ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ಇದರಿಂದ ಸಂಬಂಧದಲ್ಲಿ ನೀವೇನನ್ನು ಬಯಸುತ್ತೀರಿ ಎಂದು ಹೇಳಬಹುದಂತೆ!

ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ಇದರಿಂದ ಸಂಬಂಧದಲ್ಲಿ ನೀವೇನನ್ನು ಬಯಸುತ್ತೀರಿ ಎಂದು ಹೇಳಬಹುದಂತೆ!
ಆಪ್ಟಿಕಲ್ ಇಲ್ಯೂಶನ್ ಚಿತ್ರ

Optical Illusion: ಲ್ಲಿ ನೀಡಲಾಗಿರುವ ಚಿತ್ರದಲ್ಲಿ ಐದು ವಿಭಿನ್ನ ಚಿತ್ರಗಳಿಂದ ಕೂಡಿದ ಒಂದು ಕಲಾಕೃತಿಯಿದೆ. ಅದನ್ನು ನೋಡಿದಾಗ ನಿಮಗೆ ಮೊದಲು ಯಾವುದು ಕಣ್ಣಿಗೆ ಬೀಳುತ್ತದೆ ಎನ್ನುವ ಆಧಾರದಿಂದ ಪ್ರೀತಿ ಮತ್ತು ಸಂಬಂಧಗಳ ವಿಚಾರದಲ್ಲಿ ನಿಮಗೆ ಯಾವುದು ಮುಖ್ಯ ಎಂಬುದರ ಕುರಿತು ಹೇಳಬಹುದು ಎನ್ನಲಾಗಿದೆ.

TV9kannada Web Team

| Edited By: shivaprasad.hs

Apr 22, 2022 | 12:08 PM

ಆಪ್ಟಿಕಲ್ ಇಲ್ಯೂಶನ್​ (Optical Illusion) ಚಿತ್ರಗಳು ಅಥವಾ ಕಲಾಕೃತಿಗಳು ನಾವು ಚಿತ್ರವನ್ನು ಹೇಗೆ ಅರ್ಥೈಸಿಕೊಳ್ಳುತ್ತೇವೆ ಎಂಬುದರ ಆಧಾರದ ಮೇಲೆ ನಮ್ಮ ವ್ಯಕ್ತಿತ್ವ ಮತ್ತು ಬಯಕೆಗಳ ಬಗ್ಗೆ ಒಳನೋಟಗಳನ್ನು ತಿಳಿಸುತ್ತದೆ ಎಂದು ಹೇಳಲಾಗುತ್ತದೆ. ಇಂಥದ್ದೇ ಒಂದು ಚಿತ್ರ ಈಗ ವೈರಲ್ ಆಗಿದೆ. ಇಲ್ಲಿ ನೀಡಲಾಗಿರುವ ಚಿತ್ರದಲ್ಲಿ ಐದು ವಿಭಿನ್ನ ಚಿತ್ರಗಳಿಂದ ಕೂಡಿದ ಒಂದು ಕಲಾಕೃತಿಯಿದೆ. ಅದನ್ನು ನೋಡಿದಾಗ ನಿಮಗೆ ಮೊದಲು ಯಾವುದು ಕಣ್ಣಿಗೆ ಬೀಳುತ್ತದೆ ಎನ್ನುವ ಆಧಾರದಿಂದ ಪ್ರೀತಿ ಮತ್ತು ಸಂಬಂಧಗಳ ವಿಚಾರದಲ್ಲಿ ನಿಮಗೆ ಯಾವುದು ಮುಖ್ಯ ಎಂಬುದರ ಕುರಿತು ಹೇಳಬಹುದಂತೆ. ‘ದಿ ಮೈಂಡ್ಸ್ ಜರ್ನಲ್’ ಪ್ರಕಾರ, ಈ ಆಪ್ಟಿಕಲ್ ಇಲ್ಯೂಶನ್ ಚಿತ್ರವನ್ನು ಐದು ರೀತಿಯಲ್ಲಿ ಅರ್ಥೈಸಬಹುದು. ಇದರಿಂದ ನೀವು ಸಂಬಂಧಗಳಲ್ಲಿ ಏನನ್ನು ಹುಡುಕುತ್ತೀರಿ ಎಂದು ಹೇಳಬಹುದು. ಏನೇನದು? ಇಲ್ಲಿದೆ ನೋಡಿ.

ಮನುಷ್ಯನ ಮುಖ:

ಇದನ್ನು ನೀವು ಮೊದಲು ಗಮನಿಸಿದರೆ, ಸಂಬಂಧಗಳಲ್ಲಿ ನಿಮ್ಮನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬಯಸುತ್ತೀರಿ ಎಂದು ಹೇಳಬಹುದು. ಮೈಂಡ್ಸ್ ಜರ್ನಲ್ ಹೇಳುವಂತೆ ಮನುಷ್ಯನ ಮುಖವನ್ನು ನೋಡುವವರು ಕಷ್ಟಪಟ್ಟು ದುಡಿಯುವ ಜನರಾಗಿದ್ದಾರೆ. ಅವರು ತಮ್ಮ ಪ್ರೀತಿಪಾತ್ರರಿಂದ ಗೌರವ, ಮೆಚ್ಚುಗೆಯನ್ನು ಪಡೆಯಲು ಪ್ರಯತ್ನಿಸುತ್ತಾರೆ. ಈ ಜನರು ತಮ್ಮ ಸುತ್ತಲಿನ ಇತರರನ್ನು ‘ಸೂಕ್ಷ್ಮವಾಗಿ ಗಮನಿಸುವುದರ ಮೂಲಕ’ ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಜನರಿಗೆ ಹೇಗೆ ಪ್ರಿಯವೋ ಹಾಗೆ ನೀವಿರುತ್ತೀರಿ. ನೀವು ಮೋಸಗಾರರಲ್ಲ.

ಜನರೆದುರು ನೀವು ಹೇಗೆ ಕಾಣಿಸಿಕೊಳ್ಳುತ್ತೀರಿ ಎಂಬುದರ ಬಗ್ಗೆ ನೀವು ಜಾಗರೂಕರಾಗಿರುತ್ತೀರಿ. ಯಾರಿಗೂ ನೀವು ಸಂಪೂರ್ಣವಾಗಿ ತಿಳಿದಿರುವುದಿಲ್ಲ ಹೀಗಾಗಿ ಜನರಿಗೆ ನೀವೊಂದು ರೀತಿ ನಿಗೂಢ ವ್ಯಕ್ತಿಯಂತೆ ಕಾಣಿಸಲೂಬಹುದು. ಕೆಲವರು ನಿಮ್ಮನ್ನು ಆಳವಾಗಿ ಅರ್ಥ ಮಾಡಿಕೊಳ್ಳಲು ವಿಫಲರಾಗುತ್ತಾರೆ. ನೀವು ಸಂಬಂಧಗಳಲ್ಲೂ ಎಷ್ಟು ಬೇಕೋ ಅಷ್ಟೇ ನಿಮ್ಮ ಭಾವನೆಗಳನ್ನು ತೋರ್ಪಡಿಸುವುದರಿಂದ ನಿಮ್ಮ ಸಂಗಾತಿಗೆ ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗಬಹುದು. ಆದರೆ ನೀವು ತಾಳ್ಮೆಯಿಂದಿರಬೇಕು. ಕಾಲಕಳೆದಂತೆ ನಿಮ್ಮ ಬಗ್ಗೆ ಜನರಿಗೆ ಅರಿವಾಗುತ್ತದೆ.

ಕೋಟ್‌ ಧರಿಸಿ ನಿಂತಿರುವ ವ್ಯಕ್ತಿ:

ಇದನ್ನು ನೀವು ಮೊದಲು ಗಮನಿಸಿದರೆ, ಇದರ್ಥ- ಜನರು ನಿಮ್ಮನ್ನು ಒಪ್ಪಿಕೊಳ್ಳಬೇಕು ಎಂದು ನೀವು ಭಾವಿಸುತ್ತೀರಂತೆ. ಹಾಗೆಯೇ ಈ ಮಾದರಿಯ ವ್ಯಕ್ತಿಗಳು ಜೀವನವನ್ನು ಅರ್ಥಮಾಡಿಕೊಂಡಿರುತ್ತಾರೆ. ತಮ್ಮ ಒಳಗೆಲ್ಲೋ ದುಃಖ ಇಟ್ಟುಕೊಂಡಿರುತ್ತಾರೆ. ಜೀವನದಲ್ಲಿ ಸಣ್ಣ ಸಣ್ಣ ಸಂಗತಿಗಳನ್ನು ಗುರುತಿಸುತ್ತಾರೆ. ತಮ್ಮ ಸಂಗಾತಿಯಿಂದ ಪೂರ್ಣ ಪ್ರಮಾಣದ ಪ್ರೀತಿಯನ್ನು ಅಪೇಕ್ಷಿಸುತ್ತಾರೆ. ಮತ್ತು ಸಂಗಾತಿಯನ್ನೂ ಹಾಗೆಯೇ ಪ್ರೀತಿಸುತ್ತಾರೆ. ‘ಜೀವನ ಮತ್ತು ಸಾವಿನ ಬಗ್ಗೆ ನಿಮ್ಮ ಆಳವಾದ ತಿಳುವಳಿಕೆಯನ್ನು ಗೌರವಿಸುವ ಮತ್ತು ಪ್ರಶಂಸಿಸುವ ಹಾಗೆಯೇ ನಿಮ್ಮ ವ್ಯಕ್ತಿತ್ವದಲ್ಲಿ ನಿಜವಾದ ಸೌಂದರ್ಯವನ್ನು ನೋಡುವ ಜನರನ್ನು ನೀವು ಹುಡುಕುತ್ತಿದ್ದೀರಿ’ ಎಂದು ಜರ್ನಲ್​ನಲ್ಲಿ ವಿವರಿಸಲಾಗಿದೆ.

ಮೇಜಿನ ಮೇಲೆ ಮಲಗಿರುವ ಮಗು:

ಈ ಚಿತ್ರವನ್ನು ನೀವು ಮೊದಲು ಗುರುತಿಸದರೆ, ನೀವು ಬೇರೆಯವರಿಂದ ಪೋಷಣೆಯನ್ನು ಬಯಸುತ್ತಿದ್ದೀರಿ ಎಂದರ್ಥ. ಸಾಮಾನ್ಯವಾಗಿ ಸಂಬಂಧಗಳು ಮತ್ತು ಜೀವನ ಎರಡರಲ್ಲೂ ಈ ವ್ಯಕ್ತಿಗಳು ತುಸು ಅಸಹಾಯಕರಾಗಿರುತ್ತಾರೆ. ಹೀಗಾಗಿ ಅವರು ಯಾರಾದರೂ ಸಹಾಯ ಮಾಡುವ ಪೋಷಕರನ್ನು ಬಯಸುತ್ತಾರೆ. ಈ ಮಾದರಿಯ ವ್ಯಕ್ತಿಗಳು ಸುಲಭವಾಗಿ ಆತಂಕ ಮತ್ತು ಒತ್ತಡವನ್ನು ಅನುಭವಿಸುತ್ತಾರೆ. ಹೆಚ್ಚಿನ ಸಮಯ ನಿದ್ರಾಹೀನತೆಯನ್ನು ಅನುಭವಿಸುತ್ತಾರೆ. ಕೆಲವೊಮ್ಮೆ ಅಳುತ್ತಾರೆ. ಈ ಮೂಲಕ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲು ಅಣಿಯಾಗುತ್ತಾರೆ ಎಂದು ಜರ್ನಲ್​ ವಿವರಿಸುತ್ತದೆ.

ನೀವು ಸಂಬಂಧಗಳಲ್ಲಿ ಪ್ರೀತಿ ಮತ್ತು ಪೋಷಣೆಯನ್ನು ಅನುಭವಿಸಬೇಕು. ಪ್ರೀತಿಯ, ಕಾಳಜಿಯುಳ್ಳ ಸಂಗಾತಿಯನ್ನು ನಿಮ್ಮ ಹೃದಯವು ಸದಾ ಬಯಸುತ್ತದೆ. ಇದರ್ಥ ನೀವು ಮಗುವಿನಂತೆ ಎಂದರ್ಥವಲ್ಲ. ಬದಲಾಗಿ ನೀವು ಭಾವನಾತ್ಮಕ ಜೀವಿ. ಬೇರೆಯವರ ಬಗ್ಗೆಯೂ ಭಾವನಾತ್ಮಕ ಕಾಳಜಿ ತೆಗೆದುಕೊಳ್ಳುವ ನೀವು, ನಿಮ್ಮ ಸಂಗಾತಿಯಲ್ಲೂ ಅದನ್ನೇ ಬಯಸುತ್ತೀರಿ.

ಪುಸ್ತಕಗಳನ್ನು ಓದುತ್ತಿರುವ ಮಂತ್ರವಾದಿ:

ಇದರ ಅರ್ಥ ನೀವು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಸಂಪರ್ಕ ಹೊಂದಲು ಇಷ್ಟಪಡುತ್ತೀರಿ. ಈ ವ್ಯಕ್ತಿತ್ವದ ಜನರು ವಿವಿಧ ಧರ್ಮಗಳಲ್ಲಿ ತೀವ್ರ ಆಸಕ್ತಿಯನ್ನು ಹೊಂದಿರುತ್ತಾರೆ. ಹಾಗೆಯೇ ಜೀವನದ ಬಗ್ಗೆ ಕುತೂಹಲ ಹೊಂದಿರುತ್ತಾರೆ. ಅಂಥದ್ದೇ ವ್ಯಕ್ತಿತ್ವದೊಂದಿಗೆ ಇವರು ಆಕರ್ಷಿತರಾಗುತ್ತಾರೆ. ಜರ್ನಲ್​ನಲ್ಲಿ ತಿಳಿಸಿರುವಂತೆ ಇಂತಹ ವ್ಯಕ್ತಿತ್ವದ ಜನರು ರೊಮ್ಯಾಂಟಿಕ್ ಸಂಬಂಧದಲ್ಲಿ ಆಧ್ಯಾತ್ಮಿಕ ಅನುಭೂತಿ ಬಯಸುತ್ತಾರೆ. ಒಂದೇ ರೀತಿಯ ಧಾರ್ಮಿಕ ಅಥವಾ ಆಧ್ಯಾತ್ಮಿಕ ನಂಬಿಕೆಗಳನ್ನು ಹಂಚಿಕೊಳ್ಳದಿದ್ದರೂ ಸಹ ಸಂಗಾತಿಯೊಂದಿಗೆ ಆಳವಾದ ಮತ್ತು ಅರ್ಥಪೂರ್ಣ ಬಂಧವನ್ನು ಹಂಚಿಕೊಳ್ಳುವುದು ಬಹಳ ಮುಖ್ಯ ಎಂದು ಭಾವಿಸುತ್ತಾರೆ.

ಬಿಳಿ ಬಟ್ಟೆ ಧರಿಸಿದ ಇಬ್ಬರು ಮಹಿಳೆಯರು:

ಈ ವ್ಯಕ್ತಿಗಳನ್ನು ನೀವು ಮೊದಲು ಚಿತ್ರದಲ್ಲಿ ಗುರುತಿಸಿದ್ದರೆ, ನಿಮಗೆ ಸವಾಲುಗಳೆಂದರೆ ಇಷ್ಟ. ಇದರರ್ಥ ನಿಮಗೆ ಸವಾಲಾಗುವಂತಹ ವ್ಯಕ್ತಿತ್ವ ಹೊಂದಿರುವ ಸಂಗಾತಿಯನ್ನು ನೀವು ಹುಡುಕುತ್ತಿದ್ದೀರಿ. ಇಂತಹ ವ್ಯಕ್ತಿತ್ವ ಹೊಂದಿರುವವರು ತಮ್ಮ ಮತ್ತು ತಮ್ಮ ಜೀವನದ ಮೇಲೆ ನಿಯಂತ್ರಣ ಹೊಂದಬಹುದಾದ ವ್ಯಕ್ತಿಗಳನ್ನು ಹುಡುಕುತ್ತಾರಂತೆ. ಇಂತಹ ಮನೋಭಾವದವರು ಯಾವುದೇ ಪರಿಸ್ಥಿತಿಯಲ್ಲಿ ಬುದ್ಧಿವಂತ ವ್ಯಕ್ತಿಯಾಗಿರುತ್ತಾರೆ ಮತ್ತು ವಿಷಯಗಳನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿದಿರುತ್ತಾರಂತೆ. ಹೀಗಾಗಿಯೇ ಈ ಮಾದರಿಯ ವ್ಯಕ್ತಿತ್ವ ಹೊಂದಿರುವವರು ತಮ್ಮ ಬುದ್ಧಿಶಕ್ತಿಗೆ ಸಮವಾಗಿರಬಹುದಾದ ಮತ್ತೊಂದು ವ್ಯಕ್ತಿತ್ವವನ್ನು ಸಂಗಾತಿಯಲ್ಲಿ ಹುಡುಕುತ್ತಾರೆ.

ಇದನ್ನೂ ಓದಿ: ಈ ಮಾವಿನ ಹಣ್ಣುಗಳ ನಡುವೆ ಗಿಳಿಯೊಂದು ಅಡಗಿ ಕುಳಿತಿದೆ; ನೀವು ಗುರುತಿಸಬಲ್ಲಿರಾ?

ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ಇದರಿಂದ ನಿಮ್ಮ ವ್ಯಕ್ತಿತ್ವವನ್ನೇ ಹೇಳಬಹುದಂತೆ!

Follow us on

Related Stories

Most Read Stories

Click on your DTH Provider to Add TV9 Kannada