ತಾಯಿಯನ್ನು ಪ್ರೀತಿಯಿಂದ ಮುದ್ದಾಡಿದ ಹುಲಿ ಮರಿ: ವಿಡಿಯೋ ವೈರಲ್​

ವಿಡಿಯೋವನ್ನು ಹಂಚಿಕೊಂಡಿದ್ದ  ಸುಬ್ಬಯ್ಯ ನಲ್ಲಮುತ್ತು ಹುಲಿಗಳ ಭವ್ಯ ಜಗತ್ತಿನಲ್ಲಿ ಕಳೆದ ಹದಿನಾಲ್ಕು ವರ್ಷಗಳ ಸುದೀರ್ಘ ಪ್ರಯಾಣದಲ್ಲಿ 2020 ರಲ್ಲಿ ಸಿಕ್ಕ ನನ್ನ ನೆಚ್ಚಿನ ಕ್ಷಣ ಇದಾಗಿದೆ, ಈ ಅದ್ಭುತ ಜೀವಿಗಳ ಅಪರೂಪದ ಕ್ಷಣದ ಚಿತ್ರೀಕರಣದ  ಅವಕಾಶಕ್ಕಾಗಿ ನಾನು ಅಪಾರ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದಿದ್ದಾರೆ.

ತಾಯಿಯನ್ನು ಪ್ರೀತಿಯಿಂದ ಮುದ್ದಾಡಿದ ಹುಲಿ ಮರಿ: ವಿಡಿಯೋ ವೈರಲ್​
ಹುಲಿ
Edited By:

Updated on: Jan 12, 2022 | 10:36 AM

ತಾಯಿ ಪ್ರೀತಿಯೇ ಹಾಗೆ. ನಿಷ್ಕಲ್ಮಶ, ಶುದ್ಧ ಪ್ರೀತಿ. ಅದು ಮನುಷ್ಯರಿಗಷ್ಟೇ ಅಲ್ಲ. ಪ್ರಾಣಿಗಳೂ ಕೂಡ ತಮ್ಮ ಮರಿಗಳನ್ನು ಅಷ್ಟೇ ಕಾಳಜಿಯಿಂದ ಮುದ್ದಿಸುತ್ತವೆ. ತಮ್ಮದೇ ಭಾಷೆಯಲ್ಲಿ ಸೂಚನೆಗಳನ್ನು ನೀಡುವ ಪ್ರಾಣಿಗಳು, ತಮ್ಮ ಮರಿಗಳನ್ನು ಕೂಡ ವಿಶೇಷವಾಗಿ ತಮ್ಮದೇ ರೀತಿಯಲ್ಲಿ ಮುದ್ದಿಸುತ್ತವೆ. ತಾಯಿಯ ಬಿಸಿ ಅಪ್ಪುಗೆಯಲ್ಲಿ ಇರುವ ಮರಿ ಪ್ರಪಂಚವನ್ನೇ ಮರೆತು ಮಲಗುವ ಪರಿ ಪದಗಳಿಗೆ ನಿಲುಕದ್ದು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಂತಹ ತಾಯಿ ಮತ್ತು ಮರಿಯ ಪ್ರೀತಿಯ ವಿಡಿಯೋ ವೈರಲ್​ ಆಗಿದೆ. ತಾಯಿ ಹುಲಿಯನ್ನು ಮರಿ ಪ್ರೀತಿಯಿಂದ ಮುದ್ದಾಡುವ ವಿಡಿಯೋ ವೈರಲ್​ ಆಗಿದೆ.

ಈ ಅಪರೂಪದ ವಿಡಿಯೋವನ್ನು ಪ್ರಶಸ್ತಿ ವಿಜೇತ ನಿರ್ದೇಶಕ, ನಿರ್ಮಾಪಕ ಹಾಗೂ ಸಿನಿಮಾಟೋಗ್ರಾಫರ್​ ಸುಬ್ಬಯ್ಯ ನಲ್ಲಮುತ್ತು ಚಿತ್ರೀಕರಿಸಿದ್ದರು. ಅವರು 2021ರ ಡಿಸೆಂಬರ್​ 31 ರಂದು ವಿಡಿಯೋ ಹಂಚಿಕೊಂಡಿದ್ದರು. ಅದಾದ ಬಳಿಕ ಈಗ ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಸುಧಾ ರಮೇನ್​ ಮತ್ತೊಮ್ಮೆ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.
ವಿಡಿಯೋದಲ್ಲಿ ತಾಯಿ ಹುಲಿಯನ್ನು ಮರಿ ಅಪ್ಪಿಕೊಂಡು ಮುಖದ ಎದುರು ಬಂದು ಮುದ್ದಿಸುತ್ತದೆ. ತಾಯಿ ಹುಲಿ ಕೂಡ ಮರಿಯೊಂದಿಗೆ ಆಟವಾಡುವುದನ್ನು ಕಾಣಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋ ನೆಟ್ಟಿಗರ ಮನಗೆದ್ದಿದೆ.

ವಿಡಿಯೋವನ್ನು ಹಂಚಿಕೊಂಡಿದ್ದ  ಸುಬ್ಬಯ್ಯ ನಲ್ಲಮುತ್ತು ಹುಲಿಗಳ ಭವ್ಯ ಜಗತ್ತಿನಲ್ಲಿ ಕಳೆದ ಹದಿನಾಲ್ಕು ವರ್ಷಗಳ ಸುದೀರ್ಘ ಪ್ರಯಾಣದಲ್ಲಿ 2020 ರಲ್ಲಿ ಸಿಕ್ಕ ನನ್ನ ನೆಚ್ಚಿನ ಕ್ಷಣ ಇದಾಗಿದೆ, ಈ ಅದ್ಭುತ ಜೀವಿಗಳ ಅಪರೂಪದ ಕ್ಷಣದ ಚಿತ್ರೀಕರಣದ  ಅವಕಾಶಕ್ಕಾಗಿ ನಾನು ಅಪಾರ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದಿದ್ದಾರೆ. ಇನ್ನು ವಿಡಿಯೋ ಹಂಚಿಕೊಂಡ ಸುಧಾ ಅವರು ಜಗತ್ತು ಪ್ರೀತಿಯಿಂದ ತುಂಬಿದೆ. ಅದು ವನ್ಯ ಜೀವಿಗಳಲ್ಲೂ ಅಷ್ಟೇ ಸ್ವಚ್ಛವಾಗಿದೆ ಎಂದು ಬರೆದುಕೊಂಡು ಸುಬ್ಬಯ್ಯ ಅವರನ್ನು ಟ್ಯಾಗ್​ ಮಾಡಿದ್ದಾರೆ.

ಇದನ್ನೂ ಓದಿ:

Viral Video: ತಂದೆಗೆ ಮೇಕಪ್​ ಮಾಡಿದ ಮಗಳು; ವಿಡಿಯೋ ನೋಡಿ ಸಖತ್​ ಖುಷಿಪಟ್ಟ ನೆಟ್ಟಿಗರು

Published On - 10:35 am, Wed, 12 January 22