Viral Video: ರೈಲು ಕ್ಲೀನ್​ ಮಾಡುವಾಗ ಹೈವೋಲ್ಟೇಜ್ ಕರೆಂಟ್ ತಾಗಿ ಕ್ಷಣದಲ್ಲೇ ಸುಟ್ಟು ಕರಕಲಾದ ವ್ಯಕ್ತಿ

|

Updated on: Jun 14, 2023 | 2:32 PM

ಹುಟ್ಟು-ಸಾವು ಯಾವುದೂ ಹೇಳಿ ಕೇಳಿ ಬರುವುದಿಲ್ಲ, ಸಾವಿನ ಭಯ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಗಟ್ಟಿ ಮುಟ್ಟಾದ ದೇಹ, ರೋಗ ರುಜಿನಗಳಿಲ್ಲ, ಬೆಳಗ್ಗೆ ಕೆಲಸಕ್ಕೆ ಹೋದವ ಬಾರದ ಲೋಕಕ್ಕೆ ಹೋಗುತ್ತಾರೆ ಎಂದು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ.

Viral Video: ರೈಲು ಕ್ಲೀನ್​ ಮಾಡುವಾಗ ಹೈವೋಲ್ಟೇಜ್ ಕರೆಂಟ್ ತಾಗಿ ಕ್ಷಣದಲ್ಲೇ ಸುಟ್ಟು ಕರಕಲಾದ ವ್ಯಕ್ತಿ
ರೈಲು
Follow us on

ಹುಟ್ಟು-ಸಾವು ಯಾವುದೂ ಹೇಳಿ ಕೇಳಿ ಬರುವುದಿಲ್ಲ, ಸಾವಿನ ಭಯ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಗಟ್ಟಿ ಮುಟ್ಟಾದ ದೇಹ, ರೋಗ ರುಜಿನಗಳಿಲ್ಲ, ಬೆಳಗ್ಗೆ ಕೆಲಸಕ್ಕೆ ಹೋದವ ಬಾರದ ಲೋಕಕ್ಕೆ ಹೋಗುತ್ತಾರೆ ಎಂದು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ವಿಧಿ ಎಂಬುದೇ ಹಾಗೆ. ಇಲ್ಲೊಬ್ಬ ವ್ಯಕ್ತಿ ರೈಲನ್ನು ಸ್ವಚ್ಚಗೊಳಿಸುತ್ತಿರುವಾಗಲೇ ಕರೆಂಟ್​ ತಾಗಿ ಕ್ಷಣದಲ್ಲೇ ಸುಟ್ಟು ಕರಕಲಾಗಿದ್ದಾರೆ. ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ರೈಲನ್ನು ವ್ಯಕ್ತಿಯೊಬ್ಬರು ಸ್ವಚ್ಛಗೊಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಉದ್ದನೆಯ ಕಬ್ಬಿಣದ ಕೋಲಿನಲ್ಲಿ ಬಟ್ಟೆ ಸಿಕ್ಕಿಸಿಕೊಂಡು ರೈಲನ್ನು ಸ್ವಚ್ಛಗೊಳಿಸುತ್ತಿದ್ದಾರೆ.

ಆದರೆ ಆ ಕೋಲು ಹೈವೋಲ್ಟೇಜ್ ತಂತಿಗೆ ತಾಗುವಂತಿತ್ತು. ಆತ ರೈಲನ್ನು ಒರೆಸಿ ಕೋಲನ್ನು ಮೇಲಕ್ಕೆತ್ತಿದಾಗ ಆ ಕೋಲು ತಂತಿಗೆ ತಾಗಿ ತಕ್ಷಣವೇ ವಿದ್ಯುತ್ ಪ್ರವಹಿಸಿದೆ. ವಿದ್ಯುತ್ ಸ್ಪರ್ಶದ ನಂತರ, ವ್ಯಕ್ತಿಯು ಬೂದಿಯಾಗಿ ನೆಲದ ಮೇಲೆ ಬಿದ್ದಿದ್ದಾನೆ.

ಈ ಸಂಪೂರ್ಣ ಘಟನೆ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ಇಲ್ಲಿಯವರೆಗೆ ತಿಳಿದುಬಂದಿಲ್ಲ. @cctvidiots ಎಂಬ ಬಳಕೆದಾರರಿಂದ ಈ ಕ್ಲಿಪ್ ಅನ್ನು Twitter ನಲ್ಲಿ ಪೋಸ್ಟ್ ಮಾಡಲಾಗಿದೆ.

ಮತ್ತಷ್ಟು ಓದಿ:Viral Video: ಜೀನಾ ಇಸೀ ಕಾ ನಾಮ್ ಹೈ; ಅಜ್ಜಿಯ ಡ್ಯಾನ್ಸ್​ ಮೂಡ್​ಗೆ ನೆಟ್ಟಿಗರೆಲ್ಲ ಫಿದಾ

ಇದುವರೆಗೆ 2 ಕೋಟಿಗೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ. 67 ಸಾವಿರಕ್ಕೂ ಹೆಚ್ಚು ಮಂದಿ ಇದನ್ನು ಲೈಕ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಹಲವರು ಶಾಕ್ ಆಗಿದ್ದಾರೆ.

ಒಬ್ಬ ಬಳಕೆದಾರರು, ಕೆಲಸಕ್ಕೆ ನೇಮಿಸಿಕೊಳ್ಳುವ ಮೊದಲು ಸುರಕ್ಷತೆಯ ಬಗ್ಗೆ ತರಬೇತಿಯನ್ನು ನೀಡುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ.
ಮತ್ತೊಬ್ಬ ಶ್ರಮಜೀವಿ ಸತ್ತಿದ್ದಾರೆ. ಇದು ಅತ್ಯಂತ ದುಃಖದ ಕ್ಷಣ. ಈ ಘಟನೆ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದಿದೆ ಎಂದು ಕೆಲವರು ಹೇಳಿದ್ದಾರೆ. ಎಲ್ಲಾದರೂ ನೀವು ವಿದ್ಯುತ್ ಕಂಬ, ವಿದ್ಯುತ್ ತಂತಿ, ಅಥವಾ ಮನೆಯಲ್ಲಿ ಎಲೆಕ್ಟ್ರಿಕ್​ ವಸ್ತುಗಳ ಕುರಿತು ಸ್ವಲ್ಪ ಎಚ್ಚರ ವಹಿಸುವುದು ಒಳಿತು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ