
ಜೀವನದಲ್ಲಿ ಕೆಲಸ ಎಷ್ಟು ಮುಖ್ಯನೋ, ಆರೋಗ್ಯ (Health) ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಆರೋಗ್ಯ ಇದ್ರೆ ದುಡಿಮೆ ಎಂಬ ಮಾತು ಸತ್ಯ. ಆದರೆ ಈ ಕಾರ್ಪೊರೇಟ್ ಕಂಪನಿಗಳಲ್ಲಿ ಉದ್ಯೋಗಿಗಳನ್ನು ಜೀತದಾಳುಗಳಂತೆ ಇರಬೇಕು ಎಂಬುದು ಹಲವು ಉದ್ಯೋಗಿಗಳ ಮಾತು. ಅದರಲ್ಲೂ ಇಲ್ಲಿ ರಜೆ ಕೇಳಿದ್ರೆ ಮುಗಿಯಿತು, ಬಾಸ್ಗಳ ಮನೆಯ ಆಸ್ತಿ ಕೇಳಿದಂತೆ ಮಾಡ್ತಾರೆ. ಕೆಲಸ ಮಾಡಿ, ರಜೆ ಮಾತ್ರ ಕೇಳಬೇಡಿ. ಇದು ಕಂಪನಿಗಳ ನಿಯಮ. ಇದೀಗ ಇಲ್ಲೊಂದು ಉದ್ಯೋಗಿಯ ಪರಿಸ್ಥಿತಿ ಕೂಡ ಅದೇ, ಅನಾರೋಗ್ಯವಾಗಿದೆ ಎಂದು ರಜೆ ಕೇಳಿದ್ರೆ, ಈ ಬಾಸ್ ಹೀಗೆ ಹೇಳೋದ, ಈ ಕಥೆ ಕೇಳಿದ್ರೆ ನೀವು ಕೂಡ ಅಯ್ಯೋ ಇವರು ಯಾವ ಸೀಮೆ ಬಾಸ್ ಎಂದು ಹೇಳ್ತೀರಾ, ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಪೈಲ್ಸ್ ಆಗಿದೆ. ಇದಕ್ಕೆ ಮ್ಯಾನೇಜರ್ ಬಳಿ ರಜೆ ಕೇಳಿದ್ರೆ, ಮ್ಯಾನೇಜರ್ ಉತ್ತರ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ.
ಸಾರ್ ನನಗೆ ಪೈಲ್ಸ್ ಆಗಿದೆ. ಕೂರೋಕೂ ಆಗ್ತಿಲ್ಲ, ನಿಲ್ಲೋಕೂ ಆಗ್ತಿಲ್ಲ, ಇದು ಗಂಭೀರ ಸಮಸ್ಯೆ ಸರ್ ದಯವಿಟ್ಟು ನನಗೆ ಇವತ್ತು ಮೆಡಿಕಲ್ ಲೀವ್ ಕೊಡಿ ಎಂದು ವಾಟ್ಸಪ್ನಲ್ಲಿ ಮೆಸೇಜ್ ಹಾಕಿದ್ದಾರೆ. ಇದರ ಜತೆಗೆ ಮ್ಯಾನೇಜರ್‌ಗೆ ನಂಬಿಕೆ ಬರಲಿ ಎಂದು ಡಾಕ್ಟರ್ ಕೊಟ್ಟ ಪ್ರಿಸ್ಕ್ರಿಪ್ಷನ್ ಫೋಟೋ ಕೂಡ ಕಳಿಸಿದ್ದಾರೆ. ಆದರೆ ಮ್ಯಾನೇಜರ್ ಮಾಡಿ ಉಪದೇಶ ನೋಡಿದ್ರೆ, ರಜೆ ಬೇಡ ಆಫೀಸ್ ಹೋಗಿ ಕೆಲಸ ಮಾಡುವ ಎಂದೆನ್ನಿಸುವುದು ಖಂಡಿತ, ಅಷ್ಟು ಕೆಟ್ಟಾಗಿತ್ತು ಅವರ ಮಾತುಗಳು. ಉದ್ಯೋಗಿಯ ಸಂದೇಶ ನೋಡಿ ಮ್ಯಾನೇಜರ್ ಪ್ರತಿಕ್ರಿಯೆ ಹೀಗಿತ್ತು, “ನಿಂಗೆ ಶಿಸ್ತು ಕಲಿಸಿದ್ದು ಯಾರು? ರಜೆ ಕೇಳ್ತಿರೋ ಟೈಮ್ ನೋಡು. ಎರಡು ದಿನದ ಸಂಬಳ ಕಟ್” ಎಂದು ಬೆದರಿಕೆ ಹಾಕಿದ್ರು, ಅಲ್ಲ ಆರೋಗ್ಯ ಸಮಸ್ಯೆ ಹೇಳಿ-ಕೇಳಿ ಬರುತ್ತಾ? ಅನಾರೋಗ್ಯಕ್ಕೂ, ಸಂಬಳಕ್ಕೂ ಏನು ಸಂಬಂಧ? ಅದರೂ ಎಲ್ಲವನ್ನು ಸಹಿಸಿಕೊಂಡ ಇರಬೇಕು ಅಷ್ಟೇ. ಯಾಕೆಂದರೆ ಕೆಲಸ ಅನಿವಾರ್ಯ.
What should I do with this kind of Manager
byu/nanukannadiga inIndianWorkplace
ಅದ್ರೂ ಮ್ಯಾನೇಜರ್ ಬಳಿ ಬೇಡಿಕೊಂಡೆ, “ಸರ್ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ, ಆರೋಗ್ಯದಲ್ಲಿ ಸಮಸ್ಯೆಯಾಗಿರುದಕ್ಕೆ ನಾನು ರಜೆ ಕೇಳ್ತಿರೋದು, ಮೊದಲ್ಲೇ ತಿಳಿಸಲು ಆಗಿಲ್ಲ ಕ್ಷಮಿಸಿ” ಎಂದು ಹೇಳಿದೆ. ಪ್ರಪಂಚದಲ್ಲಿ ನಾನೊಬ್ಬನೇ ಆಗಿರಬೇಕು, ಸೌಖ್ಯ ಇಲ್ಲ ಅಂದ್ರೂ ಕ್ಷಮೆ ಕೇಳಿರುವುದು. ಆದ್ರೆ ಮ್ಯಾನೇಜರ್ ಎಷ್ಟು ಕ್ರೂರಿಯಾಗಿದ್ದ ಅಂದ್ರೆ, “ಹಾಗಾದ್ರೆ ನಿನ್ನ ಬ್ಯುಸಿನೆಸ್ ಯಾರು ಮಾಡ್ತಾರೆ? ನಿನ್ನ ನಂಬಿಕೆಕೊಂಡು ಸಾವಿರಾರೂ ಕಮಿಟ್‌ಮೆಂಟ್ ಇದೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ” ಎಂದು ಮನುಷ್ಯತ್ವ ಬಿಟ್ಟು ಮಾತನಾಡಿದ್ರು , ಅಲ್ಲ ಒಂದು ದಿನ ರಜೆ ತೆಗೆದುಕೊಂಡ್ರೆ ಏನ್ ಬ್ಯಾಂಕ್ ಮುಚ್ಚುತ್ತಾ? ಅಲ್ಲ ದೇಶ ಮುಳುಗುತ್ತಾ?, “ಸರ್ ನಾನು ಆಫೀಸ್ಗೆ ಬಂದ ಮೇಲೆ ಎಲ್ಲ ಕೆಲಸವನ್ನು ಮುಗಿಸುವೆ, ಈಗ ಒಂದು ರಜೆ ತೆಗೆದುಕೊಳ್ಳವೇ ಎಂದು ತಾಳ್ಮೆಯಿಂದ ಉತ್ತರಿಸುತ್ತಾರೆ.
ಇದನ್ನೂ ಓದಿ: ಪುಟ್ಟ ಮಗಳ ಕೈಯಲ್ಲಿ ರೋಗಿಯ ತಲೆಬುರುಡೆಯಲ್ಲಿ ರಂಧ್ರ ಮಾಡಿಸಿದ ಸರ್ಜನ್!
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮೊದಲು ಈ ಮ್ಯಾನೇಜರ್‌ಗೆ ಒಂದು ಇಂಗ್ಲಿಷ್ ಕ್ಲಾಸ್, ಆಮೇಲೆ ಒಂದು ಮಾನವೀಯತೆ ಕ್ಲಾಸ್‌ಗೆ ಸೇರಿಸಿ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಮೊದಲು ಆ ಮ್ಯಾನೇಜರ್‌ಗೆ ಮಾನುಷ್ಯನಂತೆ ವರ್ತನೆ ಮಾಡಲು ಹೇಳಿ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ