Video: ಇದು ಮ್ಯಾಜಿಕ್ ಅಲ್ಲ ಮೋಸ, ಪಾರಿವಾಳ ಹೇಗೆ ಬಂತು ನೋಡಿ

ಜಾದೂ ಇದೊಂದು ಅದ್ಭುತ ಕಲೆಯಾಗಿದ್ದು, ಹಾಗಂತ ಎಲ್ಲರಿಗೂ ಈ ಕಲೆ ಒಲಿಯುವುದಿಲ್ಲ. ಆದರೆ ಜಾದೂಗಾರರು ಈ ಮೂಲಕ ವಸ್ತುಗಳನ್ನು ಕ್ಷಣಾರ್ಧದಲ್ಲಿ ಕಣ್ಮರೆಯಾಗಿಸುತ್ತಾರೆ, ಮತ್ತೆ ಮರುಕ್ಷಣವೇ ಆ ವಸ್ತುವನ್ನು ಕಾಣಿಸಿಕೊಳ್ಳುವಂತೆ ಮಾಡುತ್ತಾರೆ. ನಾವುಗಳು ಅದನ್ನು ಸತ್ಯವೆಂದು ನಂಬಿ ಬಿಡುತ್ತೇವೆ. ಈ ಜಾದೂಗಾರರ ಬಳಿ ಏನೋ ಪವರ್ ಇದೆ ಅಂದುಕೊಳ್ತೇವೆ. ಆದರೆ ಈ ವಿಡಿಯೋ ನೋಡಿದ ಬಳಿಕ ಟೋಪಿಯಿಂದ ಪಾರಿವಾಳ ಹೇಗೆ ಬಂತು ಎನ್ನುವುದು ನಿಮ್ಗೆ ಮನವರಿಕೆ ಆಗ್ತದೆ. ಈ ಕುರಿತಾದ ಮಾಹಿತಿ ಇಲ್ಲಿದೆ.

Video: ಇದು ಮ್ಯಾಜಿಕ್ ಅಲ್ಲ ಮೋಸ, ಪಾರಿವಾಳ ಹೇಗೆ ಬಂತು ನೋಡಿ
ಟೋಪಿಯಿಂದ ಹೊರಬಂತು ಪಾರಿವಾಳ
Image Credit source: Facebook

Updated on: Sep 19, 2025 | 10:26 AM

ಜಾದೂಗಾರರು (magician’s) ಮಾಡುವ ಜಾದೂವನ್ನು ನೋಡಿದಾಗ ಒಂದು ಕ್ಷಣ ನಮ್ಮ ಕಣ್ಣಿಂದ ನಂಬಲು ಕಷ್ಟವಾಗುತ್ತದೆ. ಹೌದು, ಇದೊಂದು ಅದ್ಭುತ ಕಲೆಯಾಗಿದ್ದು ಪ್ರೇಕ್ಷಕರನ್ನು ವಿವಿಧ ತಂತ್ರಗಳ ಜಾದೂಗಾರ ಮೂಲಕ ತನ್ನತ್ತ ಸೆಳೆಯುತ್ತಾರೆ. ಬೇರೆ ರೀತಿಯ ವಿಸ್ಮಯಕಾರಿ ಪ್ರದರ್ಶನಗಳನ್ನು ನೀಡಿ ನಮ್ಮನ್ನು ಬೆರಗು ಮೂಡಿಸುತ್ತಾರೆ. ಸಾಮಾನ್ಯವಾಗಿ ಟೋಪಿಯಿಂದ ಪಾರಿವಾಳ (pigeon) ಬರುವ ಮ್ಯಾಜಿಕನ್ನು ನೀವು ನೋಡಿಯೇ ಇರುತ್ತೀರಿ. ಆದರೆ ಜಾದೂಗಾರರು ಈ ತಂತ್ರ ಬಳಸಿ ಹೇಗೆ ನಿಮ್ಮನ್ನು ಮೋಸಗೊಳಿಸ್ತಾರೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಟೋಪಿ ಒಳಗೆ ಕರ್ಚಿಫ್ ಹಾಕಿದ್ರೆ ಪಾರಿವಾಳ ಬರಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಯೊಂದು ಮೂಡಬಹುದು. ಆದರೆ ಜಾದೂಗಾರರು ಯಾವ ತಂತ್ರ ಉಪಯೋಗಿಸಿ ಈ ರೀತಿ ಜಾದೂ ಮಾಡ್ತಾರೆ ಎನ್ನುವ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ರೀತಿ ಟ್ರಿಕ್ಸ್ ಬಳಸ್ತಾರಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಜಾದೂವಿನ ಹಿಂದಿದೆ ಈ ಟ್ರಿಕ್ಸ್

right life ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಶೇರ್‌ ಮಾಡಲಾದ ವಿಡಿಯೋದಲ್ಲಿ ಜಾದೂಗಾರರ ಈ ಜಾದೂವಿನ ಹಿಂದಿನ ಅಸಲಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಇಲ್ಲಿ ಖಾಲಿ ಟೋಪಿ ಒಳಗಿಂತ ಪಾರಿವಾಳ ಹೇಗೆ ಬಂತು ಎಂದು ವಿವರಿಸಿದ್ದಾರೆ. ಟೋಪಿಯೊಳಗೆ  ಈ ಮೊದಲೇ ಪಾರಿವಾಳವನ್ನು ಇಟ್ಟುಕೊಂಡಿರುತ್ತಾರೆ. ಆದರೆ, ಜಾದೂಗಾರನು ಟೋಪಿಯ ಒಂದು ಬದಿಯಲ್ಲಿ ಬಿಳಿ ಬಣ್ಣದ ಕರ್ಚಿಫ್ ಹಾಕುತ್ತಾರೆ. ಆ ಬಳಿಕ ಕರ್ಚಿಫ್‌ನ ಮತ್ತೊಂದು ಬದಿಯಲ್ಲಿದ್ದ ಪಾರಿವಾಳವನ್ನು ತೆಗೆದು ಎಲ್ಲರಿಗೂ ತೋರಿಸುತ್ತಾರೆ ಎಂದು ವಿವರಿಸುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ
ಈ ವ್ಯಕ್ತಿಯ ವಿಚಿತ್ರ ಹವ್ಯಾಸ ನೋಡಿ
ಮಹಿಳೆಯರಿಗೆ ಪಕ್ಕದ ಮನೆಯ ಜಗಳಗಳನ್ನು ಕದ್ದು ನೋಡೋದೆಂದ್ರೆ ಎಷ್ಟು ಇಷ್ಟ ನೋಡಿ

ಇದನ್ನೂ ಓದಿ:Video: ಗಂಡನ ಕಿಸೆಯಿಂದ ಹಣ ಕದಿಯುವುದು ತುಂಬಾ ಸುಲಭ, ಇಲ್ಲಿದೆ ನೋಡಿ ಮಹಿಳೆಯ ಸಲಹೆ

ಈ ವಿಡಿಯೋವನ್ನು ಅಧಿಕ ಜನರು ವೀಕ್ಷಿಸಿದ್ದು, ಒಬ್ಬ ಬಳಕೆದಾರರು ಮ್ಯಾಜಿಕ್ ಟ್ರಿಕ್ ನೋಡಲು ಸರಳವಾಗಿ ಕಾಣಿಸಬಹುದು. ಆದರೆ ಅದನ್ನು ಪ್ರೇಕ್ಷಕರ ಮುಂದೆ ಆಕರ್ಷಣೀಯವಾಗಿ ಪ್ರಸ್ತುತ ಪಡಿಸುವುದಕ್ಕೆ ಬಹಳ ಶ್ರದ್ಧೆ ಹಾಗೂ ನಿರಂತರ ಶ್ರಮ ಬೇಕು ಎಂದು ಹೇಳಿದ್ದಾರೆ. ಇನ್ನೊಬ್ಬರು ಏನ್ ಮಾಡ್ತೀರಾ ಹೊಟ್ಟೆ ಪಾಡು, ಕಳ್ಳತನ ಅಲ್ಲಲ್ವಾ ಎಂದು ಕೇಳಿದ್ದಾರೆ. ಮ್ಯಾಜಿಕ್ ಒಂದು ಕಲೆ, ತುಂಬಾ ಶ್ರಮ ಪಟ್ಟಿರುತ್ತಾರೆ ಈ ವಿದ್ಯೆಗೆ. ನಿಜಾ ಏನು ಅಂದ್ರೆ ಶೂನ್ಯದಿಂದ ಯಾವ ವಸ್ತುವನ್ನು ಪಡೆಯೋದಕ್ಕೆ ಆಗಲ್ಲಾ. ಮ್ಯಾಜಿಕ್ ಮನೋರಂಜನೆಗಾಗಿ ನೋಡಿ ಆನಂದಿಸಬೇಕು ಅಷ್ಟೇ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ