ಬ್ಯಾಂಕ್ನಲ್ಲಿ ದರೋಡೆ ಮಾಡಲು ಹೋದ ಕಳ್ಳನೊಬ್ಬನಿಗೆ ಆ ಬ್ಯಾಂಕ್ನ ಲಾಕರ್‌ಗಳನ್ನು ಮುರಿಯಲು ಸಾಧ್ಯವಾಗಿಲ್ಲ. ಇದರಿಂದ ಬೇಸರಗೊಂಡರೂ ಬ್ಯಾಂಕ್ನ ಭದ್ರತಾ ವ್ಯವಸ್ಥೆಯನ್ನು ಮೆಚ್ಚಿದ ಆತ ಒಳ್ಳೆಯ ಬ್ಯಾಂಕ್ ಎಂದು ಹೊಗಳಿ ಬ್ಯಾಂಕ್ನ ಮೇಜಿನ ಮೇಲೆ ಚೀಟಿ ಬರೆದಿಟ್ಟು ಹೋಗಿರುವ ವಿಚಿತ್ರ ಘಟನೆ ತೆಲಂಗಾಣದಲ್ಲಿ ನಡೆದಿದೆ. ಬ್ಯಾಂಕ್ ಸಿಬ್ಬಂದಿ ಬೆಳಗ್ಗೆ ಬಂದು ನೋಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಗುರುವಾರ ರಾತ್ರಿ ನೆನ್ನಲ್ ಮಂಡಲದಲ್ಲಿರುವ ತೆಲಂಗಾಣ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಶುಕ್ರವಾರ ಬೆಳಗ್ಗೆ ಸಿಬ್ಬಂದಿ ಬ್ಯಾಂಕ್‌ಗೆ ಬಂದಾಗ ರಾತ್ರಿ ಕಳ್ಳತನಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ‘ಆಲಿಯಾ ಭಟ್ ಬೇಕು’ ಎಂದ ಶಾರುಖ್ ಖಾನ್; ವಿಡಿಯೋ ವೈರಲ್ ಆದ ಬಳಿಕ ನಟಿ ನೀಡಿದ ಪ್ರತಿಕ್ರಿಯೆ ಏನು?
ರಾತ್ರಿ ಬ್ಯಾಂಕ್‌ಗೆ ನುಗ್ಗಿದ ಕಳ್ಳ ಲಾಕರ್‌ಗಳನ್ನು ತೆರೆಯಲು ವಿಫಲವಾಗಿದ್ದಾನೆ. ಬ್ಯಾಂಕ್ನಲ್ಲಿ ತನ್ನ ಬೆರಳಚ್ಚುಗಳು ಎಲ್ಲಿಯೂ ಸಿಗದಂತೆ ಎಚ್ಚರ ವಹಿಸಿರುವ ಆತ ಬ್ಯಾಂಕ್ ಭದ್ರತೆಯನ್ನು ಮೆಚ್ಚಿ, ಗುಡ್ ಬ್ಯಾಂಕ್ ಎಂದು ಒಂದು ಚೀಟಿ ಬರೆದಿಟ್ಟು ಹೋಗಿದ್ದಾನೆ.
ಬ್ಯಾಂಕ್ ಸಿಬ್ಬಂದಿ ಮರುದಿನ ಬೆಳಗ್ಗೆ ಕಚೇರಿಗೆ ಬಂದಾಗ ಬ್ಯಾಂಕ್ನ ಮುಖ್ಯ ಬಾಗಿಲನ್ನು ಯಾರೋ ಬಲವಂತವಾಗಿ ತೆರೆಯಲು ಯತ್ನಿಸಿರುವುದು ಗೊತ್ತಾಗಿದೆ. ಬಾಗಿಲು ತೆರೆದು ಕಳ್ಳ ಒಳಗೆ ಹೋಗಿದ್ದರೂ ಲಾಕರ್‌ಗಳನ್ನು ಒಡೆಯಲಾಗಿಲ್ಲ. ಆ ಲಾಕರ್ನಲ್ಲಿ ಇದ್ದ ಬೆಲೆಬಾಳುವ ವಸ್ತುಗಳು ಹಾಗೇ ಇದ್ದವು. ಮೇಜಿನ ಮೇಲೊಂದು ಚೀಟಿ ಇಟ್ಟು ಹೋಗಿರುವ ಕಳ್ಳ, ನಿಮಗೆ ನನ್ನ ಫಿಂಗರ್‌ಪ್ರಿಂಟ್‌ಗಳು ಸಿಗುವುದಿಲ್ಲ. ನಿಮ್ಮದು ಉತ್ತಮ ಬ್ಯಾಂಕ್. ನಿಮ್ಮ ಬ್ಯಾಂಕ್ನಿಂದ ನನಗೆ 1 ರೂಪಾಯಿಯನ್ನೂ ಪಡೆಯಲು ಸಾಧ್ಯವಾಗಲಿಲ್ಲ, ಆದ್ದರಿಂದ ನನ್ನನ್ನು ಹಿಡಿಯಬೇಡಿ ಎಂದು ಆತ ಬರೆದಿಟ್ಟಿದ್ದಾನೆ.
ಕಳ್ಳನ ಚಲನವಲನಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ತೆಹಚ್ಚಬಾರದೆಂದು ಅವನು ತನ್ನ ಮುಖವನ್ನು ಮುಚ್ಚಿಕೊಂಡಿದ್ದ.
Published On - 12:21 pm, Sat, 2 September 23