Viral Video: ಹಳ್ಳಕ್ಕೆ ಬಿದ್ದ ಆನೆಯನ್ನು ರಕ್ಷಿಸಿದ ಕೊಡಗು​ ರಕ್ಷಣಾ ಸಿಬ್ಬಂದಿ; ಮೇಲಕ್ಕೆದ್ದು ಬಂದ ಆನೆಯ ಪ್ರತಿಕ್ರಿಯೆ ನೋಡಿ

|

Updated on: May 20, 2021 | 2:43 PM

ಹಳ್ಳದಲ್ಲಿ ಬಿದ್ದು, ಮೇಲೇರಲು ಪ್ರಯತ್ನಿಸುತ್ತಿದ್ದ ಆನೆಗೆ ಕೊಡಗಿನ ರಕ್ಷಣಾ ಸಿಬ್ಬಂದಿ ಸಹಾಯ ಮಾಡಿದ್ದಾರೆ. ಮೇಲೇರಿದ ಆನೆಯ ಪ್ರತಿಕ್ರಿಯೆ ಹೇಗಿತ್ತು? ವಿಡಿಯೋ ಇಲ್ಲಿದೆ ನೋಡಿ..

Viral Video: ಹಳ್ಳಕ್ಕೆ ಬಿದ್ದ ಆನೆಯನ್ನು ರಕ್ಷಿಸಿದ ಕೊಡಗು​ ರಕ್ಷಣಾ ಸಿಬ್ಬಂದಿ; ಮೇಲಕ್ಕೆದ್ದು ಬಂದ ಆನೆಯ ಪ್ರತಿಕ್ರಿಯೆ ನೋಡಿ
ಹಳ್ಳಕ್ಕೆ ಬಿದ್ದ ಆನೆಯನ್ನು ರಕ್ಷಿಸಿದ ಕೊಡಗು​ ರಕ್ಷಣಾ ಸಿಬ್ಬಂದಿ
Follow us on

ಇಲ್ಲೊಂದು ಆನೆ ಹಳ್ಳಕ್ಕೆ ಬಿದ್ದು ಮೇಲೇರಲು ಒದ್ದಾಡುತ್ತಿದೆ. ಅದೆಷ್ಟೇ ಪ್ರಯತ್ನ ಪಟ್ಟರೂ ಹಳ್ಳದಿಂದ ಮೇಲ್ಬರಲು ದಿಕ್ಕುತೋಚದೇ ತಳಮಳಿಸುತ್ತಿತ್ತು. ಇದನ್ನು ಗಮನಿಸಿದ ಕೊಡಗು ರಕ್ಷಣಾ ಸಿಬ್ಬಂದಿ ಜೆಸಿಬಿ ಯಂತ್ರದಿಂದ ಆನೆಯನ್ನು ಹಳ್ಳದಿಂದ ಮೇಲಕ್ಕೆತ್ತಿದ್ದಾರೆ. ಘಟನೆ ಕೊಡಗಿ​ನಲ್ಲಿ ನಡೆದಿದ್ದು ಮಾನವೀಯತೆ ಮೆರೆದ ರಕ್ಷಣಾ ಸಿಬ್ಬಂದಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೇಲ್ಬಂದ ಆನೆ ಕೃತಜ್ಞತೆ ಹೇಳಿದ ರೀತಿ ಮನಕಲಕುವಂತಿದೆ.

ಆನೆಯನ್ನು ಹಳ್ಳದಿಂದ ಹೇಗೆ ಮೇಲೆಕ್ಕೆ ತರಲಾಗಿದೆ ಎಂಬುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಹಳ್ಳಕ್ಕೆ ಬಿದ್ದ ಆನೆ ಧರೆ ಹಿಡಿದು ಮೇಲ್ಬರಲು ಪ್ರಯತ್ನಿಸುತ್ತಿದೆ. ಎಷ್ಟೇ ಪ್ರಯತ್ನಿಸಿದರೂ ಮೇಲ್ಬರಲು ಸಾಧ್ಯವಾಗುತ್ತಿಲ್ಲ. ಅದಾಗ ರಕ್ಷಕರು ಜೆಸಿಬಿ ಯಂತ್ರದಿಂದ ಆನೆ ಮೇಲ್ಬರಲು ಸಹಾಯ ಮಾಡುತ್ತಾರೆ. ಆ ಬಳಿಕವೇ ಆನೆ ಜೆಸಿಬಿಗೆ ತನ್ನ ಸೊಂಡಿಲಿನಿಂದ ಸವರುವ ಮೂಲಕ ಧನ್ಯವಾದ ಹೇಳುತ್ತದೆ.

ಐಎಫ್​ಎಸ್​ ಅಧಿಕಾರಿ ಸುಧಾ ರಾಮೆನ್​ ಈ ವಿಡಿಯೋವನ್ನು ಹಂಚಿಕೊಂಡಿದ್ದು, ‘ಕೊಡಗಿ​ನಲ್ಲಿ ಆನೆ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಪ್ರಾಣಿಗಳ ಸುರಕ್ಷತೆ ಮುಖ್ಯ ಎಂದು ಟ್ವೀಟ್​ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್​ ಮಾಡುತ್ತಿದ್ದಂತೆಯೇ ವಿಡಿಯೋ 40,000ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದಿದೆ. ಜೊತೆಗೆ ರೀಟ್ವೀಟ್​ ಕೂಡಾ ಮಾಡಲಾಗಿದೆ. ಆನೆಯನ್ನು ರಕ್ಷಿಸಿದ ಕಾರ್ಯಕ್ಕೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ‘ಆನೆ ತುಂಬಾ ದಣಿದಂತೆ ಅನಿಸುತ್ತಿದೆ. ರಕ್ಷಣೆಗೆ ಸಹಾಯ ಮಾಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು ಎಂದು ರಕ್ಷಣಾ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ. ನಮ್ಮಲ್ಲಿರುವ ಮಾನವೀಯತೆಯನ್ನು ಮೆರೆಯೋಣ ಎಂದು ಇನ್ನೋರ್ವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral Video: ಮಣ್ಣಿನ ರಾಡಿಯಲ್ಲಿ ಬಿದ್ದು-ಎದ್ದೇಳಲು ಹೆಣಗಾಡುತ್ತಿದ್ದ ಆನೆ ದೃಶ್ಯ ಸೆರೆ; ವೈರಲ್​ ಆಯ್ತು ವಿಡಿಯೋ