ಪ್ರವಾಸಿಗರನ್ನು ಹೊತ್ತ ದೈತ್ಯ ಬೋಟ್​ಗೆ ಸವಾಲೊಡ್ಡಿದ 400 ಡಾಲ್ಫಿನ್​ಗಳ ಬೃಹತ್​ ಗುಂಪು: ಜಟಾಪಟಿಯ ವಿಡಿಯೋ ಇಲ್ಲಿದೆ ನೋಡಿ

| Updated By: Skanda

Updated on: Jun 26, 2021 | 3:20 PM

ಅಂದಾಜು 400 ಡಾಲ್ಫಿನ್​ಗಳ ಹಿಂಡು ಅಲ್ಲಿ ಕಂಡುಬಂದಿದ್ದು, ಅವು ಇದ್ದಲ್ಲೇ ಇರದೆ ಪ್ರವಾಸಿಗರ ಬೋಟ್​ ಜತೆ ಸ್ಪರ್ಧೆಗೇ ಇಳಿದುಬಿಟ್ಟಿವೆ. ಬೋಟ್​ ಚಲಿಸುವ ದಿಕ್ಕಿನಲ್ಲೇ ಡಾಲ್ಫಿನ್​ಗಳ ಹಿಂಡು ಈಜಲಾರಂಭಿಸಿದ್ದು ಈ ದೃಶ್ಯ ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.

ಪ್ರವಾಸಿಗರನ್ನು ಹೊತ್ತ ದೈತ್ಯ ಬೋಟ್​ಗೆ ಸವಾಲೊಡ್ಡಿದ 400 ಡಾಲ್ಫಿನ್​ಗಳ ಬೃಹತ್​ ಗುಂಪು: ಜಟಾಪಟಿಯ ವಿಡಿಯೋ ಇಲ್ಲಿದೆ ನೋಡಿ
ವೈರಲ್​ ವಿಡಿಯೋದ ತುಣುಕು
Follow us on

ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದಷ್ಟು ವಿಡಿಯೋಗಳು ಸಮಯ ಕಳೆಯುವುದಕ್ಕೆ, ಮನಸ್ಸನ್ನು ಹಗುರಾಗಿಸುವುದಕ್ಕೆ ಸಹಾಯ ಮಾಡುತ್ತವೆ. ಕೊರೊನಾ ಸಮಯದಲ್ಲಂತೂ ಸದಾ ಚಿಂತೆ, ಭಯ ಆವರಿಸಿಕೊಂಡೇ ಇರುವುದರಿಂದ ಮನಸ್ಸನ್ನು ಹಗುರಗೊಳಿಸುವ ವಿಚಾರಗಳ ಅಗತ್ಯ ಹೆಚ್ಚಿದೆ. ಅದರಲ್ಲೂ ಪ್ರಕೃತಿ, ಪ್ರಾಣಿ, ಪಕ್ಷಿ, ಚಿಕ್ಕಮಕ್ಕಳ ವಿಡಿಯೋಗಳು ಮನಸ್ಸಿಗೆ ಹಿತವೆನಿಸುತ್ತವೆ. ವರ್ಕ್​ ಫ್ರಂ ಹೋಮ್​ ಸಮಯದಲ್ಲೂ ಆಗಾಗ ಇಂತಹ ವಿಡಿಯೋಗಳತ್ತ ಕಣ್ಣು ಹಾಯಿಸುತ್ತಿದ್ದರೆ ಒತ್ತಡವೂ ಶಮನವಾಗುತ್ತದೆ. ಇತ್ತೀಚೆಗೆ ಉದ್ಯಮಿ ಹರ್ಶ್​ ಗೊಯೆಂಕಾ ಹಂಚಿಕೊಂಡ ಒಂದು ವಿಡಿಯೋ ಭಾರೀ ವೈರಲ್ ಆಗಿದೆ. ಸಮುದ್ರದಲ್ಲಿ ಜನರನ್ನು ತುಂಬಿಸಿಕೊಂಡ ಪ್ರವಾಸಿ ಬೋಟ್​ಗಳ ಜತೆ ಡಾಲ್ಫಿನ್​ ಗುಂಪು ಸ್ಪರ್ಧೆಗಿಳಿದ ದೃಶ್ಯ ಅನೇಕರ ಕಣ್ಮನ ಸೆಳೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಅಧಿಕ ಹಿಂಬಾಲಕರನ್ನು ಹೊಂದಿರುವ ಉದ್ಯಮಿ ಹರ್ಶ್​ ಗೊಯೆಂಕಾ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಕ್ಯಾಲಿಫೋರ್ನಿಯಾದ ನ್ಯೂ ಫೋರ್ಟ್​ ಬೀಚ್ ಸಮೀಪದಲ್ಲಿ ಸೆರೆ ಹಿಡಿದ ದೃಶ್ಯ ಇದಾಗಿದೆ ಎನ್ನಲಾಗಿದ್ದು, ಅಲ್ಲಿಗೆ ಹೋದ ಪ್ರವಾಸಿಗರಿಗೆ ತಿಮಿಂಗಲಗಳನ್ನು ತೋರಿಸುವ ಪ್ರವಾಸಿ ಸಂಸ್ಥೆ ನ್ಯೂಪೋರ್ಟ್​ ವೇಲ್ಸ್ ಈ ವಿಡಿಯೋವನ್ನು ಮೊದಲು ಪೋಸ್ಟ್ ಮಾಡಿದೆ.

ಸುಮಾರು 31 ಸೆಕೆಂಡ್​ಗಳ ಅವಧಿಯ ಈ ವಿಡಿಯೋದಲ್ಲಿ ಸಮುದ್ರದಲ್ಲಿನ ತಿಮಿಂಗಿಲಗಳನ್ನು ನೋಡಲೆಂದು ಬೋಟ್​ನಲ್ಲಿ ತೆರಳಿದ ಪ್ರವಾಸಿಗರಿಗೆ ಡಾಲ್ಫಿನ್​ಗಳ ಗುಂಪೇ ದರ್ಶನ ನೀಡಿದೆ. ಅಂದಾಜು 400 ಡಾಲ್ಫಿನ್​ಗಳ ಹಿಂಡು ಅಲ್ಲಿ ಕಂಡುಬಂದಿದ್ದು, ಅವು ಇದ್ದಲ್ಲೇ ಇರದೆ ಪ್ರವಾಸಿಗರ ಬೋಟ್​ ಜತೆ ಸ್ಪರ್ಧೆಗೇ ಇಳಿದುಬಿಟ್ಟಿವೆ. ಬೋಟ್​ ಚಲಿಸುವ ದಿಕ್ಕಿನಲ್ಲೇ ಡಾಲ್ಫಿನ್​ಗಳ ಹಿಂಡು ಈಜಲಾರಂಭಿಸಿದ್ದು ಈ ದೃಶ್ಯ ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.

ಈ ವಿಡಿಯೋ ಬಗ್ಗೆ ಹೇಳಿಕೊಂಡಿರುವ ಹರ್ಶ್​ ಗೊಯೆಂಕಾ ಇದು ನಿಜವಾದ ರೇಸ್. ನಾನು ಇದರಲ್ಲಿ ಭಾಗವಹಿಸೋಕೆ ನಿಜವಾಗಿಯೂ ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ನಿಜಕ್ಕೂ ಇದೊಂದು ಮೈ ನವಿರೇಳಿಸುವ ದೃಶ್ಯ. ಸಾಗರದಲ್ಲೇ ಹುಟ್ಟಿ ಬೆಳೆದ ಸಹಜ ಈಜುಪಟುಗಳು ಮಾನವ ನಿರ್ಮಿತ ಬೋಟ್​ಗೆ ಸವಾಲೊಡ್ಡುವ ವಿಡಿಯೋವನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು. ಎಷ್ಟೇ ಒತ್ತಡಗಳಿದ್ದರೂ ಈ ವಿಡಿಯೋ ನೋಡಿದರೆ ಮನಸ್ಸು ಹಗುರಾಗುತ್ತದೆ ಎಂದೆಲ್ಲಾ ಹೇಳಿದ್ದಾರೆ.

ಇದನ್ನೂ ಓದಿ:
30 ವರ್ಷ ದಾಟಿದ ಮಹಿಳಾವಾದಿಗೆ 25-28 ವರ್ಷದ, ಹೂಸು ಬಿಡದ, ತೇಗದ, ಅಡುಗೆ ಬಲ್ಲ ವರ ಬೇಕಾಗಿದ್ದಾನೆ: ವೈರಲ್​ ಆಯ್ತು ಜಾಹೀರಾತು 

ಗುಜರಾತ್​ನ ನರ್ಮದಾ ನದಿಯಲ್ಲಿ ಮೊಸಳೆಗಳಿಗೆ ಆಹಾರವಾದ ವ್ಯಕ್ತಿಯ ಶವ: ವಿಡಿಯೋ ವೈರಲ್