ಹೋಟೆಲ್‌ಗಳಲ್ಲಿ ರೂಮ್ ನಂಬರ್ 13 ಇಲ್ಲದಿರುವುದರ ಹಿಂದಿದೆ ಈ ಕಾರಣ

ನೀವು ದೊಡ್ಡ ದೊಡ್ಡ ರೆಸ್ಟೋರೆಂಟ್ ಅಥವಾ ಹೋಟೆಲ್‌ಗಳಿಗೆ ಹೋಗಿದ್ದೀರಬಹುದು. ಹೌದು, ಹೋಟೆಲ್‌ಗಳಲ್ಲಿ 13 ನಂಬರ್ ರೂಮ್ ಇರಲ್ಲ. 12 ರ ನಂತರ ನೇರವಾಗಿ ರೂಮ್ ನಂಬರ್ 14 ಎಂದು ಬರೆದಿರುತ್ತದೆ. 13 ​ದುರಾದೃಷ್ಟ ಸಂಖ್ಯೆ ಅಥವಾ ಸಾವಿನ ಸಂಖ್ಯೆ ಎಂಬ ನಂಬಿಕೆ ಇವತ್ತಿಗೂ ಜನರಲ್ಲಿ ಇದೆ. ಹೀಗಾಗಿ ಈ ನಂಬರ್ ರೂಮ್‌ ಇರಲ್ಲ.

ಹೋಟೆಲ್‌ಗಳಲ್ಲಿ ರೂಮ್ ನಂಬರ್ 13 ಇಲ್ಲದಿರುವುದರ ಹಿಂದಿದೆ ಈ ಕಾರಣ
ಸಾಂದರ್ಭಿಕ ಚಿತ್ರ
Image Credit source: Stefan Thallner/500Px Plus//Getty Images
Edited By:

Updated on: Sep 08, 2026 | 3:04 PM

ಮುಖ್ಯಾಂಶಗಳು

  • ಹೋಟೆಲ್‌ಗಳಲ್ಲಿ ರೂಮ್‌ ನಂಬರ್‌ 13 ಇರುವುದಿಲ್ಲ
  • 13 ನೇ ಸಂಖ್ಯೆಯನ್ನು ದುರದೃಷ್ಟಕ್ಕೆ ಸರಿಸಮನಾದ ಸಂಖ್ಯೆಯೆಂದು ಭಾವಿಸಲಾಗಿದೆ
  • ಈ ಸಂಖ್ಯೆಗೆ ಭಯ ಪಡುವ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ಟ್ರಿಸ್ಕೈಡೆಕಾಫೋಬಿಯಾ ಎಂಬ ಹೆಸರಿದೆ

ನೀವು ಬಹು ಅಂತಸ್ತಿನ ಕಟ್ಟಡ, ಹೋಟೆಲ್ (hotel) ಅಥವಾ ರೆಸ್ಟೋರೆಂಟ್‌ಗಳಲ್ಲಿ  13 ನಂಬರ್‌ನ ರೂಮ್ ಇಲ್ಲದಿರುವುದನ್ನು ಗಮನಿಸಿದ್ದೀರಾ. ಈ ವಿಚಾರ ನಿಮ್ಮ ಗಮನಕ್ಕೆ ಬಂದಿದ್ರೂ ನೀವು ಇದನ್ನು ಅಷ್ಟೇನು ಗಂಭೀರವಾಗಿ ಪರಿಗಣಿಸಿರಲ್ಲ. ಹೌದು, ಯಾವುದೇ ಐಷಾರಾಮಿ ಹೋಟೆಲ್‌ನಿಂದ ಹಿಡಿದು ಸಣ್ಣ ಪುಟ್ಟ ಹೋಟೆಲ್‌ನಲ್ಲೂ ಗಮನಿಸಿದರೆ ಅಲ್ಲಿ ರೂಮ್‌ ನಂಬರ್ 13 ಇರುವುದೇ ಇಲ್ಲ. ಇದರ ಹಿಂದೆ ಕಾರಣವೂ ಇದೆ. 13 ನೇ ಸಂಖ್ಯೆಯನ್ನು ದುರದೃಷ್ಟಕ್ಕೆ ಸರಿಸಮನಾದ ಸಂಖ್ಯೆ ಎಂದು ನಂಬಲಾಗಿದೆ. ಈ ಸಂಖ್ಯೆಗೆ ಭಯ ಪಡುವ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ಟ್ರಿಸ್ಕೈಡೆಕಾಫೋಬಿಯಾ ಎಂದು ಕರೆಯಲಾಗುತ್ತದೆ. ಈ ಕುರಿತಾದ ಇನ್ನಷ್ಟು ಕುತೂಹಲಕಾರಿ  ಮಾಹಿತಿ ಇಲ್ಲಿದೆ.

13 ನಂಬರ್‌ ಅಶುಭದ ಸೂಚಕ

ಪಾಶ್ಚಿಮಾತ್ಯ ದೇಶಗಳಲ್ಲಿ 13 ಅಶುಭದ ಸಂಖ್ಯೆಯಾಗಿದೆ. ಈ ಸಂಖ್ಯೆಯೂ ಆತ್ಮಗಳೊಂದಿಗೆ ಸಂಬಂಧ ಹೊಂದಿದೆ ಎನ್ನುವುದು ಅನೇಕರ ನಂಬಿಕೆ. ಅಶುಭ ಹಾಗೂ ಅಪಾಯಕಾರಿ ಎಂದುಕೊಂಡಿರುವ ಜನರು ಈ ದಿನದಂದು ಶುಭ ಸಮಾರಂಭ, ಹೊಸ ವ್ಯವಹಾರ, ಮದುವೆ ಸೇರಿದಂತೆ ಇನ್ನಿತ್ತರ ಕಾರ್ಯಕ್ರಮಗಳನ್ನು ಏರ್ಪಡಿಸುವುದಿಲ್ಲ.

ಈ ಸಂಖ್ಯೆಗೂ ಯೇಸು ಪ್ರಭುವಿಗೂ ಇದೆ ನಂಟು

ಯೇಸು ಪ್ರಭುವಿನ ಕೊನೆಯ ಔತಣಕೂಟದಲ್ಲಿ ಒಟ್ಟು 13 ಜನರು ಸೇರಿದ್ದರು. ಆ ಔತಣ ಕೂಟದಲ್ಲಿ ಸೇರಿದ್ದ 13ನೇ ವ್ಯಕ್ತಿ ‘ಜೂಡಾಸ್’ ಯೇಸುವಿಗೆ ದ್ರೋಹ ಬಗೆದಿದ್ದ. ಈ ಕಾರಣದಿಂದ ಈ ಸಂಖ್ಯೆಯನ್ನು ಅಶುಭ ಎಂದು ಪರಿಗಣಿಸಲಾಗಿದೆ ಎನ್ನುವ ನಂಬಿಕೆಯೂ ಇದೆ.

ಇದನ್ನೂ ಓದಿ: ಬಹು ಅಂತಸ್ತಿನ ಕಟ್ಟಡ ಏರಿ ತುತ್ತ ತುದಿನಲ್ಲಿ ನಿಂತ ಶ್ವಾನ, ಮುಂದೇನಾಯ್ತು ನೋಡಿ

 ಹೋಟೆಲ್‌ಗಳಲ್ಲಿ 13 ರ ಬದಲಿಗೆ ಈ ಸಂಖ್ಯೆ ಬಳಕೆ

ಹೋಟೆಲ್‌ ರೂಮ್‌ ಮತ್ತು ಬಹುಮಹಡಿಯ ಕಟ್ಟಡಗಳ ಫ್ಲೋರ್‌ಗಳಲ್ಲಿ 12 ರ ನಂತರ 14 ನೇ ನಂಬರ್ ಇಲ್ಲವಾದರೆ 12ಎ ಅಥವಾ 14ಎ ಎಂದು ಬರೆಯಲಾಗುತ್ತದೆ. ಇದು ಹೋಟೆಲ್ ಉದ್ಯಮದಲ್ಲಿ ಗ್ರಾಹಕರಿಗೆ ಅಸಮಾಧಾನವಾಗಬಾರದು, ವ್ಯಾಪಾರದಲ್ಲಿ ನಷ್ಟವಾಗಬಾರದು ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Loading...
Unable to load recommendations.
Follow Us