Viral News: ಪತಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸ್​ ಠಾಣೆ ಮೆಟ್ಟಿಲೇರಿದ ಪತ್ನಿ, ವಿಷಯ ಬೇರೆಯೇ ಇದೆ

|

Updated on: May 11, 2023 | 9:25 AM

ಪತಿ ಟ್ರಾಫಿಕ್ ನಿಯಮ(Traffic Rule) ಉಲ್ಲಂಘಿಸಿದ್ದಕ್ಕೆ ಪತ್ನಿಯೊಬ್ಬಳು ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದೆ. ಸಂಚಾರ ನಿಯಮ ಪಾಲಿಸದೇ ವ್ಯಕ್ತಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ

Viral News: ಪತಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸ್​ ಠಾಣೆ ಮೆಟ್ಟಿಲೇರಿದ ಪತ್ನಿ, ವಿಷಯ ಬೇರೆಯೇ ಇದೆ
ಟ್ರಾಫಿಕ್ ಸಿಗ್ನಲ್
Image Credit source: ABP Live
Follow us on

ಪತಿ ಟ್ರಾಫಿಕ್ ನಿಯಮ(Traffic Rule) ಉಲ್ಲಂಘಿಸಿದ್ದಕ್ಕೆ ಪತ್ನಿಯೊಬ್ಬಳು ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದೆ. ಸಂಚಾರ ನಿಯಮ ಪಾಲಿಸದೇ ವ್ಯಕ್ತಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಪ್ರಿಲ್ 25 ರಂದು ವ್ಯಕ್ತಿಯೊಬ್ಬರು ಹೆಲ್ಮೆಟ್​ ಧರಿಸದೆ ಇದ್ದ ಕಾರಣ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದರು. ಸ್ಕೂಟಿಯು ಆ ವ್ಯಕ್ತಿಯ ಪತ್ನಿಯ ಹೆಸರಿನಲ್ಲಿದ್ದ ಕಾರಣ ಅವರ ಮೊಬೈಲ್​ಗೆ ಟ್ರಾಫಿಕ್ ಪೊಲೀಸ್ ಚಲನ್ ಜತೆಗೆ ಫೋಟೊವನ್ನು ಕಳುಹಿಸಿದ್ದರು.

ಆದರೆ ಆ ಫೋಟೊದಲ್ಲಿ ಪತಿ ಜತೆ ಬೇರೊಬ್ಬ ಮಹಿಳೆ ಇರುವುದನ್ನು ನೋಡಿ ಪತ್ನಿ ಕೋಪಗೊಂಡಿದ್ದಾಳೆ, ಗಾರ್ಮೆಂಟ್ಸ್​ ಅಂಗಡಿಯಲ್ಲಿ ಕೆಲಸ ಮಾಡುವ 32 ವರ್ಷದ ವ್ಯಕ್ತಿ ತನಗೆ ಆ ಮಹಿಳೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದಾನೆ. ಆಕೆಗೆ ಲಿಫ್ಟ್​ ನೀಡಿರುವುದಾಗಿ ಹೇಳಿದ್ದಾನೆ, ಆದರೆ ಪತ್ನಿ ಈ ಮಾತು ನಂಬದ ಕಾರಣ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಮತ್ತಷ್ಟು ಓದಿ: ಕುಡಿದ ಮತ್ತಿನಲ್ಲಿ ಮಧ್ಯರಾತ್ರಿ ಗೂಳಿಸವಾರಿ; ಪೊಲೀಸರೆದುರು ತಪ್ಪೊಪ್ಪಿಕೊಂಡ ಯುವಕ

ಈ ವಿಷಯ ಪೊಲೀಸ್​ ಠಾಣೆಯವರೆಗೂ ಹೋಗಿದೆ, ಮೇ 5 ರಂದು ನೀಡಿರುವ ದೂರಿನಲ್ಲಿ ಪತಿ ತನ್ನ 3 ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾಳೆ, ಮಹಿಳೆಯ ಹೇಳಿಕೆಯ ಆಧಾರದ ಮೇಲೆ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅವರನ್ನು ಐಪಿಸಿ ಸೆಕ್ಷನ್ 321,341, 294 ಮತ್ತು ಸೆಕ್ಷನ್ 75 ರ ಅಡಿಯಲ್ಲಿ ಬಂಧಿಸಲಾಗಿದೆ.

ಸಂಚಾರ ನಿಯಮ ಪಾಲಿಸದಿದ್ದರೆ ಹೇಗೆಲ್ಲಾ ಸಮಸ್ಯೆಯಾಗಬಹುದು ಎಂದು ತಿಳಿಯಿತಲ್ಲಾ ಹಾಗಾಗಿ ಇನ್ನು ಮುಂದಾದರೂ ಪ್ರತಿಯೊಬ್ಬರೂ ಸಂಚಾರ ನಿಯಮವನ್ನು ತಪ್ಪಿಲ್ಲದೇ ಪಾಲಿಸಿ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 9:25 am, Thu, 11 May 23