AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ಮಗುವಿಗೆ ಯಕ್ಷಗಾನದ ಮೇಲಿರುವ ಉತ್ಸಾಹಕ್ಕೆ ತಲೆ ಬಾಗಲೇಬೇಕು 

ಪೌರಾಣಿಕ ಪ್ರಸಂಗಗಳನ್ನು ಆಧರಿಸಿರುವ ಯಕ್ಷಗಾನ ಕಲೆಯನ್ನು ನೋಡುವುದೇ ಒಂದು ಸೊಬಗು. ಯಕ್ಷಗಾನ ಬಯಲಾಟಕ್ಕೆ ಸಂಬಂಧಿಸಿದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಇತ್ತೀಚಿಗೆ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು,  ಯಕ್ಷಗಾನ ಬಯಲಾಟದಲ್ಲಿ ದೇವತೆಯ ವೇಷಭೂಷಣ ಧರಿಸಿ  ಪುಟ್ಟ ಮಗುವೊಂದು ಯಕ್ಷಗಾನ  ಬಯಲಾಟದಲ್ಲಿ ನೃತ್ಯವನ್ನು ಮಾಡಿದ್ದು, ಈ ಮಗುವಿನ ಸೊಗಸಾದ ನೃತ್ಯವನ್ನು  ಕಂಡು ನೋಡಲು ಎರಡು ಕಣ್ಣುಗಳು ಸಾಲದು ಎನ್ನುತ್ತಿದ್ದಾರೆ ನೆಟ್ಟಿಗರು.

Viral Video: ಈ ಮಗುವಿಗೆ ಯಕ್ಷಗಾನದ ಮೇಲಿರುವ ಉತ್ಸಾಹಕ್ಕೆ ತಲೆ ಬಾಗಲೇಬೇಕು 
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 05, 2023 | 12:21 PM

ಯಕ್ಷಗಾನ ಕಲೆಯನ್ನು ನೋಡುವುದೇ ಒಂದು ಸೊಬಗು. ಕರಾವಳಿ ಕರ್ನಾಟಕ ಭಾಗದ ಈ ಕಲೆಯನ್ನು ಕೇವಲ ಒಂದು ಕಲೆಯ ರೂಪದಲ್ಲಿ ನೋಡದೆ,  ಅದಕ್ಕೆ ಪೂಜ್ಯನೀಯ ಸ್ಥಾನವನ್ನು ನೀಡಿ ಆರಾಧಿಸಲಾಗುತ್ತದೆ.  ಇಂದಿಗೂ ದಕ್ಷಿಣ ಕನ್ನಡ, ಉಡುಪಿ, ಕೇರಳದ ಕಾಸರಗೋಡು, ಉತ್ತರ ಕನ್ನಡ, ಮಲೆನಾಡು ಭಾಗದಲ್ಲಿ ಯಕ್ಷಗಾನ ಬಯಲಾಟಗಳು ನಡೆಯುತ್ತವೆ. ಇನ್ನೂ ಯಕ್ಷಗಾನ ಕಲೆಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಸಾಮಾನ್ಯವಾಗಿ ಪ್ರಬುದ್ಧ ಕಲಾವಿದರು ಯಕ್ಷಗಾನದ ವೇಶಭೂಷಣ ಧರಿಸಿ ರಂಗಸ್ಥಳದಲ್ಲಿ ಭಾಗವತಿಕೆಗೆ  ತಕ್ಕನಾಗಿ ನೃತ್ಯ ಮತ್ತು ಅಭಿನಯವನ್ನು  ಮಾಡುತ್ತಾರೆ.  ಹೀಗೆ ವಿವಿಧ ಪೌರಾಣಿಕ ಪ್ರಸಂಗಗಳನ್ನು ಆಧರಿಸಿ ನಡೆಯುವ  ಯಕ್ಷಗಾನ ಬಯಲಾಟವನ್ನು ನೋಡುವುದೇ ಒಂದು ಅಂದ. ಈ ಯಕ್ಷಗಾನಕ್ಕೆ ಸಂಬಂಧಿಸಿದ ಹಲವಾರು ವಿಡಿಯೋ ಕ್ಷಿಪ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣಸಿಗುತ್ತವೆ. ಅದೇ ರೀತಿ ಇಲ್ಲೊಂದು ಪುಟ್ಟ ಮಗುವಿನ ಚಂದವಾದ  ಯಕ್ಷಗಾನ ಬಯಲಾಟದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಈ ಪುಟ್ಟ ಮಗುವಿನ ಯಕ್ಷಗಾನದ ಮೇಲಿನ ಭಕ್ತಿ ಮತ್ತು ಉತ್ಸಾಹಕ್ಕೆ ತಲೆ ಬಾಗಲೇಬೇಕು ಎಂದಿದ್ದಾರೆ.

@ashwith_shetty_tulunad ಎಂಬ ಇನ್ಸ್ಟಾಗ್ರಾಮ್ ಪೇಜ್​​ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ 6 ರಿಂದ 8 ವರ್ಷ ವಯಸ್ಸಿನ ನಡುವಿನ ಪುಟ್ಟ ಮಗುವೊಂದು ಪ್ರಬುದ್ಧ ಕಲಾವಿದರಿಗೆ ಸರಿಸಮವಾಗಿ  ರಂಗಸ್ಥಳದಲ್ಲಿ ಭಾಗವತಿಕೆಗೆ ತಕ್ಕನಾಗಿ ನೃತ್ಯ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ

ಯಕ್ಷಧ್ರುವ ಪಟ್ಟ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಬೆಳ್ತಂಗಡಿಯ ಉಜಿರೆಯಲ್ಲಿ ನಡೆದ ಪಾವಂಜೆ ಮೇಳದ ಶ್ರೀ ದೇವಿ ಮಹಾತ್ಮೆ ಯಕ್ಷಗಾನದ ಬಯಲಾಟದಲ್ಲಿ ಪುಟ್ಟ ಮಗುವೊಂದು ದೇವತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋದಲ್ಲಿ ಈ ಮಗು ಪ್ರಬುದ್ಧ ಯಕ್ಷಗಾನ ಕಲಾವಿದರಿಗೆ ಸರಿಸಮವಾಗಿ ರಂಗಸ್ಥಳದಲ್ಲಿ ಭಾಗವತಿಕೆಗೆ ತಕ್ಕನಾಗಿ ನೃತ್ಯ ಮಾಡುತ್ತಿರುವ ಮನಮೋಹಕ ದೃಶ್ಯಾವಳಿಯನ್ನು ಕಾಣಬಹುದು.

ಇದನ್ನೂ ಓದಿ:  ಜೀವಂತ ಹಾವನ್ನು ಕೈಯಲ್ಲಿ ಹಿಡಿದು ಎಲ್ಲರಿಗೂ ದಿಗಿಲು ಮುಟ್ಟಿಸಿದ ಲಿಟಲ್ ಪ್ರಿನ್ಸೆಸ್

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ನೋಡಿದ ಹಲವರು  ಈ ಪುಟ್ಟ ಮಗುವಿನ ಯಕ್ಷಗಾನದ ಮೇಲಿನ ಅಭಿಮಾನ ಮತ್ತು ಆಸಕ್ತಿಗೆ ತಲೆಬಾಗಬೇಕು ಎಂದಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:25 am, Tue, 5 December 23

ವಿದ್ಯುತ್​ ಚಿತಾಗಾರದ ಕರೆಂಟ್​ ಬಿಲ್​ ಬಾಕಿ ಉಳಿಸಿಕೊಂಡ ಬಿಟಿಡಿಎಗೆ ನೋಟಿಸ್
ವಿದ್ಯುತ್​ ಚಿತಾಗಾರದ ಕರೆಂಟ್​ ಬಿಲ್​ ಬಾಕಿ ಉಳಿಸಿಕೊಂಡ ಬಿಟಿಡಿಎಗೆ ನೋಟಿಸ್
ದಿನಕ್ಕೆ 10 ಗಂಟೆ ಕೆಲಸದ ಅವಧಿ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು!
ದಿನಕ್ಕೆ 10 ಗಂಟೆ ಕೆಲಸದ ಅವಧಿ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು!
ತನ್ನ ಸಿಗ್ನೇಚರ್ ಸ್ಟೆಪ್​ ಹಾಕುತ್ತಾ ಕುಣಿದು ರಂಜಿಸಿದ ಲೆಜೆಂಡರಿ ಸ್ಟಾರ್
ತನ್ನ ಸಿಗ್ನೇಚರ್ ಸ್ಟೆಪ್​ ಹಾಕುತ್ತಾ ಕುಣಿದು ರಂಜಿಸಿದ ಲೆಜೆಂಡರಿ ಸ್ಟಾರ್
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್
ಸೂಲಿಬೆಲೆ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಮಾತಾಡುತ್ತಾರೆ: ಯತ್ನಾಳ್
ಸೂಲಿಬೆಲೆ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಮಾತಾಡುತ್ತಾರೆ: ಯತ್ನಾಳ್
ಅಣ್ಣಾವ್ರ ಸಿನಿಮಾದ ಹಾಡು ಹಾಡಿದ ಬಾಲಿವುಡ್ ಸ್ಟಾರ್ ನಟ: ವಿಡಿಯೋ ನೋಡಿ
ಅಣ್ಣಾವ್ರ ಸಿನಿಮಾದ ಹಾಡು ಹಾಡಿದ ಬಾಲಿವುಡ್ ಸ್ಟಾರ್ ನಟ: ವಿಡಿಯೋ ನೋಡಿ
ಮಂದ್ಸೌರ್ ಹೆದ್ದಾರಿಯಲ್ಲಿ ಕಾರನ್ನು 100 ಮೀಟರ್ ದೂರ ಎಳೆದೊಯ್ದ ಟ್ರಕ್
ಮಂದ್ಸೌರ್ ಹೆದ್ದಾರಿಯಲ್ಲಿ ಕಾರನ್ನು 100 ಮೀಟರ್ ದೂರ ಎಳೆದೊಯ್ದ ಟ್ರಕ್
ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಈ ಯೋಗಗಳು ಒಳ್ಳೆಯದು
ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಈ ಯೋಗಗಳು ಒಳ್ಳೆಯದು
ಬಿಜೆಪಿ ಭಿನ್ನರ ಸಭೆಯಲ್ಲಿ ಪ್ರತ್ಯಕ್ಷ: ಕೊನೆಗೂ ಸ್ಪಷ್ಟನೆ ಕೊಟ್ಟ ಸೋಮಣ್ಣ!
ಬಿಜೆಪಿ ಭಿನ್ನರ ಸಭೆಯಲ್ಲಿ ಪ್ರತ್ಯಕ್ಷ: ಕೊನೆಗೂ ಸ್ಪಷ್ಟನೆ ಕೊಟ್ಟ ಸೋಮಣ್ಣ!