Marriage : ಇತ್ತೀಚೆಗೆ ಭಾರತದಲ್ಲಿ ಸಾಕಷ್ಟು ಮದುವೆಗಳು ಏನೇನೋ ಅಸಂಬದ್ಧ ಕಾರಣಗಳಿಂದಾಗಿ ಮುರಿದು ಬೀಳುತ್ತಿವೆ ಎಂದು ಎಲ್ಲೋ ಓದಿದ್ದೇನೆ. ಈ ವಿಷಯವಾಗಿ ನೀವು ಏನು ಹೇಳುತ್ತೀರಿ? ಕೇಳಿದ್ದು, ನೋಡಿದ್ದನ್ನು ಹಂಚಿಕೊಳ್ಳಬಹುದೆ? ಎಂದು ರೆಡ್ಡಿಟ್ನ ಅನುರಾಗ ಸಿಂಘ್ ನೆಟ್ಟಿಗರಿಗೆ ಕೇಳಿದ್ದಾರೆ. ಅನೇಕರು ತಾವು ಕಂಡ, ಕೇಳಿದ ಘಟನೆ, ಕಾರಣಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ನಿರೀಕ್ಷೆಗೆ ತಕ್ಕಂತೆ ಔತಣಕೂಟ ಏರ್ಪಡಿಸದ ಕಾರಣ ಮದುವೆ ರದ್ದಾದ ಪ್ರಕರಣಗಳು ಇವೆ ಎಂದಿದ್ದಾರೆ ಕೆಲವರು. ಹುಡುಗಿ ತನಗಿಂತ ಹೆಚ್ಚು ಸಂಬಳ ( High Salary) ಪಡೆಯುತ್ತಾಳೆಂಬ ಕಾರಣಕ್ಕೆ ಮದುವೆಗಳು ಮುರಿದುಬಿದ್ದ ಉದಾಹರಣಗಳಿವೆ ಎಂದಿದ್ದಾರೆ ಇನ್ನೂ ಒಂದಿಷ್ಟು ಜನ.
ಇದನ್ನೂ ಓದಿ : Viral: ಗ್ರೀಸ್; 100 ಕೇಜಿ ಗಾಂಜಾ ತಿಂದ ಕುರಿಹಿಂಡು; ನಗಬೇಕೋ ಅಳಬೇಕೋ ಎಂದ ಕುರುಬ
‘ಒಂದು ಮದುವೆಯಲ್ಲಿ ಊಟದಲ್ಲಿ ಮಟನ್ ಬಡಿಸಿಲ್ಲವೆಂದು ವರನ ಸ್ನೇಹಿತರು ಗಲಾಟೆ ಆರಂಭಿದ್ದರು. ಮಟನ್ ಬಡಿಸುವವರೆಗೂ ಮದುವೆ ನಡೆಯಲು ಬಿಡುವುದಿಲ್ಲ ಎಂದು ಹೇಳುತ್ತಿದ್ದರು. ಇವರೊಂದಿಗೆ ಇವನ ಹೆತ್ತವರೂ ಸೇರಿಕೊಂಡರು. ಎಲ್ಲರೂ ಸೇರಿ ವಧುವಿನ ಪೋಷಕರನ್ನು ಗದರಿಸಿದರು. ಅವರು ವರನ ಪೋಷಕರ ಪಾದ ಮುಟ್ಟಿ ಕ್ಷಮೆ ಯಾಚಿಸಿದರು. ಇದು ವಧುವಿಗೆ ಗೊತ್ತಾಯಿತು. ವರನ ಮತ್ತು ಅವನ ಮನೆಯವರ ಅಹಂಕಾರದ ಪರಮಾವಧಿ ಕಂಡು ಈ ಮದುವೆಯೇ ಬೇಡವೆಂದಳು. ಆಗ ವರ ತನ್ನ ಕುಟುಂಬದವರೊಂದಿಗೆ ಆಕೆಯ ಬಳಿ ಕ್ಷಮೆ ಕೇಳಿದರೂ ಆಕೆ ಜಗ್ಗದೇ ಅವರೆಲ್ಲರನ್ನೂ ಹೊರಹಾಕಿದಳು.’ ಎಂದಿದ್ದಾರೆ ಒಬ್ಬರು.
What’s the most absurd reason you’ve heard of someone cancelling their marriage?
byu/AnuragSlNGH inindia
‘ನನ್ನ ಸ್ನೇಹಿತನ ಮದುವೆ ನಿಶ್ಚಯಗೊಂಡಿತ್ತು, ಆದರೆ ತಯಾರಿ ಇನ್ನೂ ಆರಂಭವಾಗಿರಲಿಲ್ಲ. ಅವರು ಫೈವ್ ಸ್ಟಾರ್ ರೆಸ್ಟೋರೆಂಟ್ಗೆ ಡೇಟ್ಗೆ ಹೋದರು. ಊಟದ ನಂತರ ಉಳಿದ ಆಹಾರವನ್ನು ವ್ಯರ್ಥಗೊಳಿಸುವುದು ಬೇಡವೆಂದು ಅವನು ಪಾರ್ಸೆಲ್ ಮಾಡಲು ಮಾಣಿಗೆ ಹೇಳಿದೆ. ಆಗ ಅವನ ಹುಡುಗಿ ಇದು ಚೀಪ್ ಬಿಹೇವಿಯರ್ ಎಂದು ಹೇಳಿ ಮನೆ ತಲುಪುವತನಕವೂ ಅವನನ್ನು ರೇಗಿಸಿದಳು. ಹುಡುಗಿಯ ಮನೆಯವರು ಆಕೆಗೆ ತಿಳಿವಳಿಕೆ ಹೇಳಿ ಒಪ್ಪಿಸಲು ನೋಡಿದರು. ಆದರೆ ಭವಿಷ್ಯದಲ್ಲಿ ಇಂಥ ಸಂಗತಿಗಳಿಂದ ತೊಂದರೆ ಉಂಟಾಗುತ್ತದೆ ಎಂದು ಆಕೆ ಹೇಳಿದಳು.’ ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ‘ಅಪ್ಪನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದರೂ ಕುಸಿದಿಲ್ಲ’ ಪ್ರೊ ರಿದ್ಧಿ ರಾಥೋರ್
‘ಹುಡುಗಿಗೆ ಪ್ರೊಮೋಷನ್ ಸಿಕ್ಕಿತು, ಸಂಬಳವೂ ಜಾಸ್ತಿಯಾಯಿತು ಎಂಬ ವಿಷಯ ತಿಳಿದ ನನ್ನ ಸ್ನೇಹಿತನ ಸ್ನೇಹಿತನೊಬ್ಬ ಮದುವೆ ಮಂಟಪದಿಂದ ಎದ್ದು ಹೋದ. ಮದುವೆಯಾದ ಮೇಲೆ ಹುಡುಗಿ ಕೆಲಸ ಮಾಡುವುದು ಅವಮಾನಕರ. ಆಕಸ್ಮಾತ್ ಮಾಡಿದರೂ ಅವನಿಗಿಂತ ಕಡಿಮೆ ಸಂಬಳ ಹುದ್ದೆ ಇರಬೇಕಿತ್ತು ಎನ್ನುವುದು ಅವನ ಮತ್ತು ಕುಟುಂಬದವರ ವಾದವಾಗಿತ್ತು.’ ಎಂದು ಮತ್ತೊಬ್ಬರು ಹೇಳಿದ್ದಾರೆ.
ನಿನ್ನೆ ಹಂಚಿಕೊಂಡ ಈ ಪೋಸ್ಟಿನಡಿ ಸುಮಾರು 700 ಜನರು ತಾವು ಕಂಡ, ಕೇಳಿದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ನೀವೇನಂತೀರಿ ಈ ವಿಷಯವಾಗಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:10 pm, Thu, 28 September 23