AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪುಟಾಣಿ ತೊದಲು ನುಡಿಯಲ್ಲಿ ಬೈಯುತ್ತಿದ್ದರೆ ಮುಗುಳುನಗೆ ಬೀರಿದ ತಂದೆ

ಪುಟ್ಟ ಮಕ್ಕಳ ಆಟ ತುಂಟಾಟಗಳನ್ನು ನೋಡುವುದೇ ಚಂದ. ಈ ಪುಟಾಣಿಗಳ ತೊದಲು ನುಡಿಯನ್ನು ಕೇಳುವುದು ಇನ್ನು ಚಂದ. ಪುಟ್ಟ ಮಕ್ಕಳು ತೊದಲು ನುಡಿಯಲ್ಲಿ ಬೈಯುತ್ತಿದ್ದರೆ ಬಾಚಿ ತಬ್ಬಿ ಮುದ್ದಾಡಬೇಕೆನಿಸುತ್ತದೆ. ಇದೀಗ ಪುಟಾಣಿಯೊಂದು ತನ್ನ ತಂದೆಗೆ ತನ್ನದೇ ಭಾಷೆಯಲ್ಲಿ ಬೈಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ.

Video: ಪುಟಾಣಿ ತೊದಲು ನುಡಿಯಲ್ಲಿ ಬೈಯುತ್ತಿದ್ದರೆ ಮುಗುಳುನಗೆ ಬೀರಿದ ತಂದೆ
ವೈರಲ್‌ ವಿಡಿಯೋImage Credit source: Facebook
ಸಾಯಿನಂದಾ
|

Updated on: Apr 15, 2026 | 7:27 PM

Share

ಮಗಳು ಎಲ್ಲರಿಗೂ ಹುಟ್ಟೋದಿಲ್ಲ, ಪುಣ್ಯವಂತರಿಗೆ ಮಾತ್ರ ಮಗಳು ಹುಟ್ಟೋದು ಎನ್ನುವ ಮಾತಿದೆ. ಮಗಳು ಹುಟ್ಟಿದರೆ ಸಂಭ್ರಮಿಸುವ ಅಪ್ಪಂದಿರು (father) ಇದ್ದಾರೆ. ಹೌದು, ಪ್ರತಿಯೊಬ್ಬ ಅಪ್ಪನಿಗೆ ಮುದ್ದಿನ ಮಗಳು ಪುಟ್ಟ ರಾಜಕುಮಾರಿಯಾಗಿರುತ್ತಾಳೆ. ಇತ್ತ ತಂದೆ ಮಗಳ ತೊದಲ ನುಡಿ ಕೇಳುತ್ತ  ಎಲ್ಲಾ ನೋವನ್ನು ಮರೆಯುತ್ತಾನೆ. ಈ ದೃಶ್ಯ ನೋಡಿದ್ರೆ ನಿಮಗೂ ಕೂಡ ಹಾಗೆ ಅನಿಸುತ್ತದೆ. ಆದರೆ ಇಲ್ಲೊಂದು ಪುಟಾಣಿ ತನ್ನ ತಂದೆಗೆ ತನ್ನದೇ ಭಾಷೆಯಲ್ಲಿ ಬೈಯುತ್ತಿದೆ. ಮಗಳ ಮುದ್ದು ಮುದ್ದಾದ ಬೈಗುಳದ ಮಾತು ಕೇಳಿ ತಂದೆ ಮುಗುಳುನಗೆ ಬೀರಿರುವ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ತಂದೆ ಮಗಳ ಬಾಂಧವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Acrostic ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ತಂದೆಯೂ ಬೆಡ್ ಮೇಲೆ ಕುಳಿತಿರುವುದನ್ನು ಕಾಣಬಹುದು. ಎದುರಿಗೆ ನಿಂತಿದ್ದ ಪುಟಾಣಿ ತನ್ನ ತೊದಲು ಭಾಷೆಯಲ್ಲಿ ಅಪ್ಪನಿಗೆ ಬೈಯುತ್ತಿದೆ. ಮುದ್ದಿನ ಮಗಳ ಬೈಗುಳ ಕೇಳುತ್ತಾ ಆ ವ್ಯಕ್ತಿ ಮುಗುಳು ನಗುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮಗಳ ತೊಡೆ ಮೇಲೆ ತಲೆಯಿಟ್ಟು ಹಾಯಾಗಿ ಮಲಗಿದ ತಂದೆ; ಎಷ್ಟು ಚಂದ ನೋಡಿ ಈ ಬಾಂಧವ್ಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಕ್ಯೂಟ್ ಎಂದರೆ ಮತ್ತೊಬ್ಬರು, ತಂದೆಗೆ ಮಗಳೇ ಎರಡನೇ ತಾಯಿ ಎಂದು ಹೇಳಿದ್ದಾರೆ. ಇನ್ನೊಬ್ಬರು ಪುಣ್ಯವಂತರಿಗೆ ಮಾತ್ರ ಮಗಳು ಹುಟ್ಟೋದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೊಯಮತ್ತೂರಿನ ಬೇಕರಿಯಿಂದ 10,000 ರೂ. ಸಿಗರೇಟ್ ಪ್ಯಾಕೆಟ್ ಕದ್ದ ಕಳ್ಳ!
ಕೊಯಮತ್ತೂರಿನ ಬೇಕರಿಯಿಂದ 10,000 ರೂ. ಸಿಗರೇಟ್ ಪ್ಯಾಕೆಟ್ ಕದ್ದ ಕಳ್ಳ!
ಪರಿಷತ್ 5 ಸ್ಥಾನ ಗೆಲ್ಲಲು ಬಿಗ್ ಪ್ಲಾನ್, ಡಿಕೆಶಿ ತಂತ್ರಗಾರಿಕೆ ಹೇಗಿದೆ?
ಪರಿಷತ್ 5 ಸ್ಥಾನ ಗೆಲ್ಲಲು ಬಿಗ್ ಪ್ಲಾನ್, ಡಿಕೆಶಿ ತಂತ್ರಗಾರಿಕೆ ಹೇಗಿದೆ?
ಮೋದಿ ಬಹಳ ಸುಂದರ ವ್ಯಕ್ತಿ; ಗೆಳೆಯನನ್ನು ಹೊಗಳಿದ ಟ್ರಂಪ್
ಮೋದಿ ಬಹಳ ಸುಂದರ ವ್ಯಕ್ತಿ; ಗೆಳೆಯನನ್ನು ಹೊಗಳಿದ ಟ್ರಂಪ್
ವಿಧಾನಪರಿಷತ್ ಎಲೆಕ್ಷನ್: ಎಚ್​​​ಡಿಕೆ, ಡಿಕೆ ನಂಬರ್ ಗೇಮ್ ಹೇಗಿದೆ?
ವಿಧಾನಪರಿಷತ್ ಎಲೆಕ್ಷನ್: ಎಚ್​​​ಡಿಕೆ, ಡಿಕೆ ನಂಬರ್ ಗೇಮ್ ಹೇಗಿದೆ?
ಈ ವರ್ಷದ ಬಿಗ್ ಬಾಸ್ ಟಿಆರ್​ಪಿ ಬಗ್ಗೆ ನನಗೆ ಭಯ ಶುರು ಆಗಿದೆ: ತುಕಾಲಿ ಸಂತು
ಈ ವರ್ಷದ ಬಿಗ್ ಬಾಸ್ ಟಿಆರ್​ಪಿ ಬಗ್ಗೆ ನನಗೆ ಭಯ ಶುರು ಆಗಿದೆ: ತುಕಾಲಿ ಸಂತು
ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ
ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ