Viral Video: ಯಾವ ಭದ್ರತೆಗೂ ಕಮ್ಮಿ ಇಲ್ಲ ಈ ಆನೆ ಮರಿಯ ಸೆಕ್ಯೂರಿಟಿ! Z+ ಅಲ್ಲ Z+++ ಸೆಕ್ಯೂರಿಟಿ ಇದು

ದೊಡ್ಡ ಆನೆಮಗಳು ಮರಿಯಾನೆಯನ್ನು ಯಾವುದೇ ಭದ್ರತೆಗೂ ಕಡಿಮೆ ಇಲ್ಲದಂತೆ ರಕ್ಷಣೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿ.

Viral Video: ಯಾವ ಭದ್ರತೆಗೂ ಕಮ್ಮಿ ಇಲ್ಲ ಈ ಆನೆ ಮರಿಯ ಸೆಕ್ಯೂರಿಟಿ! Z+ ಅಲ್ಲ Z+++ ಸೆಕ್ಯೂರಿಟಿ ಇದು
ವೈರಲ್ ಆದ ಆನೆಗಳು
Updated By: Rakesh Nayak Manchi

Updated on: Jun 23, 2022 | 12:01 PM

ಆನೆಗಳ (Elephants) ಗಾಂಭೀರ್ಯ ನಡೆಯ ಮಧ್ಯೆ ಒಂದು ಸಣ್ಣ ಮರಿಯಾನೆ, ಯಾವುದೇ ಭದ್ರತೆಗೆ ಕಡಿಮೆ ಇಲ್ಲ ಈ ಮರಿಯಾನೆಯ ಸೆಕ್ಯೂರಿಟಿ, ರಸ್ತೆಯಿಂದ ಕಾಡಿಗೆ ಹೋಗುವಾಗ ಆನೆ ಮರಿಗೆ ಗಜಪಡೆಯ ಫುಲ್ ಟೈಟ್ ಸೆಕ್ಯೂರಿಟಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ ಗಜಪಡೆಯ Z+++ ಸೆಕ್ಯೂರಿಟಿ!

ಮೂರ್ನಾಲ್ಕು ಆನೆಗಳಿರುವ ಗುಂಪೊಂದು ರಸ್ತೆಯುದ್ದಕ್ಕೂ ಗಾಂಭೀರ್ಯ ನಡೆಯ ಹೆಜ್ಜೆಯನ್ನು ಇಟ್ಟಿದೆ. ಈ ಗುಂಪನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ಗುಂಪಿನ ನಡುವೆ ಸಣ್ಣ ಆನೆಮರಿಯೊಂದನ್ನು ಕಾಣಬಹುದು. ದೊಡ್ಡ ಆನೆಗಳು ರಸ್ತೆಯಲ್ಲಿ ಒಂದು ಸ್ವಲ್ಪವೂ ಜಾಗ ಇಲ್ಲದಂತೆ ನಡೆದುಕೊಂಡು ಹೋಗುತ್ತಿದ್ದಾಗ ಚೋಟುದ್ದ ಕಾಲುಗಳ ಮರಿಯಾನೆ ಮುದ್ದುಮುದ್ದಾಗಿ ಓಡಾಡುವುದನ್ನು ಕಾಣಬಹುದು. ಹೀಗೆ ತನ್ನ ಬಳಗದಲ್ಲಿ ಜನಿಸಿದ ಮರಿಯಾನೆಗೆ ಯಾವುದೇ ಆಪತ್ತು ಬರದಂತೆ ನೋಡಿಕೊಳ್ಳುತ್ತಾ ಕಾಡಿನ ಕಡೆಗೆ ಕರೆದುಕೊಂಡ ಹೋಗಿವೆ. ಈ ದೃಶ್ಯಾವಳಿಯನ್ನು ಸತ್ಯಮಂಗಲಂ ಕೊಯಮತ್ತೂರು ರಸ್ತೆಯಲ್ಲಿ ಸೆರೆಹಿಡಿಯಲಾಗಿದೆ.

ಇದನ್ನೂ ಓದಿViral Video: ಗೋವಾ ಬೀಚ್​ನಲ್ಲಿ ಕಾರ್​ ರೈಡಿಂಗ್ ಮಾಡಿ ತಗಲಾಕೊಂಡ ಪ್ರವಾಸಿಗ! ಮುಂದಾಗಿದ್ದೇ ಸಂಕಷ್ಟದ ಮೇಲೊಂದು ಸಂಕಷ್ಟ!

ಸದ್ಯ ಆನೆ ಮರಿಗೆ ದೊಡ್ಡ ಆನೆಗಳ ಭದ್ರತೆ ನೀಡಿರುವ ವಿಡಿಯೋವನ್ನು ಐಎಫ್​ಎಸ್​​ ಅಧಿಕಾರಿ ಸುಸಂತ ನಂದಾ ಅವರು ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, “ಮುದ್ದಾದ ನವಜಾತ ಶಿಶುವಿಗೆ ಆನೆ ಹಿಂಡಿಗಿಂತ ಉತ್ತಮವಾದ ಭದ್ರತೆಯನ್ನು ಭೂಮಿಯ ಮೇಲೆ ಯಾರು ಕೂಡ ನೀಡಲು ಸಾಧ್ಯವಿಲ್ಲ. ಇದು Z+++ ಆಗಿದೆಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ವೈರಲ್ ಪಡೆದು 174k ವೀಕ್ಷಣೆಗಳು ಪಡೆದಿವೆ ಮತ್ತು 8ಸಾವಿರ ಲೈಕ್ಸ್​ಗಳನ್ನು ಪಡೆದುಕೊಂಡಿದೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರೊಬ್ಬರು, “ಬ್ಯೂಟಿಫುಲ್.. ನೋಡಲು ತುಂಬಾ ಚೆನ್ನಾಗಿದೆ.. ಶೇರ್ ಮಾಡಿದ್ದಕ್ಕೆ ಧನ್ಯವಾದಗಳು ಸರ್..” ಎಂದಿದ್ದಾರೆ.

ಮತ್ತೊಬ್ಬ ನೆಟ್ಟಿಗ ಮರಿಯಾನೆ ಕಾಳಜಿ ಬಗ್ಗೆ ಮಾತನಾಡಿದ್ದು, “ಸರ್ ಮರಿಯಾನೆಗೆ ಯಾವಾಗಲಾದರೂ ಗಾಯವಾಗಿದೆಯೇ? ಏಕೆಂದರೆ ಅವುಗಳು ತುಂಬಾ ದೊಡ್ಡದಾಗಿವೆ, ಮರಿ ತುಂಬಾ ಚಿಕ್ಕದಾಗಿದೆಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುಸಂತ ನಂದಾ, “ತಾಯಿ ಮತ್ತು ಉಳಿದ ಆನೆಗಳು ಮರಿಯ ಬಗ್ಗೆ ಹೆಚ್ಚು ಸಂವೇದನಾಶೀಲವಾಗಿರುವುದರಿಂದ ಹಾಗೇನು ಆಗುವುದಿಲ್ಲಎಂದಿದ್ದಾರೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:01 pm, Thu, 23 June 22