Trending : ಈ ಲಾಬ್ಸ್ಟರ್​ಗಳ ಮಧ್ಯೆ ನಾಲ್ಕು ಏಡಿಗಳು ಅಡಗಿವೆ, ಎಷ್ಟು ಬೇಗ ಕಂಡುಹಿಡಿಯಬಲ್ಲಿರಿ?

Puzzle : ಯಾವುದೋ ಕಾರಣಕ್ಕೆ ಬೇಸರ ಆವರಿಸಿಕೊಂಡು ಮಂಕು ಕವಿದಾಗೆಲ್ಲ ನಿಮ್ಮಷ್ಟಕ್ಕೆ ನೀವೇ ಅದನ್ನು ಸರಿ ಮಾಡಿಕೊಳ್ಳಬೇಕು. ಅದಕ್ಕೆ ಉಪಾಯ ಇಲ್ಲಿದೆ!

Trending : ಈ ಲಾಬ್ಸ್ಟರ್​ಗಳ ಮಧ್ಯೆ ನಾಲ್ಕು ಏಡಿಗಳು ಅಡಗಿವೆ, ಎಷ್ಟು ಬೇಗ ಕಂಡುಹಿಡಿಯಬಲ್ಲಿರಿ?
ಇನ್​ಸ್ಟಾಗ್ರಾಮ್​ನಲ್ಲಿ ಈ ಚಿತ್ರವನ್ನು ರಚಿಸಿ ಪೋಸ್ಟ್​ ಮಾಡಿದವರು ಕಲಾವಿದ ಗೆರ್ಗೆಲಿ ಡುಡಾಸ್
Edited By:

Updated on: Aug 03, 2022 | 3:14 PM

Trending : ಯಂತ್ರದಂತೆ ನಾವು ಕೆಲಸ ಮಾಡುತ್ತಲೇ ಇರುತ್ತೇವೆ ಅಥವಾ ಯಾವುದೋ ಮಾತಿಗೆ, ಇನ್ನೇನೋ ವಿಷಯಗಳಿಗೆ ಮನಸ್ತಾಪಗಳಾಗುತ್ತಿರುತ್ತವೆ. ಎಲ್ಲಕ್ಕಿಂತ ಮುಖ್ಯ ಮನಸ್ಸು ಖಿನ್ನವಾಗಲು ಕೆಲವೊಮ್ಮೆ ಇಂಥದೇ ಕಾರಣಗಳು ಅಂತೇನಿರುವುದಿಲ್ಲ. ಹೇಗೆ ಮತ್ತೆ ಮನಸ್ಸನ್ನು ಸಮಸ್ಥಿತಿಗೆ ತಂದುಕೊಳ್ಳುವುದು? ಆಗ ನೆರವಿಗೆ ಬರುವುದೇ ಇಂತಹ ಪಝಲ್ಸ್​. ಮೇಲಿನ ಚಿತ್ರವನ್ನು ಗಮನಿಸಿ. ಸಮುದ್ರ ತೀರದಲ್ಲಿರುವ ಈ ಲಾಬ್ಸ್ಟರ್​ಗಳ ಮಧ್ಯೆ ನಾಲ್ಕು ಏಡಿಗಳು ಅಡಗಿವೆ. ಅವುಗಳನ್ನು ನೀವು ಎಷ್ಟು ಬೇಗ ಕಂಡುಹಿಡಿಯಬಲ್ಲಿರಿ? ಈ ಚಿತ್ರವನ್ನು ರಚಿಸಿ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ ಕಲಾವಿದ ಗೆರ್ಗೆಲಿ ಡುಡಾಸ್ (Gergely Dudás). ಮೆದುಳಿಗೆ ಕೆಲಸ ಕೊಡುವ ಇಂಥ ಚಿತ್ರಗಳು ಆಗಾಗ ಅಂತರ್ಜಾಲದಲ್ಲಿ ಕಾಣಿಸಿಕೊಳ್ಳುತ್ತವೆ. ಮನಸ್ಸು ನಿಮ್ಮ ಹಿಡಿತಕ್ಕೆ ಸಿಗದೇ ಇದ್ದಾಗ ಇಂಥ ಚಿತ್ರಗಳ ಮೊರೆ ಹೋಗುವುದರಿಂದ ಮನರಂಜನೆಯಷ್ಟೇ ಅಲ್ಲ ಬುದ್ಧಿಗೂ ಕಸರತ್ತು ಸಿಗುತ್ತದೆ. ಇಂಥ ಚಿತ್ರಗಳ ಪಟ್ಟಿಗೆ ಈಗ ಈ ಲಾಬ್ಸ್ಟರ್​ ಚಿತ್ರವೂ ಸೇರಿಕೊಂಡಿದೆ. ತಡವ್ಯಾಕೆ ಹುಡುಕಿ ಮತ್ತೆ!

ಕೆಲದಿನಗಳ ಹಿಂದೆ ಕಲಾವಿದ ಡುಡಾಸ್ ಈ ಪೋಸ್ಟ್​ ಹಂಚಿಕೊಂಡಿದ್ದು, ಸಾವಿರಾರು ಲೈಕ್ಸ್​, ಕಮೆಂಟ್​ಗಳಿಂದ ಈಗಲೂ ಚಾಲ್ತಿಯಲ್ಲಿದೆ. ಅನೇಕರು ತಮ್ಮ ಕುಟುಂಬ ಸದಸ್ಯರನ್ನು, ಸ್ನೇಹಿತರನ್ನು ಟ್ಯಾಗ್ ಮಾಡುತ್ತಿದ್ದು, ಲಾಬ್ಸ್ಟರ್​ ಮಧ್ಯೆ ಅಡಗಿರುವ ಏಡಿಗಳನ್ನು ಹುಡುಕುವಂತೆ ಸವಾಲು ಎಸೆಯುತ್ತಿದ್ದಾರೆ.

Published On - 3:04 pm, Wed, 3 August 22