ವಯಸ್ಸು ಕೇವಲ ಸಂಖ್ಯೆಯಷ್ಟೆ. ಶಕ್ತಿ ಇದ್ದರೆ ಯಾವ ವಯಸ್ಸಿನವರೇ ಆಗಲಿ ನೃತ್ಯ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿ ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ವಯಸ್ಸಾದ ಮಹಿಳೆಯರಿಬ್ಬರು ರಸ್ತೆಯಲ್ಲಿ ಕುಣಿಯುತ್ತಿರುವ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊವಿಡ್ ಸಮಯದ ಭೀತಿಯಿಂದ ಹೊರ ಬರಲು ಜನರು ಈ ತರಹದ ವಿಡಿಯೋವನ್ನು ಹೆಚ್ಚು ನೋಡುತ್ತಿದ್ದಾರೆ. ಮನಸ್ಸು ಖುಷಿಯಿಂದರಲು ಜೊತೆಗೆ ಭಯದಿಂದ ಹೊರಬರಲು ಸಾಮಾಜಿಕ ಜಾಲತಾಣದಲ್ಲಿ ಇಂತಹ ವಿಡಿಯೋಗಳು ಹೆಚ್ಚು ಹರಿದಾಡುತ್ತಿದೆ.
1971ರಲ್ಲಿ ಜನಪ್ರಿಯತೆ ಗಳಿಸಿಕೊಂಡ ಆಶಾ ಬೋಂಸ್ಲೆ ಅವರ ‘ಪಿಯಾ ತು ಅಬ್ ತೋ ಆಜಾ’ ಹಾಡಿಗೆ ಮಹಿಳೆಯರು ನೃತ್ಯ ಮಾಡಿದ್ದಾರೆ. ವಿಡಿಯೋದಲ್ಲಿ ನೋಡಿದಂತೆ ಮಹಿಳೆಯರು ಕುಣಿಯುತ್ತಿದ್ದಾಗ ಮತ್ತೋರ್ವರು ಕೂಡಾ ಅವರಿಗೆ ಸಾಥ್ ನೀಡುತ್ತಾರೆ. ಸೀರೆಯನ್ನುಟ್ಟು ಸಕತ್ಆಗಿ ಡಾನ್ಸ್ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಹಿಳೆಯರು ಮನಸ್ಸಿನಿಂದ ಇಷ್ಟಪಟ್ಟು ಕುಣಿಯುತ್ತಿರುವಂತೆ ವಿಡಿಯೋ ತೋರುತ್ತದೆ. ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾ ಎದುರು ಬದುರು ನಿಂತು ಬೀದಿಯಲ್ಲಿ ಕುಣಿಯುತ್ತಾರೆ. ವಿಡಿಯೋದ ಮೂಲ ಎಲ್ಲಿಯದು? ಎಂಬುದಕ್ಕೆ ಉತ್ತರ ಸಿಕ್ಕಿಲ್ಲ. ಆದರೆ ಮಹಿಳೆಯರ ನೃತ್ಯಕ್ಕೆ ನೆಟ್ಟಿಗರ ಪ್ರಶಂಸೆ ದೊರೆತಿದೆ. ವಿಶೇಷವೆಂದರೆ ಕಳೆದ ವರ್ಷವೂ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದೀಗ ಲಾಕ್ಡೌನ್ ಸಮಯದಲ್ಲಿ ಮತ್ತೆ ಈ ವಿಡಿಯೋ ಟ್ರೆಂಡ್ ಸೃಷ್ಟಿಸಿದೆ.
ಈ ಹಿಂದೆ ವೃದ್ಧೆಯೋರ್ವಳು ‘ಹಸ್ತಾ ಹುವಾ ನೂರಾನಿ ಚೆಹ್ರಾ’ಗೆ ನೃತ್ಯ ಮಾಡಿರುವ ವಿಡಿಯೋ ಫುಲ್ ವೈರಲ್ ಆಗಿತ್ತು. ತನ್ನ ವಯಸ್ಸನ್ನು ಧಿಕ್ಕರಿಸಿ ವೃದ್ಧೆ ನೃತ್ಯ ಮಾಡುತ್ತಿರುವುದು ನೆಟ್ಟಿಗರಿಗೆ ಆಶ್ಚರ್ಯವನ್ನುಂಟು ಮಾಡಿತ್ತು.
ಇದನ್ನೂ ಓದಿ: ವಯಸ್ಸು ಕೇವಲ ಸಂಖ್ಯೆಯಷ್ಟೆ! ಮನದುಂಬಿ ತಾಳಕ್ಕೆ ತಕ್ಕಂತೆ ಸ್ಟೆಪ್ ಹಾಕಿದ ದಂಪತಿಗೆ ನೆಟ್ಟಿಗರಿಂದ ಪ್ರಶಂಸೆ