
ಹುಲಿಗಳು (tigers) ಬೇಟೆಯಲ್ಲಿ ಪಳಗಿರುವ ಪ್ರಾಣಿಗಳು. ಕಾಡಿನಲ್ಲಿ ಯಾವುದಾದರೂ ಬೇಟೆ ಸಿಗುತ್ತಾ ಅಂತ ಅತ್ತಿಂದ ಇತ್ತ ಕಣ್ಣಾಯಿಸುತ್ತಾ ಓಡಾಡುತ್ತಿರುತ್ತವೆ. ಹಸಿದ ಹುಲಿಗಳು ಯಾರೇ ಸಿಕ್ಕರೂ ಬಿಡುವುದೇ ಇಲ್ಲ. ನೀವೇನಾದ್ರೂ ಸಫಾರಿಗೆ ಹೋದಾಗ ಹುಲಿಯೂ ನಿಮ್ಮ ಮೇಲೆ ದಾಳಿ ಮಾಡಿದ್ರೆ ಹೇಗಿರುತ್ತೆ ಎಂದು ಒಮ್ಮೆ ಊಹಿಸಿ. ಹೌದು, ಸಫಾರಿ ವೇಳೆ ಹುಲಿಯೊಂದು ಪ್ರವಾಸಿಗ (tourist) ಮೇಲೆ ಹುಲಿ ದಾಳಿ ಮಾಡಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಈ ಭಯಾನಕ ದೃಶ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Srikanta Chinnu ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಸಫಾರಿ ವೇಳೆ ಪ್ರವಾಸಿಗನೊಬ್ಬ ಜಿಂಕೆ ಕಂಡೊಡನೆ ಮುದ್ದಿಸಲು ಹೋಗಿದ್ದಾನೆ. ನೋಡ ನೋಡುತ್ತಿದ್ದಂತೆ ಹುಲಿಯೂ ಈ ವ್ಯಕ್ತಿಯ ಮೇಲೆ ದಾಳಿ ಮಾಡಿದ್ದು ಕೂದಲೆಳೆ ಅಂತರದಲ್ಲಿ ಹುಲಿಗೆ ಆಹಾರವಾಗುವುದರಿಂದ ತಪ್ಪಿಸಿಕೊಂಡಿದ್ದಾನೆ. ಈ ದೃಶ್ಯವನ್ನು ಅಲ್ಲೇ ಇದ್ದ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಹುಲಿಯನ್ನು ಕಂಡೊಡನೆ ತಮ್ಮ ವಾಹನವನ್ನು ಮುಂದಕ್ಕೆ ಚಲಾಯಿಸಿದ್ದಾರೆ.
ಇದನ್ನೂ ಓದಿ:ನನ್ನ ಬೇಟೆಯಲ್ಲಿ ನಿನಗೂ ಪಾಲು ಇದೆ; ತನ್ನನ್ನು ಸಾಕಿದ ವ್ಯಕ್ತಿಯೊಂದಿಗೆ ತನ್ನ ಬೇಟೆಯನ್ನು ಹಂಚಿಕೊಂಡು ತಿಂದ ಸಿಂಹಿಣಿ
ಈ ವಿಡಿಯೋ ಮೂವತ್ತನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಹುಲಿಯಿಂದ ತಪ್ಪಿಸಿಕೊಂಡು ಆತ ಎಲ್ಲಿ ಓಡಿ ಹೋದ ಎಂದಿದ್ದಾರೆ. ಇನ್ನೊಬ್ಬರು, ಈ ವ್ಯಕ್ತಿಯ ವಿರುದ್ಧ ಅರಣ್ಯ ಇಲಾಖೆಯೂ ಕಠಿಣ ಕ್ರಮ ಕೈಗೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಹುಲಿಗಿಂತ ಭಯಾನಕ ಈ ಎಐ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ