Shocking Video: ಟ್ರ್ಯಾಕ್ ಮೇಲೆ ನಿಂತಿದ್ದ ಟ್ರಕ್​ಗೆ ರೈಲು ಡಿಕ್ಕಿ; ಆಘಾತಕಾರಿ ವಿಡಿಯೋವಿದು

ಟ್ರಕ್​ನಲ್ಲಿದ್ದ ಹೆಚ್ಚಿನ ಹೊರೆಯಿಂದಾಗಿ ರೈಲ್ವೆ  ಟ್ರ್ಯಾಕ್​ಅನ್ನು ಹಾದು ಹೋಗಲು ಸಾಧ್ಯವಾಗಲಿಲ್ಲ. ಈ ವೇಳೆ ವೇಗದಲ್ಲಿ ಬಂದ ರೈಲು ಡಿಕ್ಕಿ ಹೊಡೆದಿದೆ. ಈ ಆಘಾತಕಾರಿ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ.

Shocking Video: ಟ್ರ್ಯಾಕ್ ಮೇಲೆ ನಿಂತಿದ್ದ ಟ್ರಕ್​ಗೆ ರೈಲು ಡಿಕ್ಕಿ; ಆಘಾತಕಾರಿ ವಿಡಿಯೋವಿದು
ಟ್ರ್ಯಾಕ್ ಮೇಲೆ ನಿಂತಿದ್ದ ಟ್ರಕ್​ಗೆ ರೈಲು ಡಿಕ್ಕಿ
Updated By: shruti hegde

Updated on: Oct 22, 2021 | 11:22 AM

ಸೋಷಿಯಲ್ ಮೀಡಿಯಾದಲ್ಲಿ ಬೆಚ್ಚಿ ಬೀಳಿಸುವ ಕೆಲವು ವಿಡಿಯೋಗಳು ವೈರಲ್ ಆಗುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಗಮನಿಸುವಂತೆ ಹಳಿ ಮೇಲೆ ನಿಂತಿದ್ದ ಟ್ರಕ್​ಗೆ ರೈಲು ಡಿಕ್ಕಿ ಹೊಡೆದಿದೆ. ಕಳೆದ ಶುಕ್ರವಾರ ಘಟನೆ ಥಾಕರ್​ವಿಲ್ಲೆಯಲ್ಲಿ (Thackerville, Okla) ನಡೆದಿದೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ. ದೃಶ್ಯದ ವಿಡಿಯೋವನ್ನು ಮತ್ತು ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹೆಚ್ಚು ಲೋಡ್ ಆಗಿದ್ದ ಟ್ರಕ್, ಹಳಿ ದಾಟಿ ಮುಂದೆ ಸಾಗಲು ಸಾಧ್ಯವಾಗದೇ ಅಲ್ಲೇ ನಿಂತಿತು. ಆ ವೇಳೆ ವೇಗದಲ್ಲಿ ಬಂದ ರೈಲು ಡಿಕ್ಕಿ ಹೊಡೆದಿದೆ.

ಟ್ರಕ್​ನಲ್ಲಿದ್ದ ಹೆಚ್ಚಿನ ಹೊರೆಯಿಂದಾಗಿ  ಟ್ರ್ಯಾಕ್​ಅನ್ನು ಹಾದು ಹೋಗಲು ಸಾಧ್ಯವಾಗಲಿಲ್ಲ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಐದು ಜನರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಯಿತು. ಅಗ್ನಿಶಾಮಕ ದಳದ ಮಾಹಿತಿ ಪ್ರಕಾರ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂಬುದು ತಿಳಿದು ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಫುಲ್ ವೈರಲ್ ಆಗಿದೆ. ಸದ್ಯ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂಬುದು ಸಮಾಧಾನ ತಂದಿರುವ ವಿಚಾರ ಎಂದು ಓರ್ವರು ಹೇಳಿದ್ದಾರೆ. ರೈಲು ಬಂದು ಟ್ರಕ್​ಗೆ ಡಿಕ್ಕಿಯಾಗಿರುವ ಶಬ್ದ ಭಯಂಕರವಾಗಿದೆ ಎಂದು ಮತ್ತೋರ್ವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ಮೇಘಾಲಯ ಸಿಎಂ ಹಾಡಿದ ‘ಸಮ್ಮರ್ ಆಫ್ 69’ ಹಾಡಿಗೆ ನೆಟ್ಟಿಗರೆಲ್ಲಾ ಫಿದಾ

Viral Video: ಮೊಸರು ಮತ್ತು ಹುಣಸೆಹಣ್ಣಿನ ಚಟ್ನಿ ಬೆರೆಸಿ ‘ರಸಗುಲ್ಲಾ ಚಾಟ್’ ನೆಟ್ಟಿಗರ ರಿಯಾಕ್ಷನ್ ಹೇಗಿತ್ತು ನೋಡಿ

Published On - 11:21 am, Fri, 22 October 21