ಅಮೆರಿಕದ ಸೆಲೆಬ್ರಿಟಿ ಬಾಣಸಿಗ ನಿಕ್ ಡಿಜಿಯೊವಾನಿ (Nick DiGiovanni) ಮತ್ತು ಜಪಾನ್‌ನ ಲಿನ್ ಡೇವಿಸ್ (Lynn Davis) ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕಳೆದ ಬಾರಿ 44.24 ಕೆಜಿ ತೂಕದ ವಿಶ್ವದ ಅತಿದೊಡ್ಡ ಕೇಕ್ ಪಾಪ್ ಅನ್ನು ತಯಾರಿಸಿದ್ದ ನಿಕ್, ಈ ಬಾರಿ ವಿಶ್ವದ ಅತಿ ದೊಡ್ಡ ಚಿಕನ್ ನಗೆಟ್ ಅನ್ನು ತಯಾರಿಸಿ ಮತ್ತೊಂದು ದಾಖಲೆ ಬರೆದಿದ್ದಾರೆ. ನಗೆಟ್ ಅನ್ನು ಯಾವ ರೀತಿ ಮಾಡಲಾಗಿದೆ ಮತ್ತು ಅದನ್ನು ತೀರ್ಪುಗಾರರು ಪರಿಶೀಲಿಸಿ ಗಿನ್ನಿಸ್ ದಾಖಲೆ ಘೋಷಿಸಿದ ವಿಡಿಯೋವನ್ನು (Viral Video) ಶನಿವಾರ ನಿಕ್ ಡಿಜಿಯೊವಾನಿ ಅವರು ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಹಂಚಿಕೊಂಡ 24 ಗಂಟೆ ಒಳಗಾಗಿ 7.6 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, “ಈ ಇಬ್ಬರು ಅತಿದೊಡ್ಡ ಆಹಾರಕ್ಕಾಗಿ ಎಲ್ಲಾ ದಾಖಲೆಗಳನ್ನು ಪಡೆದುಕೊಳ್ಳಲಿದ್ದಾರೆ! ನಿಕ್ ಮತ್ತು ಲಿಂಜಾ ಅವರ ಇಂಥ ಎಲ್ಲಾ ವೀಡಿಯೊಗಳನ್ನು ನಾನು ಇಷ್ಟಪಡುತ್ತೇನೆ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: Diet Tips for Groom: ಮದುವೆಗೂ ಮುನ್ನ ನಿಮ್ಮ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿಕೊಳ್ಳಿ, ಸುಲಭವಾಗಿ ಫಿಟ್ನೆಸ್ ಸಾಧಿಸಿ..!
ಚಿಕನ್ ನಗೆಟ್ ತಯಾರಿಸುವುದು ಹೇಗೆ?
ನಿಕ್ ಹಂಚಿಕೊಂಡ ವಿಡಿಯೋದಲ್ಲಿ, ಮೊದಲು 40 ಬ್ರೆಡ್ಗಳನ್ನು ಪಾತ್ರೆಯೊಂದಕ್ಕೆ ಹಾಕಿ ಅರ್ಧ ಗ್ಯಾಲನ್ ಹಾಲು ಹಾಕಿ ಚೆನ್ನಾಗಿ ಹಿಸುಕುತ್ತಾರೆ. ನಂತರ 40 ಮೊಟ್ಟೆಗಳನ್ನು ಒಡೆದು ಬೌಲ್ಗೆ ಹಾಕಿ ಚೆನ್ನಾಗಿ ಕಲಸುತ್ತಾರೆ. ನಂತರ 18 ಕೆಜಿ ರುಬ್ಬಿದ ಚಿಕನ್ಗೆ ಮಸಾಲೆಗಳನ್ನು ಹಾಕಿ ಕಲಸುತ್ತಾರೆ. ಮಸಾಲೆ ಚಿಕನ್ ಮತ್ತು ಕಲಸಿಟ್ಟ ಮೊಟ್ಟೆಗಳನ್ನು ಬ್ರೆಡ್ ಪೇಸ್ಟ್ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡುತ್ತಾರೆ.
ಇದನ್ನೂ ಓದಿ: Monsoon Foods: ಮಳೆಗಾಲದಲ್ಲಿ ನೀವು ತಿನ್ನುವ ಆಹಾರಗಳು ಹೇಗಿರಬೇಕು? ಇಲ್ಲಿವೆ ಸಲಹೆಗಳು
ಮಿಕ್ಸ್ ಮಾಡಿದ ನಂತರ ಇಬ್ಬರು ಬಾಣಸಿಗರು ಚಿಕನ್ ಗಟ್ಟಿ ಮಿಶ್ರಣವನ್ನು ವಿಶೇಷವಾಗಿ ತಯಾರಿಸಿದ ಕಾಂಟ್ರಾಪ್ಶನ್‌ನಲ್ಲಿ ಸೇರಿಸಿ ಬ್ರಷ್ ಸಹಾಯದಿಂದ ಹೊಡೆದ ಮೊಟ್ಟೆಗಳನ್ನು ಲೇಪಿಸಿದರು. ಅಂತಿಮವಾಗಿ, ಮಿಶ್ರಣವನ್ನು ಆಧುನಿಕ ಒಲೆಯಲ್ಲಿ ಬೇಯಿಸಿದರು. ಅರ್ಧ ಬೇಯುತ್ತಿದ್ದಂತೆ ಒಲೆಯಿಂದ ಹೊರತೆಗೆದು ಮೊಟ್ಟೆಯನ್ನು ಲೇಪಿಸಿ ಮತ್ತೊಮ್ಮೆ ಬೇಯಿಸಿದ್ದಾರೆ. ಕೊನೆಯಲ್ಲಿ ಗಿನ್ನೆಸ್ ವಿಶ್ವ ದಾಖಲೆಗಳ ತೀರ್ಪುಗಾರರಾದ ಕ್ಲೇರ್ ಸ್ಟೀಫನ್ಸ್ ಅವರು 20.960ಕೆಜಿಯ ಚಿಕನ್ ನಗೆಟ್ ಅನ್ನು ತೂಕ ಮಾಡಿ ಗಿನ್ನಿಸ್ ದಾಖಲೆ ಘೋಷಣೆ ಮಾಡಿದರು ಮತ್ತು ಕೋಳಿ ಗಟ್ಟಿಯ ರುಚಿಯನ್ನು ಸವಿದರು.
ವಿಡಿಯೋ ವೀಕ್ಷಿಸಿ:
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:21 am, Mon, 13 June 22