ಇದು ರೈಲ್ವೆ ನಿಲ್ದಾಣದಲ್ಲಿ ಹಿರಿಯ ದಂಪತಿಗಳು ತಿಂಡಿ ಮಾರುವ ಕಥೆ, ಯುವ ಸಮಾಜಕ್ಕೆ ಇವರು ಸ್ಪೂರ್ತಿ

ವಯಸ್ಸಾದ ದಂಪತಿಗಳು ರೈಲುವೇ ನಿಲ್ದಾಣದಲ್ಲಿ ನಿಂತು ತಿಂಡಿ ಮಾರಿ ಜೀವನ ಸಾಗಿಸುವ ಸ್ಫೂರ್ತಿಯ ಕಥೆ ಇದು. ಈ ಇಬ್ಬರಲ್ಲಿ ಒಂದು ನೋವಿನ ಕಥೆ ಇದೆ. ತಮ್ಮ ಜೀವನಕ್ಕೆ ನಾವೇ ಶ್ರಮ ಪಡಬೇಕು ಎಂಬ ಸಂದೇಶ ಇದೆ. ಈ ವಿಡಿಯೋವನ್ನು ನಮ್ಮ ಯುವಕರು ನೋಡಲೇಬೇಕು ಎಂದು ವ್ಲಾಗರ್​ ಒಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ದೈಹಿಕ ಕೊರತೆಗಳಿದ್ದರು. ಶ್ರಮದಿಂದಲ್ಲೇ ಜೀವನ ಸಾಗಿಸಬೇಕು ಎಂಬ ಛಲ ಇವರಲ್ಲಿದೆ. ಬಗ್ಗೆ ಇಲ್ಲಿದೆ ನೋಡಿ ವಿಡಿಯೋ

ಇದು ರೈಲ್ವೆ ನಿಲ್ದಾಣದಲ್ಲಿ ಹಿರಿಯ ದಂಪತಿಗಳು ತಿಂಡಿ ಮಾರುವ ಕಥೆ, ಯುವ ಸಮಾಜಕ್ಕೆ ಇವರು ಸ್ಪೂರ್ತಿ
ವೈರಲ್​ ವಿಡಿಯೋ
Edited By:

Updated on: Jan 06, 2025 | 6:14 PM

ಮುಂಬೈನ ಥಾಣೆ ರೈಲು ನಿಲ್ದಾಣದಲ್ಲಿ ವಯಸ್ಸಾದ ದಂಪತಿಗಳ ಈ ವಿಡಿಯೋ Instagramನಲ್ಲಿ ಅನೇಕರ ಮೆಚ್ಚುಗೆಗೆ ಕಾರಣವಾಗಿದೆ. ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ, ಅಷ್ಟಕ್ಕೂ ಈ ವಿಡಿಯೋ ಯಾವುದು? ಇಲ್ಲಿದೆ ನೋಡಿ ಈ ಹಿರಿ ಜೀವಗಳ ಶ್ರಮದ ಕಥೆ. ವ್ಲಾಗರ್​​ ಸಿದ್ಧೇಶ್ ಲೋಕರೆ ಅವರು ಹಂಚಿಕೊಂಡಿರುವ ಈ ವಿಡಿಯೋ ಸಖತ್​​ ಸದ್ದು ಮಾಡಿದೆ. ಕೆಲವು ದಿನಗಳ ಹಿಂದೆ ಥಾಣೆ ನಿಲ್ದಾಣದಲ್ಲಿ ದಂಪತಿಗಳಾದ ಭೀಮರಾವ್ ಮತ್ತು ಶೋಭಾ ಅವರ ಫೋಟೋವನ್ನು ಯಾರೋ ತನಗೆ ಕಳುಹಿಸಿದರು. ನಂತರ ಅವರನ್ನು ಪತ್ತೆ ಹಚ್ಚಿ ಸಂದರ್ಶಿಸುವಲ್ಲಿ ಯಶಸ್ವಿಯಾದೆ ಎಂದು ಅವರ ಜತೆಗಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ದಂಪತಿಗಳ ದಾಂಪತ್ಯದ ಬಗ್ಗೆ ಕೇಳಿದಾಗ, ಅವರಿಬ್ಬರು ನಾಲ್ಕು ದಶಕಗಳಿಂದ ಒಟ್ಟಿಗೆ ಇದ್ದಾರೆ. ಪ್ರತಿದಿನ ರೈಲ್ವೆ ನಿಲ್ದಾಣಕ್ಕೆ ಬರುತ್ತಾರೆ. ಅಲ್ಲಿ ಯಾರಾದರೂ ಆರ್ಡರ್ ಮಾಡಿದ್ದರೆ ಅವರು ತಿಂಡಿ/ಸಿಹಿಗಳನ್ನು ತಲುಪಿಸುವ ಕೆಲಸ ಕೂಡ ಮಾಡುತ್ತಾರೆ. ಚಕ್ಲಿ, ಕಚೋರಿ, ಭಾಕರವಾಡಿ ಮುಂತಾದ ತಿಂಡಿಗಳನ್ನು ಮಾಡಿ ಮಾರಾಟ ಮಾಡುತ್ತಾರೆ.

ಆದರೆ ಆ ಮಹಿಳೆಯ ಗಂಡ ಭೀಮರಾವ್ ಅವರು ದೃಷ್ಟಿ ಕಳೆದುಕೊಂಡಿದ್ದಾರೆ. ಶೋಭಾಗೆ ತಾನು ದೃಷ್ಟಿ ಇಲ್ಲದವನನ್ನು ಎಂದು ಗೊತ್ತಿದ್ದರು ಮದುವೆಯಾಗಿದ್ದಾರೆ. ಈ ಬಗ್ಗೆ ಶೋಭಾ ಅವರನ್ನು ಕೇಳಿದ್ರೆ ಚಿಕ್ಕ ನಗು ಬೀರುತ್ತಾರೆ. ಶೋಭಾ ಅವರ ಬಗ್ಗೆ ಮಾತನಾಡಿದ ಭೀಮರಾವ್ ನಾನು ದೃಷ್ಟಿಹೀನಳಾಗಿದ್ದೇನೆ. ಅವಳ ಕೈ ವಿರೂಪಗೊಂಡಿದೆ. ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ನಮ್ಮಲ್ಲಿ ಕೊರತೆ ಇದೆ ಎಂದು ಹೇಳಲು ಸಾಧ್ಯವಿಲ್ಲ.

ಭೀಮರಾವ್ ಅವರೇ ನೀವು ಹೇಗೆ ನಿಮ್ಮ ಹೆಂಡತಿ ಶೋಭಾ ಅವರಿಗೆ ಸಾಹಯ ಮಾಡಿತ್ತೀರಾ ಎಂದು ಕೇಳಿದಾಗ, ಅವರು ತಿಂಡಿ ನೀಡುವಾಗ ನಾನು ನೀರು ನೀಡುತ್ತೇನೆ. ತರಕಾರಿ ಕಟ್​​ ಮಾಡುತ್ತೇನೆ. ಈ ಬಗ್ಗೆ ನನ್ನನ್ನೂ ಆಕೆ ತುಂಬಾ ಹೊಗಳುತ್ತಾಳೆ. ಅದುವೇ ನನಗೆ ಸಾಕು ಎಂದು ಹೇಳುತ್ತಾರೆ. ವ್ಲಾಗರ್ ದಂಪತಿಗಳಿಗೆ ಪ್ರೀತಿ ಎಂದರೆ ಏನು ಎಂದು ಕೇಳುತ್ತಾರೆ. ವಿಶೇಷವಾಗಿ ಈ ವಯಸ್ಸಿನಲ್ಲಿ ಒಬ್ಬರಿಗೊಬ್ಬರು ಬೇಕು ಎಂದು ಉತ್ತರಿಸುತ್ತಾರೆ.

ಇದನ್ನೂ ಓದಿ: ಮೆನುವಿನಲ್ಲಿ ಬೀಫ್‌ ರೆಸಿಪಿ ಹೆಸರು ನೋಡಿ ರೆಸ್ಟೋರೆಂಟ್ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಹಕರು; ವಿಡಿಯೋ ವೈರಲ್‌

ವ್ಲಾಗರ್ ಈಗ ನಿಮಗೆ ಏನು ಬೇಕು, ನಮಗೆ ಒಂದು ಸ್ಟಾಲ್​​ ಬೇಕು ಎಂದು ಹೇಳುತ್ತಾರೆ. ಇದರಿಂದ ನನ್ನ ಗಂಡ ಹೆಚ್ಚು ಹೊತ್ತು ಇಲ್ಲಿ ನಿಲ್ಲುವ ಅವಶ್ಯಕತೆ ಇರಲ್ಲ ಎಂದು ಹೇಳುತ್ತಾರೆ. ವ್ಲಾಗರ್ ದಂಪತಿಗಳಲ್ಲಿ ಈ ಯುವಸಮಾಜಕ್ಕೆ ಏನು ಹೇಳಿತ್ತೀರಾ? ಎಂದು ಕೇಳಿದಾಗ, “ಕಠಿಣ ಪರಿಶ್ರಮವೇ ಸರ್ವಸ್ವ. ನಿನಗಾಗಿ ಮಾತ್ರ ಬದುಕಲು ಸಾಧ್ಯವಿಲ್ಲ. ಇತರರಿಗಾಗಿ ಬದುಕಿದ್ದರೆ ನಿಜವಾಗಿ ಬದುಕಿ ಎಂದು ಹೇಳುತ್ತಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ