
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿ, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಆಗೊಂದು ಈಗೊಂದು ಪೋಸ್ಟ್ಗಳನ್ನು ಮಾಡುತ್ತಿರುತ್ತಾರೆ. ಇದೀಗ ವಿಭಿನ್ನವಾದ ವಿಡಿಯೋವೊಂದನ್ನು ಟ್ವಿಟರ್ನಲ್ಲಿ ಹಂಚಿಕೊಂಡ ಅವರು ಇಂಥ ಪ್ರತಿಭೆ ಭಾರತದಲ್ಲಿ ಮಾತ್ರ ಇದೆ ಎನ್ನುವ ಅರ್ಥದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಟ್ವಿಟರ್ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಸ್ಕೂಟರ್ (Scooter) ಸಂಪೂರ್ಣ ಲೈಟಿಂಗ್ಸ್ನೊಂದಿಗೆ ಮಿಂಚುತ್ತಿದೆ. ಸಾಲದ್ದಕ್ಕೆ ಮೀಟರ್ ಮೇಲೊಂದು ಟಿವಿ, ಏನು ಹೇಳಬಹುದು ಈ ವ್ಯಕ್ತಿಯ ಸೃಜನಶೀಲತೆಗೆ, ಏನು ಹೇಳಬಹುದು ಈ ವ್ಯಕ್ತಿಯ ಪ್ರತಿಭೆಗೆ?
ಇದನ್ನೂ ಓದಿ: Viral Video: ಸುರಿದ ಧಾರಾಕಾರ ಮಳೆಗೆ ರಸ್ತೆಗೆ ಬಂದ ಮೀನುಗಳು! ಎಲ್ಲಿ ಇದು ಗೊತ್ತಾ?
ಆನಂದ್ ಮಹೀಂದ್ರಾ ಅವರು ವಿಡಿಯೋ ಹಂಚಿಕೊಳ್ಳುವಾಗ, ”ಜೀವನವು ನೀವು ಬಯಸಿದಷ್ಟು ವರ್ಣರಂಜಿತ ಮತ್ತು ಮನರಂಜನೆಯಾಗಿರಬಹುದು” ಎಂದು ಶೀರ್ಷಿಕೆ ಬರೆದು ಭಾರತದಲ್ಲಿ ಮಾತ್ರ (#OnlyInIndia) ಎಂದು ಹ್ಯಾಶ್ಟ್ಯಾಗ್ ಮಾಡಿದ್ದಾರೆ. ವಿಡಿಯೋದಲ್ಲಿ ಗಮನಿಸಿದಂತೆ, ಕಸ್ಟಮೈಸ್ ಮಾಡಿದ ಸ್ಕೂಟರ್ ಅನ್ನು ಪೆಟ್ರೋಲ್ ಪಂಪ್ನಲ್ಲಿ ನಿಲ್ಲಿಸಲಾಗಿದೆ, ಅದರ ಮುಂಭಾಗದಲ್ಲಿರುವ ಮೀಟರ್ನ ಮೇಲ್ಭಾಗದಲ್ಲಿ ಸಣ್ಣ ಟಿವಿ ಅಳವಡಿಸಲಾಗಿದ್ದು, ನಟಿಯೊಬ್ಬಳು ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು. ಅಲ್ಲದೆ ಸ್ಕೂಟರ್ ಸಂಪೂರ್ಣ ಲೈಟಿಂಗ್ಸ್ನಿಂದ ಕಂಗೊಳಿಸುತ್ತಿದೆ.
ಇದನ್ನೂ ಓದಿ: Viral: ಸಾಕಿದ ನಾಯಿ ಕಳೆದುಕೊಂಡಾಕೆಯ ಸಂಕಟಕ್ಕೆ ಪೆಟ್ ಫುಡ್ ಕಂಪನಿಯ ಸ್ಪಂದನೆ; ಸಹೃದಯರ ಸಾಂತ್ವನ
ಸದ್ಯ ಸ್ಕೂಟರ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, 298k ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು 15k ಲೈಕ್ಸ್ಗಳನ್ನು ಪಡೆದುಕೊಂಡಿದೆ. ವಿಡಿಯೋ ವೀಕ್ಷಣೆ ಮಾಡಿದ ನೆಟ್ಟಿಗರೊಬ್ಬರು, “ಇದು ಸೃಜನಶೀಲತೆ, ಈ ಪ್ರತಿಭೆಯನ್ನು ಪೋಷಿಸಬೇಕು” ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು “ಬೈಕ್ ಥಿಯೇಟರ್” ಎಂದು ಕಾಮೆಂಟ್ ಮಾಡಿದ್ದಾರೆ.
ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:14 pm, Sun, 19 June 22