AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Brain Teaser: ಗಣಿತದ ಈ ಒಗಟನ್ನು ಒಂದು ನಿಮಿಷದಲ್ಲಿ ಬಿಡಿಸಬಹುದೆ?

Puzzle: ಭ್ರಮಾತ್ಮಕ ಚಿತ್ರಗಳು, ಮೆದುಳನ್ನು ಚುರುಕುಗೊಳಿಸುವ ಒಗಟುಗಳೆಂದರೆ ನಿಮಗೆ ಎಲ್ಲಿಲ್ಲದ ಆಸಕ್ತಿ. ಹಾಗಾಗಿಯೇ ಈ ವಾರಾಂತ್ಯಕ್ಕೆ ಹೊಸದೊಂದು ಗಣಿತದ ಒಗಟನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಲಾಗುತ್ತಿದೆ. ನೆಟ್ಟಿಗರು ಗೊಂದಲಕ್ಕೆ ಬಿದ್ದರೂ ಸರಿಯಾದ ಉತ್ತರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಿಮಗೆ ಕೊಡುವ ಕಾಲಾವಕಾಶ ಒಂದು ನಿಮಿಷ. ಸಮಸ್ಯೆಗೆ ಉತ್ತರ ಕಂಡುಕೊಳ್ಳಿ.

Viral Brain Teaser: ಗಣಿತದ ಈ ಒಗಟನ್ನು ಒಂದು ನಿಮಿಷದಲ್ಲಿ ಬಿಡಿಸಬಹುದೆ?
ಒಂದು ನಿಮಿಷದಲ್ಲಿ ಉತ್ತರವನ್ನು ಕಂಡುಹಿಡಿಯಿರಿ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Sep 23, 2023 | 11:09 AM

Share

Math Fun: ವಾರಾಂತ್ಯ ಅತ್ಯಂತ ನಿಧಾನವಾಗಿ ಆರಂಭವಾಗಿರಬೇಕು. ಈಗಷ್ಟೇ ನಿದ್ರೆಯಿಂದೆದ್ದು ಕಾಫೀ, ಚಹಾ ಹೀರುತ್ತಿರಬಹುದು. ಹಾಗಿದ್ದರೆ ಇದೊಂದು ಬ್ರೇನ್​ ಟೀಸರ್​ ನೋಡಬಹುದಾ? ನಿನ್ನೆಯಷ್ಟೇ ಭ್ರಮಾತ್ಮಕ ಚಿತ್ರವನ್ನು ನೋಡಿದಿರಿ. ಈವತ್ತು ನಿಮ್ಮ ಮೆದುಳಿಗೆ ಗುದ್ದು ಕೊಡುವ ಸವಾಲನ್ನು ತರಲಾಗಿದೆ. ನೆಟ್ಟಿಗರನೇಕರನ್ನು ಈ ಬ್ರೇನ್​ ಟೀಸರ್​ ಗೊಂದಲಕ್ಕೆ ಕೆಡವಿದೆ. @mathequiz ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ಮೋಜಿನ ಗಣಿತವನ್ನು ಹಂಚಿಕೊಳ್ಳಲಾಗಿದೆ. ಬಹುಶಃ ನೀವು ಇದನ್ನು ಪರಿಹರಿಸುತ್ತೀರಿ.  2 + 3 = 13, 3 + 4 = 25, 4 + 5 = 41 ಆಗಿದ್ದರೆ, 5 + 6 = ಇದರ ಮೌಲ್ಯ ಎಷ್ಟು? ಇಲ್ಲಿ ನಾಲ್ಕು ಆಯ್ಕೆಗಳಿವೆ, ಅವುಗಳಲ್ಲಿ ಒಂದು ಸರಿಯಾದ ಉತ್ತರ ಕಂಡುಹಿಡಿಯಿರಿ. ಆಯ್ಕೆಗಳು- 60, 56, 61 ಮತ್ತು 65.

ಇದನ್ನೂ ಓದಿ: Viral Video: ವೆಡ್ಡಿಂಗ್ ಕೇಕ್​ನಲ್ಲಿ ಪುಟ್ಟನಾಯಿ; ವರನನ್ನು ಅಚ್ಚರಿಗೊಳಿಸಿದ ವಧು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಪೋಸ್ಟ್ ಅನ್ನು ಸೆ. 21 ರಂದು ಹಂಚಿಕೊಳ್ಳಲಾಗಿದೆ. ಅನೇಕರು ಈ ಗಣಿತದ ಒಗಟಿನೆಡೆ ಆಸಕ್ತರಾಗಿದ್ದಾರೆ. 61  ಎಂದು ಸರಿಯಾದ ಉತ್ತರ ನೀಡಿದ್ದಾರೆ ಕೆಲವರು. ನೀವೂ ಪ್ರಯತ್ನಿಸಿ, ಸರಿಯಾದ ಉತ್ತರ ನಿಮಗೆ ಸಿಗಬಹುದೇ ಪ್ರಯತ್ನಿಸಿ. ನಿಮಗೆ ಕೊಟ್ಟಿರುವ ಸಮಯ ಒಂದು ನಿಮಿಷ.

ಇಲ್ಲಿದೆ ಆ ಮೋಜಿನ ಗಣಿತ

ಭ್ರಮಾತ್ಮಕ ಚಿತ್ರಗಳು, ಮೋಜಿನ ಗಣಿತ, ಬ್ರೇನ್​ ಟೀಸರ್​ ಇಂಥವು ಮೆದುಳನ್ನು ಚುರುಕುಗೊಳಿಸಿ ಏಕಾಗ್ರತೆಯನ್ನು ಹೆಚ್ಚಿಸುತ್ತವೆ. ಸ್ವಲ್ಪ ಹೊತ್ತಾದರೂ ನಿತ್ಯದ ಜಂಜಡದಿಂದ ಹೊರತಂದು ನಿಮ್ಮಷ್ಟಕ್ಕೆ ನೀವು ತೊಡಗಿಕೊಳ್ಳಲು ಪ್ರೇರೇಪಿಸುತ್ತವೆ.

ಇದನ್ನೂ ಓದಿ : Viral: ‘ನನ್ನದು ಭಾರತದಲ್ಲಿ ತಯಾರಿಸಿದ ಐಫೋನ್ 15’; ಹೆಮ್ಮೆಪಟ್ಟ ನಟ ಮಾಧವನ್

ಎಳೆವೆಯಲ್ಲಿಯೇ ಮಕ್ಕಳಿಗೆ ಇಂಥ ಸಂಗತಿಗಳ ಕಡೆಗೆ ಆಸಕ್ತಿ ಬೆಳೆಸುವುದು ತುಂಬಾ ಮುಖ್ಯ. ಯಾವುದಕ್ಕೋ ಹಠ ಮಾಡುತ್ತಿರುವಾಗ ಭ್ರಮಾತ್ಮಕ ಚಿತ್ರ, ಬ್ರೇನ್​ ಟೀಸರ್​ ತೋರಿಸಿ ಅವರ ಗಮನವನ್ನು ಸೆಳೆಯಬಹುದು.

ಮತ್ತಷ್ಟು ವೈರಲ್ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

Published On - 11:08 am, Sat, 23 September 23

Follow Us
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ