AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಗಂಡನ ಕಿಸೆಯಿಂದ ಹಣ ಕದಿಯುವುದು ತುಂಬಾ ಸುಲಭ, ಇಲ್ಲಿದೆ ನೋಡಿ ಮಹಿಳೆಯ ಸಲಹೆ

ಗಂಡನಿಗೆ ಗೊತ್ತಿಲ್ಲದ್ದಂತೆ ಹೆಂಡ್ತಿರು ಜೇಬಿನಿಂದ ಹಣ ತೆಗೆದು ಗಂಡನನ್ನು ಯಾಮಾರಿಸುತ್ತಾರೆ. ಗೊತ್ತೋ ಗೊತ್ತಿಲ್ಲದೇ ಗಂಡನ ಕೈಯಲ್ಲಿ ಸಿಕ್ಕಿಬೀಳ್ತಾರೆ. ಈ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟ. ಇಂತಹ ಸಂದರ್ಭವೇನಾದ್ರು ಏರ್ಪಟ್ಟರೆ ಹೇಗೆ ನಿಭಾಯಿಸಬೇಕು ಎನ್ನುವ ಬಗ್ಗೆ ಮಹಿಳೆಯೊಬ್ಬರು ಸಲಹೆ ನೀಡಿದ್ದು, ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Video: ಗಂಡನ ಕಿಸೆಯಿಂದ ಹಣ ಕದಿಯುವುದು ತುಂಬಾ ಸುಲಭ, ಇಲ್ಲಿದೆ ನೋಡಿ ಮಹಿಳೆಯ ಸಲಹೆ
ಗಂಡನ ಜೇಬಿನಿಂದ ಹಣ ಕದಿಯಲು ಸಲಹೆ ನೀಡಿದ ಮಹಿಳೆImage Credit source: Instagram
ಸಾಯಿನಂದಾ
|

Updated on: Sep 17, 2025 | 3:35 PM

Share

ಹೆಣ್ಮಕ್ಕಳು (ladies) ದುಡ್ಡಿನ ವಿಷ್ಯದಲ್ಲಿ ಗಂಡಂದಿರನ್ನು ಯಾಮಾರಿಸುತ್ತಾರೆ. ತಿಂಗಳ ಖರ್ಚು ವೆಚ್ಚಗಳ ಲೆಕ್ಕ ಸರಿಯಾಗಿ ಕೊಡದೇ ಸ್ವಲ್ಪವೇ ಹಣವನ್ನು ಕೂಡಿಟ್ಟು, ಕಷ್ಟದ ಕಾಲದಲ್ಲಿ ಅದನ್ನು ಬಳಸಿಕೊಳ್ಳುತ್ತಾರೆ. ಈ ರೀತಿ ಮಾಡುವುದು ಒಂದರ್ಥದಲ್ಲಿ ಒಳ್ಳೆಯದೇ. ಹೀಗಾಗಿ ಹೆಚ್ಚಿನವರು ಗಂಡನ ಜೇಬಲ್ಲಿರುವ ದುಡ್ಡಲ್ಲಿ ನೂರೋ ಇನ್ನೂರೋ ರೂಪಾಯಿ ಎತ್ತಿಟ್ಟು ಯಾಮಾರಿಸುವುದನ್ನು ನೋಡಿರಬಹುದು. ಈ ರೀತಿಯಾದಾಗ ಗಂಡನ ಕೈಯಲ್ಲಿ ಯಾವಾಗಲಾದರೂ ಒಮ್ಮೆ ಸಿಕ್ಕಿ ಬೀಳುವುದಿದೆ. ನಿಮ್ಗೆ ಏನಾದ್ರು ಇಂತಹ ಕಠಿಣ ಸಂದರ್ಭ ಎದುರಾದ್ರೆ ಹೀಗೆ ಮಾಡಿ ಎಂದು ಮಹಿಳೆಯೊಬ್ಬರು ಸಲಹೆ (advice) ನೀಡಿ, ಏನೆಲ್ಲಾ ಮಾಡಬಹುದು ಎಂದು ತಿಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

ಗಂಡನ ಜೇಬಿನಿಂದ ದುಡ್ಡು ಎಗರಿಸ್ತೀರಾ?

kanchansharmaranjan ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಹಿಳೆಯೊಬ್ಬರು ಗಂಡನ ಜೇಬಿನಿಂದ ಹಣ ತೆಗೆದು ಸಿಕ್ಕಿ ಬಿದ್ದಾಗ ಯಾವ ರೀತಿ ಪಾರಾಗುವುದು ಎಂದು ಹೇಳಿದ್ದಾರೆ. ಗಂಡನ ಜೇಬು ಹೆಂಡತಿ ಪಾಲಿಗೆ ನಿಧಿಯಿದ್ದಂತೆ. ಕಷ್ಟದ ಕಾಲದಲ್ಲಿ ಅಥವಾ ಅಗತ್ಯವಿದ್ದಾಗ ಗಂಡನ ಜೇಬಿಗೆ ಮಹಿಳೆಯರು ಕೈ ಹಾಕುತ್ತಾರೆ. ಕೆಲವರು ಸಿಕ್ಕಿ ಬೀಳುತ್ತಾರೆ ಕೂಡ. ಈ ವೇಳೆಯಲ್ಲಿ ನಿಮಗೆ ಏನು ತಿಳಿಯದ್ದಂತೆ ನಾಟಕ ಮಾಡಿ, ಆ ವೇಳೆ ವಾತಾವರಣವು ತಿಳಿಯಾಗುತ್ತದೆ ನಿಮ್ಮ ಗಂಡನಿಗೆ ಯಾವುದೇ ಅನುಮಾನ ಬರುವುದಿಲ್ಲ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ
Image
ಇಲ್ಲಿ ಸಿಗುತ್ತಾರೆ ನೋಡಿ ತಾತ್ಕಾಲಿಕ ಸುಂದರ ಪತ್ನಿಯರು
Image
ಮಹಿಳೆಯರಿಗೆ ಪಕ್ಕದ ಮನೆಯ ಜಗಳಗಳನ್ನು ಕದ್ದು ನೋಡೋದೆಂದ್ರೆ ಎಷ್ಟು ಇಷ್ಟ ನೋಡಿ
Image
ನೆರೆಮನೆಯ ಯುವಕನೊಂದಿಗೆ ಓಡಿಹೋದ ಒಂದೇ ಮನೆಯ ಸೊಸೆಯಂದಿರು
Image
ಲವರ್​ ಜತೆ ಹೊರಟ ತಾಯಿಯನ್ನು ಪರಿ ಪರಿಯಾಗಿ ಬೇಡಿದ ಮಕ್ಕಳು

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಬಳಕೆದಾರರೊಬ್ಬರ ಕಾಮೆಂಟ್ ಬಗ್ಗೆ ಈ ವಿಡಿಯೋದಲ್ಲಿ ಉಲ್ಲೇಖಿಸಿದ್ದು, ಸಹೋದರಿಯೊಬ್ಬರು ನಾನು ಅವರ ಜೇಬಿನಿಂದ ಹಣ ತೆಗೆದ ತಕ್ಷಣ ತಿಳಿಯುತ್ತದೆ ಎಂದು ಹೇಳುತ್ತಾರೆ. ಈ ಕಾಮೆಂಟ್ ಗೆ ನಗುತ್ತಲೇ ಉತ್ತರಿಸಿ, ಗಂಡಂದಿರ ಈ ಅಭ್ಯಾಸವು ಸರ್ವೇ ಸಾಮಾನ್ಯ. ಒಂದು ವೇಳೆ ನೀವು ನಿಮ್ಮ ಗಂಡನ ಕೈಯಲ್ಲಿ ಸಿಕ್ಕಿ ಬಿದ್ದರೆ ಮುಗ್ಧವಾಗಿ ವರ್ತಿಸಿ ಎಂದು ಆಗ ಎಲ್ಲವೂ ಸರಿಯಾಗುತ್ತದೆ ಎಂದಿದ್ದಾರೆ.

ಗಂಡನೇನಾದ್ರೂ ನಾನೇ ಇಲ್ಲಿ ಹಣ ಇಟ್ಟಿದ್ದೆ ಎಂದು ಕೇಳಿದ್ರೆ ತಕ್ಷಣವೇ ನೀವು ಶಾಕ್ ಆದವರ ಹಾಗೆ ವರ್ತಿಸಿ, ಎಲ್ಲೋಯ್ತು ಎಂದು ಕೇಳಿ. ಇಲ್ಲವಾದರೆ ಅದು ನನ್ನ ಹಣ ಎಂದು ನಾನು ಭಾವಿಸಿದೆ ಅಥವಾ ನಿಮ್ಮ ಹಣ ನಮ್ಮದು ಎಂದು ಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಿ. ಕೊನೆಗೆ ಈ ಮಹಿಳೆ ಈಗ ಮನೆಯಲ್ಲಿ ಯಾರು ದುಡ್ಡು ಇಡಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:Video: ನಮ್ಮ ಭಾರತೀಯ ಮಹಿಳೆಯರಿಗೆ ಪಕ್ಕದ ಮನೆಯ ಜಗಳಗಳನ್ನು ಕದ್ದು ನೋಡೋದೆಂದ್ರೆ ಎಷ್ಟು ಇಷ್ಟ ನೋಡಿ

ಈ ವಿಡಿಯೋ ಹನ್ನೆರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಈ ವಿಡಿಯೋ ಈ ಮಹಿಳೆಯ ಗಂಡನು ವೀಕ್ಷಿಸುತ್ತಿರಬಹುದು ಎಂದು ತಮಾಷೆಯಾಗಿಯೇ ಹೇಳಿದ್ದಾರೆ. ಮತ್ತೊಬ್ಬರು ನಿಮ್ಗೆ ತುಂಬಾನೇ ಅನುಭವ ಇದ್ದಂತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ನಾನು ನಿಮ್ಮನ್ನು ಇಷ್ಟ ಪಡುತ್ತೇನೆ. ಸದ್ಯದಲ್ಲೇ ನಿಮ್ಮ ಮಾಸ್ಟರ್ ಕ್ಲಾಸ್ ಗೆ ಸೇರುತ್ತೇನೆ ಎಂದು ಹೇಳಿದ್ದಾರೆ. ಇನ್ನು ಕೆಲವ್ರು ಒಂದು ಸಲ ಪದೇ ಪದೇ ಗಂಡನ ಜೇಬಿನಿಂದ ದುಡ್ಡು ಹೋದ್ರೆ ಅನುಮಾನ ಬರುತ್ತೆ ಎಂದು ಕಾಮೆಂಟ್ ಮಾಡಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್