Viral: ‘ನನ್ನದು ಭಾರತದಲ್ಲಿ ತಯಾರಿಸಿದ ಐಫೋನ್ 15’ ಹೆಮ್ಮೆಪಟ್ಟ ನಟ ಮಾಧವನ್

R Madhavan: ಜೈ ಹೋ, ಜೈ ಭಾರತ, ಜೈ ಮೋದೀಜಿ... ಹರ್ಷೋನ್ಮಾದದಲ್ಲಿ ಕೆಲ ನೆಟ್ಟಿಗರು ಮುಳುಗಿದ್ದಾರೆ. ನಿಮ್ಮ ಹಳೇ ಫೋನನ್ನು ಒಎಲ್​ಎಕ್ಸ್​ಗೆ ಹಾಕಿ ಮತ್ತದರ ಲಿಂಕ್​ ಇಲ್ಲಿ ಹಾಕಿ ಎಂದು ಇನ್ನೂ ಕೆಲವರು. ಅದು ಭಾರತದಲ್ಲಿ ಅಸೆಂಬಲ್ ಮಾಡಿದ್ದಷ್ಟೇ ಗುರು, ಬಹಳ ಹೆಮ್ಮೆ ಪಡಬೇಡ ಎಂದು ಒಂದಿಷ್ಟು ಜನ ವಾಸ್ತವವನ್ನು ಅರುಹಿದ್ದಾರೆ. ಮಾಧವನ್ ನಂತರ ಈ ಐಫೋನ್​ ಕೊಳ್ಳುವವರು ನೀವೇ ಮೊದಲಾ?

Viral: ನನ್ನದು ಭಾರತದಲ್ಲಿ ತಯಾರಿಸಿದ ಐಫೋನ್ 15 ಹೆಮ್ಮೆಪಟ್ಟ ನಟ ಮಾಧವನ್
ನಟ ಮಾಧವನ್ ತನ್ನ ಹೊಸ ಐಫೋನ್​ 15ರೊಂದಿಗೆ

Updated on: Sep 22, 2023 | 5:53 PM

Iphone : ‘ಸಿಕ್ಕಿತು, ಭಾರತದಲ್ಲಿ ತಯಾರಿಸಿದ (made in India) ಐಫೋನ್ 15ರ ಮಾಲೀಕನಾಗಲು ಪುಳಕ ಹಾಗೂ ಹೆಮ್ಮೆಯಾಗುತ್ತಿದೆ! ಎಂದು ಖ್ಯಾತ ಚಿತ್ರನಟ ಆರ್. ಮಾಧವನ್ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಭಾರತದ ಧ್ವಜದ ಇಮೋಜಿಗಳು ಹಾಗೂ ಅವರ ಗುಲಾಬಿ ಬಣ್ಣದ ಹೊಸ ಐಫೋನ್‌ನ ಫೋಟೋ ಕೂಡ ಇದೆ. ಇಂದಿನಿಂದ ಐಫೋನ್ 15 ಮಾರಾಟಕ್ಕೆ ಲಭ್ಯವಿದೆಯಂತೆ. ಈಗಾಗಲೇ ಎಲ್ಲೆಡೆ Apple ಅಂಗಡಿಗಳಿಗೆ ಜನ ಮುಗಿಬಿದ್ದಿರಲು ಸಾಕು. ಈ ಸಂದರ್ಭದಲ್ಲಿ ನಟ ಮಾಧವನ್ ಈ ಪೋಸ್ಟ್​ನ ಮೂಲಕ ದೇಶಭಕ್ತಿ ಮೆರೆದು ಜನರಲ್ಲಿ ಇನ್ನೂ ಹೆಚ್ಚಿನ ಉತ್ಸಾಹ ತುಂಬಿದ್ದಾರೆ.

ಇದನ್ನೂ ಓದಿ : Viral: ತನ್ನ ಅಚ್ಚುಮೆಚ್ಚಿನ ‘ಜೀವಂತ ತಲೆದಿಂಬಿನೊಂದಿಗೆ’ ತಪ್ಪಿಸಿಕೊಂಡಿದ್ದ ಎರಡು ವರ್ಷದ ಹೆಣ್ಣುಮಗು

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅನೇಕರು ಅವರನ್ನು ಅಭಿನಂದಿಸಿ ಆನಂದಭಾಷ್ಪ ಸುರಿಸಿದ್ದಾರೆ. ನಿರೀಕ್ಷೆಯಂತೆ, ‘ಜೈ ಹೋ’,  ‘ಜೈ ಮೋದೀಜಿ’, ‘ಮೋದಿ ಇದ್ದರೆ ಎಲ್ಲವು ಸಾಧ್ಯ’ ಎಂಬಿತ್ಯಾದಿ ಹರ್ಷೋದ್ಗಾರಗಳು ಕಂಡುಬರುತ್ತಿವೆ. ಆದರೆ ತಕರಾರು ತೆಗೆದವರೂ ಇದ್ದಾರೆ. ಕೆಲವರು ‘ಐಫೋನ್ 15 ಪ್ರೋ ತೆಗೆದುಕೊಳ್ಳಬಹುದಿತ್ತಲ್ಲ’ ಎಂದು ಬಿಟ್ಟಿ ಸಲಹೆ ನೀಡಿದ್ದಾರೆ. ‘ಅಲ್ಲ, ಭಾರತದಲ್ಲೇ ತಯಾರಾಗಿದ್ದರೂ ಅಮೆರಿಕೆಯಲ್ಲಿ ಸಿಗುವುದಕ್ಕಿಂತ ಇಲ್ಲಿ ಬೆಲೆ ಹೆಚ್ಚಿದೆಯಲ್ಲ, ಅದು ಹೇಗೆ?’ ಎಂಬ ಜಿಜ್ಞಾಸೆಗೆ ಕೆಲವರು ಬಿದ್ದಿದ್ದಾರೆ.

ಮಾಧವನ್​ ಖರೀದಿಸಿದ ಹೊಸ ಐಫೋನ್​ 15

MADE IN INDIA ಎಂದು ದಪ್ಪಕ್ಷರಗಳಲ್ಲಿ ಘೋಷಿಸಿದ ಮಾಧವನ್ ಅವರನ್ನು, ‘ಅದು ಭಾರತದಲ್ಲಿ ಜೋಡಿಸಲಾಗಿದ್ದುದು (assembled), ತಯಾರಿಸಿದ್ದಲ್ಲ (made), ಮುಂದೊಂದು ದಿನ ಅದೂ ಆಗಬಹುದು’ ಎಂದು ಒಬ್ಬರು ತಿದ್ದಿದ್ದರೆ, ಇನ್ನೊಬ್ಬರು, ‘ಜೋಡಿಸಿದ್ದಷ್ಟೇ ಗುರು… ಅತಿಯಾದ ಹೆಮ್ಮೆ ಬೇಡ,’ ಎಂದು ಎಚ್ಚರಿಸಿದ್ದಾರೆ. ‘ಮ್ಯಾಡಿ ಪಿಂಕ್ ಫೋನ್ ಬಳಸುವುದು… ಎಷ್ಟೊಂದು ಕ್ಯೂಟ್… ಇದು ತೀರಾ ಅನ್ಯಾಯ…’ ಎಂದು ಒಂದಷ್ಟು ನೆಟ್ಟಿಗರು ಚಿಕ್ಕಮಕ್ಕಳಂತೆ ಹಲುಬಿ ಹಂಬಲಿಸಿದ್ದಾರೆ.

ನಿಮ್ಮದೆಲ್ಲಿ? Made in India ಕಾರಣಕ್ಕಾದರೂ ಕಷ್ಟಪಟ್ಟು ಹಣ ಜೋಡಿಸಿ ಐಫೋನ್ ತೆಗೆದುಕೊಳ್ಳುತ್ತೀರಾ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:52 pm, Fri, 22 September 23