ಪಬ್​ನ​ ಶೌಚಾಲಯವೊಂದರಲ್ಲಿ ವ್ಲಾಡಿಮಿರ್ ಪುಟಿನ್ ಫೋಟೋ; ಈ ವಿಚಿತ್ರ ಪ್ರತಿಭಟನೆಗೂ ಇದೆ ಇತಿಹಾಸ!

| Updated By: shivaprasad.hs

Updated on: Mar 09, 2022 | 10:55 AM

Vladimir Putin: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ವಿನೂತನ ರೀತಿಯಲ್ಲಿ ಬ್ರಿಟನ್​ನ ಪಬ್ ಒಂದು ಪ್ರತಿಭಟಿಸುತ್ತಿದೆ. ಈ ಕುರಿತು ಅದು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ವೈರಲ್ ಆಗಿದೆ.

ಪಬ್​ನ​ ಶೌಚಾಲಯವೊಂದರಲ್ಲಿ ವ್ಲಾಡಿಮಿರ್ ಪುಟಿನ್ ಫೋಟೋ; ಈ ವಿಚಿತ್ರ ಪ್ರತಿಭಟನೆಗೂ ಇದೆ ಇತಿಹಾಸ!
ವ್ಲಾಡಿಮಿರ್ ಪುಟಿನ್
Follow us on

ರಷ್ಯಾ ಸೇನೆಗೆ ಉಕ್ರೇನ್ ಪಡೆಗಳು ತೀವ್ರ ಪ್ರತಿರೋಧ (Russia Ukraine War) ಒಡ್ಡುತ್ತಿವೆ. ಉಕ್ರೇನ್ ಪರ ಜಾಗತಿಕ ಮಟ್ಟದಲ್ಲಿ ಯಾವ ರಾಷ್ಟ್ರವೂ ನೇರವಾಗಿ ಜತೆಯಾಗಿಲ್ಲ. ಬದಲಾಗಿ ಅಗತ್ಯ ವಸ್ತುಗಳ ಸಹಾಯದ ಮೂಲಕ ಉಕ್ರೇನ್ ಪರ ನಿಂತಿವೆ. ಬಹಳಷ್ಟು ದೇಶಗಳು ರಷ್ಯಾಕ್ಕೆ ಯುದ್ಧ ನಿಲ್ಲಿಸುವಂತೆ ಒತ್ತಡ ಹೇರುವ ನಿಟ್ಟಿನಲ್ಲಿ ನಿರ್ಬಂಧಗಳನ್ನು ವಿಧಿಸಿವೆ. ಈ ಸಾಲಿಗೆ ದಿನದಿಂದ ದಿನಕ್ಕೆ ಹಲವು ಸಂಸ್ಥೆಗಳು ಸೇರುತ್ತಿವೆ. ತಮ್ಮ ಕಂಪನಿಗಳ ಸೇವೆಗಳು ರಷ್ಯಾದಲ್ಲಿ ಲಭ್ಯವಾಗುವುದಿಲ್ಲ ಎಂದಿರುವ ಅವುಗಳು, ಈ ಮೂಲಕ ಮತ್ತಷ್ಟು ಒತ್ತಡ ಹೇರುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಆದರೆ ರಷ್ಯಾ ಈವರೆಗೆ ಇಂತಹ ವಿಚಾರಗಳಿಗೆ ತಲೆ ಕೆಡಿಸಿಕೊಂಡಿಲ್ಲ. ಬದಲಾಗಿ ತನ್ನ ನಿರ್ಧಾರಕ್ಕೆ ಸಮರ್ಥನೆ ನೀಡುತ್ತಾ, ಯುದ್ಧ ಮುಂದುವರೆಸಿದೆ. ಈ ನಡುವೆ ಜಗತ್ತಿನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ವಿರುದ್ಧ ವಿನೂತನ ಪ್ರತಿಭಟನೆಗಳು ನಡೆಯುತ್ತಿವೆ. ಯುದ್ಧ ಪ್ರಾರಂಭವಾದ ದಿನದಿಂದ ಪುಟಿನ್ ವಿರುದ್ಧ ಪ್ರತಿಭಟನೆಗಳು ಜೋರಾಗಿದ್ದವು. ಆದರೆ ಇದೀಗ ಹಲವು ವಿಧಾನಗಳ ಮೂಲಕ ಪುಟಿನ್​ ಮೇಲಿನ ಅಸಮಾಧಾನವನ್ನು, ಆಕ್ರೋಶವನ್ನು ಹೊರಹಾಕಲಾಗುತ್ತಿದೆ.

ಬ್ರಿಟನ್​ ಪಬ್​ನ ಶೌಚಾಲಯದಲ್ಲಿ ಪುಟಿನ್ ಫೋಟೋ:

ಪುಟಿನ್ ವಿರುದ್ಧ ಬ್ರಿಟನ್​ನ ಪಬ್ ಒಂದು ವಿಚಿತ್ರವಾಗಿ ಪ್ರತಿಭಟಿಸುತ್ತಿದೆ. ಬ್ರಿಟನ್​ನ ಪಬ್ ಒಂದು ಪುಟಿನ್ ಫೋಟೋವನ್ನು ಟಾಯ್ಲಟ್​ಗಳಲ್ಲಿ ಅಳವಡಿಸಿದೆ. ಈ ಮೂಲಕ ಹೊಸ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದೆ. ಪುಟಿನ್ ನಗುತ್ತಾ ನಿಂತಿರುವ ಫೋಟೋವನ್ನು ಅಲ್ಲಿ ಅಳವಡಿಸಲಾಗಿದೆ. ಈ ಕುರಿತು ಇನ್​ಸ್ಟಾಗ್ರಾಂನಲ್ಲಿ ಪಬ್​ನ ಖಾತೆಯಿಂದ ಫೋಟೋ ಹಂಚಿಕೊಳ್ಳಲಾಗಿದೆ. ‘ಪುರುಷರ ಶೌಚಾಲಯದಲ್ಲಿ ಪುಟಿನ್’ ಎಂದು ಶೀರ್ಷಿಕೆ ಬರೆದು ಪೋಸ್ಟ್ ಹಂಚಿಕೊಳ್ಳಲಾಗಿದೆ.

ಬ್ರಿಟನ್​ನ ಈ ಪಬ್ ಇಂತಹ ವಿಚಾರಕ್ಕೆ ಸುದ್ದಿಯಾಗುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಇತಿಹಾಸವಿದೆ! ರ್ಯಾಗ್ಲಾನ್ ರೋಡ್ ಐರಿಶ್ ಬಾರ್​ನ ಶೌಚಾಲಯದಲ್ಲಿ ಈ ಹಿಂದೆ ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋಟೋ ಅಳವಡಿಸಲಾಗಿತ್ತು. ಅದೂ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಪಬ್ ಹಂಚಿಕೊಂಡ ಫೋಟೋ:

ರಷ್ಯಾ ಹಾಗೂ ಪುಟಿನ್ ವಿರುದ್ಧ ಹೀಗೆ ಪ್ರತಿಭಟನೆ ನಡೆಸುತ್ತಿರುವುದು ಇದು ಹೊಸದೇನೂ ಅಲ್ಲ. ದೊಡ್ಡ ದೊಡ್ಡ ಕಂಪನಿಗಳು ರಷ್ಯಾದ ಮೇಲೆ ನಿರ್ಬಂಧ ಹೇರಿ, ಸೇವೆ ನಿಲ್ಲಿಸುತ್ತಿದ್ದರೆ, ಸಣ್ಣ ಸಣ್ಣ ಅಂಗಡಿಗಳು ಅಥವಾ ಮಾರ್ಕೆಟ್​ಗಳು ರಷ್ಯಾ ಮೂಲದ ವಸ್ತುವನ್ನು ಅಂಗಡಿಯಿಂದ ತೆಗೆದು ಪ್ರತಿಭಟಿಸುತ್ತಿವೆ. ಅಮೇರಿಕಾ ಹಾಗೂ ಕೆನಡಾದ ಬಾರ್​ಗಳಲ್ಲಿ ರಷ್ಯಾದ ವೋಡ್ಕವನ್ನು ಮಾರಾಟದಿಂದ ತೆಗೆದಿದ್ದು ಸುದ್ದಿಯಾಗಿತ್ತು.

ಇದನ್ನೂ ಓದಿ:

Ukraine Russia War Live: ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಉಕ್ರೇನ್​ನಲ್ಲಿ ಸಿಲುಕಿದ್ದ ಪಾಕಿಸ್ತಾನದ ಯುವತಿ

ಒಂದು ದಿನ ಮೊದಲೇ ನೋಡಬಹುದು RRR ಚಿತ್ರ; ರಾಜಮೌಳಿ ಟೀಮ್​ ಮಾಡಿರುವ ಪ್ಲ್ಯಾನ್ ಏನು?

Published On - 9:16 am, Wed, 9 March 22