ಬೆಂಗಳೂರಿನ ಉದ್ಯಮಿಯೊಬ್ಬರ ಪತ್ನಿ ಮತ್ತು ಮಗ ಜೈನ ಸಮುದಾಯದ ಸನ್ಯಾಸಿಗಳಾಗಿದ್ದಾರೆ. ಇದೀಗ ಅಮ್ಮ -ಮಗ ತನ್ನ ಎಲ್ಲ ಐಶ್ವರ್ಯವನ್ನು ತ್ಯಜಿಸಿದ್ದಾರೆ, ಸನ್ಯಾಸಿಯಾಗಬೇಕಾದರೆ, ತನ್ನ ಎಲ್ಲ ಸಿರಿವಂತಿಕೆಯನ್ನು ತ್ಯಜಿಸಿ, ಎಲ್ಲ ಬಂಧಗಳಿಂದ ಮುಕ್ತನಾಗಿರಬೇಕು. ಇದೀಗ ಈ ಹಾದಿಯಲ್ಲಿ ಖ್ಯಾತ ಉದ್ಯಮಿ, ಮನೀಶ್ ಎಂಬುವವರ ಪತ್ನಿ ಸ್ವೀಟಿ (30) ಮತ್ತು ಅವರ 11 ವರ್ಷದ ಮಗ ಹೃಧನ್ ಜೈನ ಸನ್ಯಾಸಿಗಳಾಗಿದ್ದಾರೆ. ಇದೀಗ ಅವರಿಗೆ ದೀಕ್ಷೆ ನೀಡಲಾಗಿದೆ. ಜತೆಗೆ ಅವರ ಹೆಸರು ಕೂಡ ಬದಲಾಯಿಸಲಾಗಿದೆ. ಮನೀಶ್ ಅವರ ಪತ್ನಿಗೆ ಭಾವಶುಧಿ ರೇಖಾ ಶ್ರೀ ಜಿ, ಮಗನಿಗೆ ಹಿತಶಯ್ ರತನವಿಜಯ್ ಜಿ ಎಂದು ಹೆಸರನ್ನು ಇಡಲಾಗಿದೆ. ಮುಂದಿನ ದಿನಗಳಲ್ಲಿ ಅವರು ಕುಟುಂಬದಿಂದ ದೂರವಿದ್ದು, ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರ ಕುಟುಂಬ ಸದಸ್ಯ ವಿವೇಕಾ ಅವರು, ಭಾವಶುದ್ಧಿ ರೇಖಾ ಶ್ರೀ ಜಿ ಅವರು ಗರ್ಭಿಣಿಯಾಗಿದ್ದಾಗ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇದೀಗ ಅದೇ ರೀತಿ ಸನ್ಯಾಸಿಗಳಾಗಿದ್ದಾರೆ ಎಂದು ಹೇಳಿದ್ದಾರೆ. ಭಾವಶುದ್ಧಿ ರೇಖಾ ಶ್ರೀ ಜಿ ಅವರ ಈ ನಿರ್ಧಾರಕ್ಕೆ ಅವರ ಪತಿ ಕೂಡ ಬೆಂಬಲ ನೀಡಿದ್ದಾರೆ. ಈ ಬಗ್ಗೆ ಅವರ ಪತಿ ಹೆಮ್ಮ ಪಡುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸುರೇಶ್ ರೈನಾ ಎಷ್ಟು ಸಿಂಪಲ್ ನೋಡಿ; ಬೀದಿ ಬದಿಯಲ್ಲಿ ನೇರಳೆ ಹಣ್ಣು ಖರೀದಿಸಿದ ಮಾಹಿ ಬೆಸ್ಟ್ ಫ್ರೆಂಡ್
ವೈರಲ್ ವಿಡಿಯೋ ನೋಡಿ ಇಲ್ಲಿ ಕ್ಲಿಕ್ ಮಾಡಿ:
ತಾಯಿ-ಮಗನ ಸನ್ಯಾಸಿಯಾಗಿ ದೀಕ್ಷೆ ಪಡೆಯುವ ಸಮಾರಂಭ ತುಂಬಾ ಅದ್ಧೂರಿಯಾಗಿತ್ತು ಎಂದು ಹೇಳಿದರು. ಈ ಬಗ್ಗೆ ಒಂದು ವಿಡಿಯೋವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಸೂರತ್ನಲ್ಲಿ ಈ ಕಾರ್ಯಕ್ರಮ ನಡೆದಿದೆ. ಗುಜರಾತ್‌ನ ಈ ಶ್ರೀಮಂತ ಜೈನ ದಂಪತಿಗಳು ಸನ್ಯಾಸಿಯಾಗಲು ಸುಮಾರು ₹ 200 ಕೋಟಿ ನೀಡಿದರು. ಭಾವೇಶ್ ಭಂಡಾರಿ ಮತ್ತು ಅವರ ಪತ್ನಿ ಫೆಬ್ರವರಿಯಲ್ಲಿ ತಮ್ಮ ಎಲ್ಲ ಆಸ್ತಿಯನ್ನು ಸಾರ್ವಜನಿಕರಿಗೆ ನೀಡಿದ್ದಾರೆ.