
ಫ್ಲಿಪ್ ಕಾರ್ಟ್ನಿಂದ ಇಯರ್ ಫೋನ್ ಆರ್ಡರ್ ಮಾಡಿದ್ದ ನಟ ಪರಾಸ್ ಕಲ್ನವತ್ ಅವರು ಆರ್ಡರ್ ಸ್ವೀಕರಿಸಿದ ಬಳಿಕ ಖಾಲಿ ಬಾಕ್ಸ್ ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಈ ಕುರಿತಂತೆ ಅವರು ಟ್ವಿಟರ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಟಿವಿ ಧಾರವಾಹಿ ಅನುಪಮಾದಲ್ಲಿ ಸಮರ್ ಪಾತ್ರದಲ್ಲಿ ಜನಪ್ರಿಯತೆ ಗಳಿಸಿಕೊಂಡಿರುವ ನಟ ಫ್ಲಿಪ್ ಕಾರ್ಟ್ನಿಂದ ಇಯರ್ ಫೋನ್ ಆರ್ಡರ್ ಮಾಡಿದ್ದರು. ಆದರೆ ಬಾಕ್ಸ್ನಲ್ಲಿ ಏನೂ ಇರಲಿಲ್ಲ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಇಲ್ಲಿ ನಾನು ಫ್ಲಿಪ್ ಕಾರ್ಟ್ನಿಂದ ಏನೂ ಸ್ವೀಕರಿಸಿಲ್ಲ. ಸಮಯ ಕಳೆಯುತ್ತಿದ್ದಂತೆಯೇ ಈ ಥರಹದ ಪ್ರಕರಣಗಳು ಕಂಡು ಬರುತ್ತಿವೆ. ಇದೇ ರೀತಿ ಮುಂದುವೆರೆದರೆ ಶೀಘ್ರದಲ್ಲಿಯೇ ಫ್ಲಿಪ್ ಕಾರ್ಟ್ನಿಂದ ಜನರು ವಸ್ತುಗಳ ಖರೀದಿಯನ್ನು ನಿಲ್ಲಿಸುತ್ತಾರೆ ಎಂದು ಪರಾಸ್ ಟ್ವೀಟ್ ಮಾಡಿದ್ದಾರೆ. ಅವರಿಗೆ ತಲುಪಿದ ಖಾಲಿ ಬಾಕ್ಸ್ನ ಚಿತ್ರಗಳನ್ನೂ ಸಹ ಅವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅವರ ಟ್ವೀಟ್ಗೆ ಫ್ಲಿಪ್ ಕಾರ್ಟ್ ಪ್ರತಿಕ್ರಿಯಿಸಿ, ಕ್ಷಮಿಸಿ, ನಿಮ್ಮ ಕಾಳಜಿಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ನಿಮಗೆ ಸಹಾಯ ಮಾಡುತ್ತೇವೆ. ದಯವಿಟ್ಟು ನಿಮ್ಮ ಆರ್ಡರ್ ಐಡಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಇದರಿಂದ ನಿಮಗೆ ಮತ್ತಷ್ಟು ಸಹಾಯ ಮಾಡುತ್ತೇವೆ ಎಂದು ಹೇಳಿದೆ.
ಅನೇಕರು ಈ ರೀತಿಯ ಅನುಭವಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ತಮಾಷೆ ಮಾಡಿದ್ದಾರೆ. ಈ ವಾರದಲ್ಲಿ ಇಂಥಹುದೇ ಮತ್ತೊಂದು ಪ್ರಕರಣ ಬಯಲಾಗಿತ್ತು. ರಿಯಾಯಿತಿಯಲ್ಲಿ ಆಪಲ್ ಐಫೋನ್ 12 ಅನ್ನು ಆರ್ಡರ್ ಮಾಡಿದ್ದ ಗ್ರಾಹಕರೋರ್ವರಿಗೆ ನಿರ್ಮಾ ಸೋಪ್ ಬಂದಿತ್ತು. ಐಫೋನ್ ಇರುತ್ತದೆ ಎಂದು ಖಷಿಯಿಂದ ಬಾಕ್ಸ್ ಓಪನ್ ಮಾಡಿದ ಗ್ರಾಹಕರು ಅದರಲ್ಲಿ ನಿರ್ಮಾ ಸೋಪ್ ನೋಡಿ ಶಾಕ್ ಆಗಿದ್ದರು. ಈ ರೀತಿ ನಡೆದಿದೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ:
Viral News: ಬರೋಬ್ಬರಿ 2,700 ವರ್ಷಗಳ ಹಿಂದಿನ ಐಷಾರಾಮಿ ಟಾಯ್ಲೆಟ್ ಪತ್ತೆ; ಏನಿದರ ವಿಶೇಷತೆ?