ಈ ಕಟ್ಟಡವನ್ನು ಒಂದು ಬದಿಯಿಂದ ನೋಡಿದಾಗ ಆರು ಅಡಿ ಎತ್ತರದ ವ್ಯಕ್ತಿಗೆ ಈ ಕಟ್ಟಡದೊಳಗೆ ಮಲಗಲು ಸಾಧ್ಯವಿಲ್ಲ ಎಂದೆನಿಸುವುದು ಸಹಜ. ಆದರೆ ಹೊರಗಿನಿಂದ ಈ ಕಟ್ಟಡ ತುಂಬ ತೆಳ್ಳಗೆ ಎಂದೆನಿಸಿದರೂ ಒಳಾಂಗಣ ಮನೆಯ ವಿನ್ಯಾಸ ತುಂಬಾ ಭವ್ಯವಾಗಿದೆ. ಬ್ರಿಟನ್‌ನ ಕೆನ್ಸಿಂಗ್ಟನ್‌ನಲ್ಲಿರುವ ಈ ಕಟ್ಟಡ ಅದರ ವಿನ್ಯಾಸದಿಂದಾಗಿ ‘ಥಿನ್ ಹೌಸ್’ ಎಂದೂ ಕರೆಯುತ್ತಾರೆ. ಈ ವಿಶಿಷ್ಟ ಕಟ್ಟಡದ ಉದ್ದ 13 ಅಡಿ ಇದ್ದರೆ, ಅಗಲ ಕೇವಲ 6 ಅಡಿ. ಸದ್ಯ ಈ ಕಟ್ಟಡದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕಟ್ಟಡದ ವೀಡಿಯೊವನ್ನು @Rainmaker1973 ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕೇವಲ 7 ಸೆಕೆಂಡ್ ಗಳ ಈ ವೀಡಿಯೋವನ್ನು ಇದುವರೆಗೆ 1 ಲಕ್ಷ 86 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ನೂರಾರು ಮಂದಿ ವಿಡಿಯೋವನ್ನು ಲೈಕ್ ಮಾಡಿ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇಷ್ಟು ಚಿಕ್ಕ ಮನೆಯಲ್ಲಿ ವಾಸಿಸಲು ಹೇಗೆ ಸಾಧ್ಯ ಎಂದು ಜನರು ಆಶ್ಚರ್ಯ ಪಡುತ್ತಾರೆ.
Five Thurloe Square, also known as The Thin House, is a n iconic residential property in South Kensington, London
The house is renowned for its unusual and narrow design, which measures only 6 feet (1.83 meters) at its narrowest point
[📹alievskaya uk]pic.twitter.com/uZt5UHHOdH
— Massimo (@Rainmaker1973) January 22, 2024
ಇದನ್ನೂ ಓದಿ: ಈ ಸೇತುವೆ ಹೇಗಿದೆ ನೋಡಿ; ವಿಡಿಯೋ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ
ಮಾಧ್ಯಮ ವರದಿಗಳ ಪ್ರಕಾರ, 2021 ರಲ್ಲಿ ಈ ಸಣ್ಣ ಮನೆಯನ್ನು ಮಾರಾಟ ಮಾಡಲು ಬೆಲೆಯನ್ನು ಸಹ ನಿಗದಿಪಡಿಸಲಾಗಿದೆ ಮತ್ತು ಆ ಬೆಲೆ ತುಂಬಾ ಹೆಚ್ಚಾಗಿದೆ ಎಂದು ತಿಳಿದು ಎಲ್ಲರೂ ದಿಗ್ಭ್ರಮೆಗೊಂಡರು. 5 ಕೋಟಿಗೂ ಹೆಚ್ಚು ಬೆಲೆಗೆ ಈ ಮನೆ ಮಾರಾಟವಾಗಿತ್ತು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:43 am, Wed, 24 January 24