Viral Video: ಇದಪ್ಪಾ ಕ್ರಿಯೇಟಿವಿಟಿ ಅಂದ್ರೆ;  ಮೊಟ್ಟೆ ಚಿಪ್ಪಿನಲ್ಲಿ  ಕೋಳಿ ಮತ್ತು ಅದರ ಮರಿಗಳು

ನಾವೆಲ್ಲರೂ ಈ ಮೊಟ್ಟೆ ಚಿಪ್ಪಿನಿಂದ ಏನು ಉಪಯೋಗವಿಲ್ಲ ಎಂದು ಅವುಗಳನ್ನು ಕಸದ ಬುಟ್ಟಿಗೆ ಎಸೆದು ಬಿಡುತ್ತೇವೆ ಅಲ್ವಾ. ಆದ್ರೆ ಇಲ್ಲೊಂದು ಪುಟ್ಟ ಬಾಲಕಿ ಕಸದಿಂದ ರಸ ಎನ್ನುವ ಕಾನ್ಸೆಪ್ಟ್ ಇಟ್ಟುಕೊಂಡು, ಕಸದ ಬುಟ್ಟಿಗೆ ಎಸೆಯುವಂತಹ ಮೊಟ್ಟೆ ಚಿಪ್ಪುಗಳಿಂದ  ತಾಯಿ ಕೋಳಿ ಮತ್ತು ಕೋಳಿ  ಮರಿಗಳ ಸುಂದರ  ಕಲಾಕೃತಿಯನ್ನು ತಯಾರಿಸಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕ್ರಿಯೇಟಿವಿ ಅಂದ್ರೆ ಇದಪ್ಪಾ ಅಂತ ನೆಟ್ಟಿಗರು ಬಾಲಕಿಯ ಕಲಾ ಪ್ರತಿಭೆಯನ್ನು ಹೊಗಳಿದ್ದಾರೆ. 

Viral Video: ಇದಪ್ಪಾ ಕ್ರಿಯೇಟಿವಿಟಿ ಅಂದ್ರೆ;  ಮೊಟ್ಟೆ ಚಿಪ್ಪಿನಲ್ಲಿ  ಕೋಳಿ ಮತ್ತು ಅದರ ಮರಿಗಳು
Edited By:

Updated on: Jan 25, 2024 | 3:59 PM

ಸಾಮಾನ್ಯವಾಗಿ ಬಹುತೇಕ ಹೆಚ್ಚಿನವರು ಮೊಟ್ಟೆ ಚಿಪ್ಪನ್ನು ಇದ್ರಿಂದ ಏನು ಉಪಯೋಗ ಇಲ್ಲ ಅಂತ ಹೇಳಿ, ಅದನ್ನು ಕಸದ ಬುಟ್ಟಿಗೆ ಎಸೆದುಬಿಡುತ್ತಾರೆ. ಮೊಟ್ಟೆಗಳಂತೆ ಮೊಟ್ಟೆ ಚಿಪ್ಪುಗಳು ಕೂಡಾ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರ ಬಗ್ಗೆ ಅರಿವಿರುವವರು, ಮೊಟ್ಟೆ ಚಿಪ್ಪುಗಳನ್ನು ಎಸೆಯದೆ, ಅವುಗಳನ್ನು ಸಂಗ್ರಹಿಸಿಟ್ಟು ಅದನ್ನು ಗಿಡಗಳಿಗೆ ಗೊಬ್ಬರವಾಗಿ, ಮತ್ತು ಕೀಟನಾಶಕಗಳಾಗಿ ಬಳಸುತ್ತಾರೆ.  ಇನ್ನೂ ಕೆಲವರಂತೂ ಪ್ರಥಮ ಚಿಕಿತ್ಸೆಗಳಿಗೆ, ಫೇಸ್ ಮಾಸ್ಕ್ ತಯಾರಿಸಲು  ಹಾಗೂ ಡೆಕೊರೇಟಿವ್ ಐಟಂ ಗಳನ್ನು ತಯಾರಿಸಲು ಮೊಟ್ಟೆ ಚಿಪ್ಪನ್ನು ಉಪಯೋಗಿಸುತ್ತಾರೆ. ಅದೇ ರೀತಿ ಇಲ್ಲೊಂದು ಪುಟ್ಟ ಬಾಲಕಿ ಕಸದಿಂದ ರಸ ಎನ್ನುವ ಕಾನ್ಸೆಪ್ಟ್ ಇಟ್ಟುಕೊಂಡು, ಕಸದ ಬುಟ್ಟಿಗೆ ಎಸೆಯುವಂತಹ ಮೊಟ್ಟೆ  ಚಿಪ್ಪುಗಳಿಂದ  ತಾಯಿ ಕೋಳಿ ಮತ್ತು ಪುಟ್ಟ ಪುಟ್ಟ ಕೋಳಿ ಮರಿಗಳ ಸುಂದರ ಕಲಾಕೃತಿಯನ್ನು ತಯಾರಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದಪ್ಪಾ ಕ್ರಿಯೇಟಿವಿಟಿ ಅಂದ್ರೆ ಅಂತ ನೆಟ್ಟಿಗರು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

@Enezator ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಮೊಟ್ಟೆ ಚಿಪ್ಪುಗಳನ್ನು ಬಳಸಿಕೊಂಡು ಪುಟ್ಟ ಪುಟ್ಟ ಕೋಳಿ ಮರಿ ಮತ್ತು ತಾಯಿ  ಕೋಳಿಯ ಅದ್ಭುತ  ಕಲಾಕೃತಿಯನ್ನು ತಯಾರಿಸುತ್ತಿರುವ ಸುಂದರ ದೃಶ್ಯವನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು, ಇದ್ರಿಂದ ಯಾವುದೇ ಉಪಯೋಗವಿಲ್ಲ ಅಂತ ಕಸದ ಬುಟ್ಟಿಗೆ ಎಸೆದ ಕೋಳಿ ಮೊಟ್ಟೆಯ ಚಿಪ್ಪುಗಳನ್ನು ಸಂಗ್ರಹಿಸಿ, ಅದೇ ಕೋಳಿ ಮೊಟ್ಟೆ ಚಿಪ್ಪಿನಿಂದ ತಾಯಿ ಕೋಳಿ ಮತ್ತು ಕೋಳಿ ಮರಿಗಳ ಕಲಾಕೃತಿಯನ್ನು ತಯಾರಿಸಿದ್ದಾಳೆ. ಹೌದು ಆ ಬಾಲಕಿ ಗಮ್​​​ನ ಸಹಾಯದಿಂದ ಒಂದೊಂದೆ ಮೊಟ್ಟೆ ಚಿಪ್ಪನ್ನು ಜೋಡಿಸುತ್ತಾ ತಾಯಿ ಕೋಳಿ ಮತ್ತು ಮರಿಗಳ ಅದ್ಭುತ  ಕಲಾಕೃತಿಯನ್ನು ತಯಾರಿಸಿದ್ದಾಳೆ. ಮಗಳ ಈ ಪ್ರತಿಭೆಯನ್ನು ಕಂಡು ಆಕೆಯ ತಂದೆ ಆಶ್ಚರ್ಯಚಕಿತರಾಗಿ ನೋಡುವಂತಹ  ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ:

ಜನವರಿ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 12.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ  ಒಂದು ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರ ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು  ʼಮಕ್ಕಳ ಮನರಂಜನೆಗಾಗಿ ಇದು ಉತ್ತಮ ಮಾರ್ಗವಾಗಿದೆ. ಆಟಿಕೆಗಳ ಮೇಲೆ ಹೆಚ್ಚು ಖರ್ಚು ಮಾಡುವ ಬದಲು, ಈ ರೀತಿಯಾಗಿ ಮಕ್ಕಳು ತಮ್ಮ ಕೌಶಲ್ಯಗಳ ಮೇಲೆ ಕೆಲಸ ಮಾಡಲು ಬಿಡಬೇಕುʼ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮೊಟ್ಟೆ ಚಿಪ್ಪಿನಿಂದ ಇಂತಹದ್ದೊಂದು ಅದ್ಭತ ಕಲಾಕೃತಿಯನ್ನು ಮಾಡಬಹುದೆಂದು ನಾನು ಎಂದಿಗೂ ಯೋಚಿಸಿರಲಿಲ್ಲ, ಇದು ತುಂಬಾ ಅದ್ಭುತವಾಗಿದೆʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಬ್ಬಬ್ಬಾ ಇದು ತುಂಬಾ ಮುದ್ದಾಗಿದೆʼ ಎಂದು ಹೇಳಿದ್ದಾರೆ. ಹಾಗೂ ಹಲವರು ಕ್ರಿಯೇಟಿವಿಟಿ ಅಂದ್ರೆ ಇದಪ್ಪಾ ಅಂತ ಕಮೆಂಟ್ ಮಾಡಿದ್ದಾರೆ.