Viral News: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಚಿತ್ರ ಫೋಟೋ, ವಿಡಿಯೋಗಳು ವೈರಲ್ ಆಗುತ್ತವೆ. ಅದೇ ರೀತಿ ಇದೀಗ ಮೂರುಕೊಂಬಿನ ಹಿಸುವಿನ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ನೀವು ಎರಡು ಕೊಂಬಿನ ಹಸುವನ್ನು ನೋಡಿರುವುದು ಸಹಜ ಸಂಗತಿ, ಆದ್ರೆ ಇಲ್ಲಿದೆ ನೋಡಿ ಮೂರು ಕೊಂಬಿನ ಹಸು. ಭಾರತದಲ್ಲಿ ಹಸುಗಳು ಸಾಮಾನ್ಯವಾಗಿ ಎಲ್ಲೆಡೆ ಕಾಣ ಸಿಗುತ್ತದೆ. ಹಸು ಒಂದು ಸಾಕು ಪ್ರಾಣಿಯಾಗಿದ್ದು ಬಹಳ ಜನ ಇದರ ಸುತ್ತವೆ ತಮ್ಮ ವೃತ್ತಿಯನ್ನು ಕಂಡುಕೊಂಡಿದ್ದಾರೆ. ಆದರೆ ಈ ಮೂರು ಕೊಂಬಿನ ಹಸು ಮೈದಾನ ಒಂದರಲ್ಲಿ ಆರಾಮವಾಗಿ ಓಡಾಡುತ್ತಿದ್ದು, ಯಾರು ಈ ವಿಶಿಷ್ಟ ಹಸುವಿನ ಮಾಲೀಕ ಎಂಬ ಕುತೂಹಲ ಸೃಷ್ಟಿಯಾಗಿದೆ.
“ಮೂರು ಕೊಂಬುಗಳನ್ನು ಹೊಂದಿರುವ ಹಸುವನ್ನು ಎಂದಾದರೂ ನೋಡಿದ್ದೀರಾ?” ಎಂಬ ಕ್ಯಾಪ್ಶನ್ ನೊಂದಿಗೆ ವಿಚಿತ್ರ ವಿಡಿಯೋ ಒಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ತನ್ನ ಮೂರು ದೊಡ್ಡ ಕೊಂಬುಗಳನ್ನು ತೋರಿಸುತ್ತಾ ಹಸು ಹೊಲದಲ್ಲಿ ತಿರುಗಾಡುವುದನ್ನು ನೋಡಬಹುದು. ಹಿಂದೂಸ್ತಾನ್ ಟೈಮ್ಸ್‌ನ 2020 ರ ಲೇಖನದಲ್ಲಿ ಇದೇ ವೀಡಿಯೊವನ್ನು ಬಳಸಿಕೊಳ್ಳಲಾಗಿದೆ. ಆ ಲೇಖನದ ಪ್ರಕಾರ ಇದು ಅಂಕೋಲೆ ತಳಿಯ ಹಸು ಎಂಬುದು ತಿಳಿಯುತ್ತದೆ.
कभी देखा है तीन सींग वाला सांड…#bull #Trending #TrendingNow #viral2023 pic.twitter.com/M96T3uIrF7
— Narendra Singh (@NarendraNeer007) January 28, 2023
ಇದನ್ನೂ ಓದಿ: ಧಾರೆ ಸೀರೆ, ಮೈ ತುಂಬಾ ಆಭರಣ ಧರಿಸಿ ಪರೀಕ್ಷೆ ಬರೆಯಲು ಬಂದ ಮಧುಮಗಳ ವಿಡಿಯೋ ಇಲ್ಲಿದೆ ನೋಡಿ
ಅಂಕೋಲೆ ಹಸುಗಳು (Ankole Cows) ಉದ್ದವಾದ ಬಿಳಿ ಕೊಂಬುಗಳನ್ನು ಹೊಂದಿರುತ್ತದೆ. ಆದರೆ ಈ ವಿಶಿಷ್ಟ ಗೋವು ತನ್ನ ತಲೆಯ ಮೇಲಿನ ಮೂರನೇ ಕೊಂಬಿನಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನವನ್ನು ಸೆಳೆದಿದೆ. ಇದೇ ವಿಡಿಯೋವನ್ನು IFS ಸುಶಾಂತ್ ನಂದಾ (Sushant Nanda IFS) ಅವರು ಮೇ 2020 ರಲ್ಲಿ ಹಂಚಿಕೊಂಡಿದ್ದರು, ಆದ ಈ ವಿಡಿಯೋ 13 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 1000 ಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದುಕೊಂಡಿತ್ತು. ಕಾಮೆಂಟ್‌ಗಳ ಮಹಾಪೂರವೇ ಸುರಿದಿತ್ತು. ಈ ವಿಡಿಯೋ ನೋಡಿ ಒಬ್ಬ “ಇದು ಆಫ್ರಿಕಾದಲ್ಲಿ ಮಾತ್ರ ಆಗಲು ಸಾಧ್ಯ, ಇದು ಮಹಿಷಾಸುರ” ಎಂದು ಕಾಮೆಂಟ್ ಮಾಡಿದರೆ ಮತ್ತೊಬ್ಬ “ನನಗೆ ಈ ವಿಡಿಯೋ ನೋಡಿ ಕತ್ತು ನೋವಾಗುತ್ತಿದೆ” ಎಂದ. ಆದರೆ ಹಲವರು ಇದು ಆನುವಂಶಿಕ ರೂಪಾಂತರ (Genetic Mutation) ಆಗಿರಬಹುದು ಎಂದು ಊಹಿಸಿದ್ದರು.
Trishul?
From Uganda. pic.twitter.com/mPBfIuicsk
— Susanta Nanda IFS (@susantananda3) May 13, 2020
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ