Viral Video: ನೀರು ಕುಡಿಸಿ ಒಂಟೆಯ ಜೀವ ಉಳಿಸಿದ ಚಾಲಕನ ವಿಡಿಯೋ ವೈರಲ್

ನೀರಿಲ್ಲದೆ ನಿತ್ರಾಣಗೊಂಡು ರಸ್ತೆಬದಿ ಕುಳಿತಿದ್ದ ಒಂಟೆಯನ್ನು ಚಾಲಕನೊಬ್ಬ ಗಮನಿಸಿದ್ದಾನೆ. ತಕ್ಷಣವೇ ನೀರುಣಿಸಿ ಅದರ ಜೀವ ಕಾಪಾಡಿದ್ದಾನೆ. ನೆಟ್ಟಿಗರು ಈ ಕರುಣಾಳುವನ್ನು ಪ್ರಶಂಸಿಸುತ್ತಿದ್ದಾರೆ.

Viral Video: ನೀರು ಕುಡಿಸಿ ಒಂಟೆಯ ಜೀವ ಉಳಿಸಿದ ಚಾಲಕನ ವಿಡಿಯೋ ವೈರಲ್
ವೈರಲ್​​ ವೀಡಿಯೊ
Edited By:

Updated on: Jun 13, 2023 | 4:07 PM

ನೀರಿಲ್ಲದೆ ದೀರ್ಘಸಮಯದವರೆಗೆ ಜೀವಿಸುವ ಅದ್ಭುತ ಸಾಮರ್ಥ್ಯವನ್ನು ಒಂಟೆಗಳು ಹೊಂದಿವೆ. ಆದರೂ ಮರುಭೂಮಿಯ ಶಾಖ ತೀವ್ರತೆಯಿಂದ ಕೂಡಿದಾಗ ಇವುಗಳು ಪ್ರಾಣಾಪಾಯಕ್ಕೀಡಾಗುವ ಸಾಧ್ಯತೆ ಇರುತ್ತದೆ. ಆಗ ಹೀಗೆ ಯಾರಾದರೂ ದಯಾಮಯಿಗಳು ಅವುಗಳನ್ನು ಪೋಷಿಸಿದರೆ ಕೆಲಕ್ಷಣಳಲ್ಲೇ ಚೇತರಿಸಿಕೊಂಡುಬಿಡುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ.

ಈ ವಿಡಿಯೋ ಅನ್ನು ಐಎಫ್ಎಸ್ ಅಧಿಕಾರಿ ಸುಸಾಂತ ನಂದಾ ಟ್ವೀಟ್ ಮಾಡಿ ಪ್ರಾಣಿದಯೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇದೇ 11 ರಂದು ಹಂಚಿಕೊಂಡ ಈ ವಿಡಿಯೋ ಅನ್ನು 1.5 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Viral: ಮರಳಶಿಲ್ಪದ ಧ್ವಂಸ ಕೃತ್ಯದಲ್ಲಿ ತೊಡಗಿದ್ದ ಹದಿಹರೆಯದ ಹುಡುಗಿಯರ ಬಂಧನ

ದೇವರು ಈ ಮನುಷ್ಯನಿಗೆ ಒಳ್ಳೆಯದನ್ನು ಮಾಡಲಿ. ಮರಭೂಮಿಗರಿಗೆ ಇವನ ನಡೆ ಮಾದರಿಯಾಗಲಿ. ನಿಮ್ಮ ಸುತ್ತಮುತ್ತಲೂ ಅನೇಕ ಜೀವಿಗಳು ಹೀಗೆ ನಿರ್ಜಲೀಕರಣದಿಂದ ಬಸವಳಿಯುತ್ತಿರುತ್ತವೆ, ದಯವಿಟ್ಟು ಅವುಗಳನ್ನು ಪೋಷಿಸಿ. ಜೀವಸಂಕುಲವು ಪರಸ್ಪರರ ಸಹಾಯದಿಂದ ಅಭಿವೃದ್ಧಿ ಕಾಣುತ್ತದೆ… ಅಂತೆಲ್ಲ ಅನೇಕರು ಪ್ರತಿಕ್ರಿಯಿಸಿದ್ದಾರೆ.

ಬೇಸಿಗೆಯಲ್ಲಿ ಪ್ರತೀಜೀವಿಗೂ ನೀರು ಬಹಳೇ ಮುಖ್ಯ. ನಿಮ್ಮ ಮನೆಯಂಗಳ, ಮಹಡಿ ಮೇಲೆ ನೀರನ್ನಿಡಿ.

ಮತ್ತಷ್ಟು ವೈರಲ್​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ