟಿಯಾಗಿರುವ ಮರಿಗಳನ್ನು ನೋಡಿದಾಗ ಅದು ಹೇಗೋ ವಾತ್ಸಲ್ಯ ಉಕ್ಕಿ ಬಂದುಬಿಡುತ್ತದೆ. ಆಗ ತಮ್ಮದೇ ಮರಿ ಎಂಬಂತೆ ಪ್ರೀತಿಸುತ್ತ ಪೋಷಿಸಲು ಶುರು ಮಾಡುತ್ತವೆ. ಮೇಲಿನ ವಿಡಿಯೋ ಇದಕ್ಕೆ ಸಾಕ್ಷಿ. ಈ ವಿಡಿಯೋ ಅನ್ನು ಸುಮಾರು 30,000 ಜನರು ವೀಕ್ಷಿಸಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ಧಾರೆ.
ಇದನ್ನೂ ಓದಿ : ಮೇಆಂವೂ? ಲಗೇಜಿನೊಳಗೆ ಬೆಕ್ಕು; ನ್ಯೂಯಾರ್ಕ್ ಏರ್ಪೋರ್ಟ್ನಲ್ಲಿ ನಡೆದ ಅಚ್ಚರಿಯ ಘಟನೆ
ಎಷ್ಟೊಂದು ಮೆಲ್ಲನೇ ಅದರ ನೆತ್ತಿಯನ್ನು ಮುಟ್ಟುತ್ತಿದೆ ನೋಡಿ ಆ ನಾಯಿ ಎಂದಿದ್ದಾರೆ ಒಬ್ಬರು. ಛೆ! ಈ ಪುಟಾಣಿಯನ್ನು ನೀರಿನಲ್ಲಿ ಹಾಕಿದ್ದು ಯಾರು? ಎಂದು ಕೇಳಿದ್ದಾರೆ ಇನ್ನೊಬ್ಬರು. ಎಂಥ ಕ್ರೂರಿಗಳು ಈ ಮನೆಯ ಜನರು, ಅದನ್ನು ಹೀಗೆ ನೀರಿನಲ್ಲಿ ಹಾಕಿದ್ದಾರಲ್ಲ ಎಂದು ಇನ್ನೂ ಒಬ್ಬರು ಕೋಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ರಾಶಿ ಪೆಂಗ್ವಿನ್ಗಳ ಮಧ್ಯೆ ಮೂರು ಬೆಕ್ಕುಗಳು ಅಡಗಿವೆ, ನೀವು ಹುಡುಕೇ ಹುಡುಕುತ್ತೀರಿ
ಹೊಸ ಮನೆಗೆ ಹೊಂದಿಕೊಳ್ಳುವಲ್ಲಿ ಮರಿ ಕಷ್ಟಪಡುತ್ತಿರಬಹುದು, ತನ್ನ ತಾಯಿಯನ್ನು ಹುಡುಕಿಕೊಂಡು ಹೋಗುವಾಗ ಹೀಗೆ ಸಿಂಕಿನೊಳಗೆ ಇಳಿದಿರಬಹುದು ಎಂದು ಸದ್ಯಕ್ಕೆ ಸಮಾಧಾನ ಮಾಡಿಕೊಳ್ಳೋಣವೇ. ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:22 pm, Sat, 13 May 23