ಹೈದರಾಬಾದ್‌ನಲ್ಲಿ ಸೋಮವಾರ ರಾತ್ರಿ ಪಾನಮತ್ತ ವ್ಯಕ್ತಿಯೊಬ್ಬ ಪೊಲೀಸ್ ವಾಹನದ ಮೇಲೆ ಹತ್ತಿಕೊಂಡು ಜಾಲಿ ರೈಡ್ ಹೋದ ವಿಲಕ್ಷಣ ಘಟನೆ ನಡೆದಿದ್ದು, ಸದ್ಯ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪಾನಮತ್ತ ವ್ಯಕ್ತಿ ಚಲಿಸುತ್ತಿರುವ ಪೊಲೀಸ್ ಕಾರಿನ ಮೇಲೆ ಶರ್ಟ್ ಇಲ್ಲದೆ ಕುಳಿತುಕೊಂಡು ಉತ್ಸಾಹದಲ್ಲಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ. ಇಂಡಿಯಾ. ಕಾಮ್ ಪ್ರಕಾರ ಹೈದರಾಬಾದ್‌ನ ಆಸಿಫ್ ನಗರ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಗಲಾಟೆಯನ್ನು ಸೃಷ್ಟಿಸಿದ ವ್ಯಕ್ತಿಯನ್ನು ಅಜಯ್ ಸಿಂಗ್ (28) ಎಂದು ಗುರುತಿಸಲಾಗಿದೆ. ಈತ ಕುಡಿದ ಮತ್ತಿನಲ್ಲಿ ಪೊಲೀಸ್ ಗಸ್ತು ಕಾರಿನ ವಿಂಡ್‌ಶೀಲ್ಡ್ ಮತ್ತು ಹಿಂಬದಿಯ ಮಿರರ್ನ್ನು ಒಡೆದು ಹಾಕಿದ್ದಾನೆ.
ఈ దృశ్యం మన హైదరాబాద్ లోనే…
ఆసిఫ్ నగర్ లో మందుబాబులు పోలీసు వాహనం ఎక్కి వీరంగం వేసి, వాహనం అద్దాలు ధ్వంసం చేశారు. మద్యం మత్తులో హత్యలు, అత్యాచారాలు దాటి పోలీసు వాహనాలపై దాడులు చేసే స్థాయికి పరిస్థితి వచ్చింది.
ఈ నగరాన్ని… ఈ పాలనను ఇలాగే వదిలేద్దామా!? పౌర సమాజం ఆలోచన చెయ్యాలి. pic.twitter.com/jIHrYnBtZi— Revanth Reddy (@revanth_anumula) June 14, 2022
ಈ ವಿಲಕ್ಷಣ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎ. ರೇವಂತ್ ರೆಡ್ಡಿ ಅವರು ಟ್ವಿಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮದ್ಯವು ಅತ್ಯಾಚಾರ ಮತ್ತು ಕೊಲೆಗೆ ಮಾತ್ರವಲ್ಲದೆ ಪೊಲೀಸ್ ವಾಹನಗಳ ಮೇಲೆ ದಾಳಿಗೂ ಕಾರಣವಾಯಿತು ಎಂದು ಅವರು ಬರೆದುಕೊಂಡಿದ್ದಾರೆ. ಸೋಮವಾರ ರಾತ್ರಿ ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಗಲಾಟೆ ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರನ್ನು ಸ್ವೀಕರಿಸಿದ ನಂತರ, ಪೊಲೀಸ್ ಗಸ್ತು ವಾಹನವು ಆ ಪ್ರದೇಶವನ್ನು ತಲುಪಿದ್ದು, ಟ್ರಾಫಿಕ್ನಲ್ಲಿ ನಿಧಾನವಾಗಿ ಸಾಗುತ್ತಿದ್ದಾಗ ವಾಹನದ ಮೇಲೆ ಸಿಂಗ್ ಆಶ್ಚರ್ಯಚಕಿತವಾಗಿ ಹತ್ತಿದ್ದಾನೆ.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸತತ 3ನೇ ದಿನ ಇಡಿ ವಿಚಾರಣೆ ಎದುರಿಸಲಿರುವ ರಾಹುಲ್ ಗಾಂಧಿ
ಈ ಕುರಿತು ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು, ಆತ ಕುಡಿದು ಜಗಳ ಮಾಡಿ, ತೊಂದರೆ ಸೃಷ್ಟಿಸಿ ಜನರಿಗೆ ಬೆದರಿಕೆ ಹಾಕುತ್ತಿದ್ದ. ನಮ್ಮ ಅಧಿಕಾರಿಗಳು ಆಗಮಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು. ಅವನು ಮೊದಲು ಹೊರಟುಹೋಗಿದ್ದು, ಇದ್ದಕ್ಕಿದ್ದಂತೆ ಕೊಡಲಿಯಂತಹ ಆಯುಧದೊಂದಿಗೆ ಹಿಂತಿರುಗಿ ಚಲಿಸುತ್ತಿದ್ದ ಗಸ್ತು ಕಾರಿನ ಮೇಲೆ ಹಾರಿದ್ದಾನೆ. ಇದೆಲ್ಲವೂ ಎಷ್ಟು ವೇಗವಾಗಿ ನಡೆಯಿತು ಎಂದರೆ ನಮ್ಮ ಅಧಿಕಾರಿಗಳೂ ಆಶ್ಚರ್ಯಚಕಿತರಾದರು. ಬಹಳ ಕಷ್ಟಪಟ್ಟು ಆತನನ್ನು ಬಂಧಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:15 am, Wed, 15 June 22