Viral Video: ತಣ್ಣನೇಯ ಐಸ್ ಕ್ರೀಂ ತಿಂದ ಪುಟ್ಟ ಮಗುವಿನ ಕ್ಯೂಟ್​ ರಿಯಾಕ್ಷನ್ ವಿಡಿಯೊ ವೈರಲ್​!

ತಣ್ಣನೇಯ ಐಸ್​ ಕ್ರೀಂ ತಿನ್ನುತ್ತಾ ನಗುತ್ತಿರುವ ಮುದ್ದಾದ ಮಗುವಿನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ. ವಿಡಿಯೊ ನೋಡಿ..

Viral Video: ತಣ್ಣನೇಯ ಐಸ್ ಕ್ರೀಂ ತಿಂದ ಪುಟ್ಟ ಮಗುವಿನ ಕ್ಯೂಟ್​ ರಿಯಾಕ್ಷನ್ ವಿಡಿಯೊ ವೈರಲ್​!
ಐಸ್​ ಕ್ರೀಂ ತಿಂದು ಕ್ಯೂಟ್​ ಸ್ಮೈಲ್​ ಮಾಡಿದ ಪುಟ್ಟ ಮಗು
Edited By:

Updated on: Nov 04, 2021 | 11:52 AM

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೊಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ಮನಸ್ಸಿಗೆ ಹೆಚ್ಚು ಇಷ್ಟವಾಗುತ್ತವೆ. ಇನ್ನು ಕೆಲವು ವಿಡಿಯೊಗಳನ್ನು ಮತ್ತೆ ಮತ್ತೆ ನೋಡಬೇಕು ಎಂದು ಅನಿಸುತ್ತದೆ. ಅದರಲ್ಲಿಯೂ ಮುದ್ದಾದ ಪುಟ್ಟ ಮಕ್ಕಳ ತುಂಟಾಟ, ನಗು ಮನಸ್ಸಿಗೆ ಇಷ್ಟವಾಗುವುದಂತೂ ಸತ್ಯ. ಅಂಥಹುದೇ ಒಂದು ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ.

ವೈರಲ್ ಆದ ವಿಡಿಯೊದಲ್ಲಿ ಗಮನಿಸುವಂತೆ ಪುಟ್ಟ ಮಗು ಐಸ್ ಕ್ರೀಮ್ ಸವಿಯುತ್ತಿದೆ. ತಣ್ಣನೇಯ ಅನುಭವ ಆಗುತ್ತಿದ್ದಂತೆ ಮಗುವಿಗೆ ನಗು ತಡೆಯಲೇ ಆಗುತ್ತಿಲ್ಲ. ಮಗುವಿನ ಸಂತೋಷ ನೋಡಿ ಅಮ್ಮ ಕೂಡಾ ನಗುತ್ತಿದ್ದಾಳೆ. ಈ ವಿಡಿಯೊ ಇದೀಗ ಫುಲ್ ವೈರಲ್ ಆಗಿದ್ದೆ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಮಕ್ಕಳ ತುಂಟಾಟದ ಜೊತೆಗೆ ಸಂತೋಷ ಎಲ್ಲ ನೋವನ್ನು ಮರೆಸುತ್ತದೆ. ನಿಮ್ಮ ಮುಖದಲ್ಲಿಯೂ ಸಂತೋಷ ತರಿಸುತ್ತದೆ. ಅಂಥಹುದೇ ವಿಡಿಯೊ ಇದಾಗಿದ್ದು ಮಗುವಿನ ನಗು ಎಲ್ಲರ ಮುಖದಲ್ಲಿ ನಗು ತರಿಸಿದೆ. ಈ ಹೃದಯಸ್ಪರ್ಶಿ ವಿಡಿಯೊ ಎಲ್ಲರೂ ಮೆಚ್ಚುವಂತಿದೆ.

ವೈರಲ್ ಆಗುತ್ತಿರುವ ವಿಡಿಯೊವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. 27 ಸೆಕೆಂಡುಗಳಿರುವ ಈ ವಿಡಿಯೊ ಸಾವಿರಾರು ಲೈಕ್ಸ್​ಗಳನ್ನು ಗಳಿಸಿಕೊಂಡಿದೆ. ನಿಜವಾಗಿಯೂ ಮುದ್ದಾದ ವಿಡಿಯೊ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಮಗು ನೋಡಲು ಸುಂದರವಾಗಿದೆ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ಯುವತಿಯೊಂದಿಗೆ ಶಾಸ್ತ್ರೀಯ ಸಂಗೀತಕ್ಕೆ ಸ್ಟೆಪ್​ ಹಾಕಿದ ಶ್ವಾನ! ಕ್ಯೂಟ್​ ವಿಡಿಯೋ ನೀವೂ ನೋಡಿ

Viral Video: ಬಾಟಲಿಯಲ್ಲಿ ಹಾಲು ಕುಡಿಯುತ್ತಾ, ಮಣ್ಣಿನಲ್ಲಿ ಹೊರಳಾಡುತ್ತಿದೆ ಖಡ್ಗಮೃಗ; ಕ್ಯೂಟ್ ವಿಡಿಯೋ ವೈರಲ್